Home Mangalorean News Kannada News ದಕ ಜಿಲ್ಲಾಡಳಿತ ಕೊರೊನ ನಿಯಂತ್ರಿಸುವಲ್ಲಿ, ಹರಡಲು ಕಾರಣವನ್ನು ಕಂಡು ಹುಡುಕುವಲ್ಲಿ ವಿಫಲ – ವಿನಯ್ ರಾಜ್

ದಕ ಜಿಲ್ಲಾಡಳಿತ ಕೊರೊನ ನಿಯಂತ್ರಿಸುವಲ್ಲಿ, ಹರಡಲು ಕಾರಣವನ್ನು ಕಂಡು ಹುಡುಕುವಲ್ಲಿ ವಿಫಲ – ವಿನಯ್ ರಾಜ್

Spread the love

ದಕ ಜಿಲ್ಲಾಡಳಿತ ಕೊರೊನ ನಿಯಂತ್ರಿಸುವಲ್ಲಿ, ಹರಡಲು ಕಾರಣವನ್ನು ಕಂಡು ಹುಡುಕುವಲ್ಲಿ ವಿಫಲ – ವಿನಯ್ ರಾಜ್

ಮಂಗಳೂರು: ದಕ ಜಿಲ್ಲಾಡಳಿತ ಕೊರೊನ ನಿಯಂತ್ರಿಸುವಲ್ಲಿ ಹಾಗೂ ಕೊರೊನ ಈ ರೀತಿ ಹರಡಲು ಕಾರಣವನ್ನು ಕಂಡು ಹುಡುಕುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ವಿನಯ್ ರಾಜ್ ಹೇಳಿದ್ದಾರೆ

ಯುದ್ಧಗಳಿಂದ ನಾಶವಾದ ದೇಶಗಳು ಮತ್ತೆ ಸೆಟೆದು ನಿಂತ ವಿಚಾರ ಇತಿಹಾಸ ನಮಗೆ ತಿಳಿಸಿಕೊಟ್ಟಿದೆ. ಅದೇ ರೀತಿ ಕೊರೊನದಿಂದ ನಾವು ಸಂಕಷ್ಟಕ್ಕೆ ಸಿಲುಕಿದರೂ ಮತ್ತೆ ನಮ್ಮ ದೇಶ ಸೆಟೆದು ನಿಲ್ಲುವುದರಲ್ಲಿ ಸಂಶಯವಿಲ್ಲ.ಆದರೆ ಜನರ ಜೀವ ಉಳಿದರೆ ಸೆಟೆದು ನಿಲ್ಲಬಹುದು. ಆದರೆ ಜಿಲ್ಲಾಡಳಿತದ ಮೇ 3 ರ ನಿರ್ಧಾರ ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ನಮ್ಮ ಜಿಲ್ಲೆಯಲ್ಲಿ ಈಗಲೂ ೯ ಮಂದಿ ಕೊರೊನ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದರೂ ಜಿಲ್ಲೆ ಒರೆಂಜ್ ವಲಯದಲ್ಲಿದ್ದರೂ ಕೊರೊನ ಮುಕ್ತ ಅಲ್ಲದಿದ್ದರೂ, ಜಿಲ್ಲಾಡಳಿತ ಮೇ 4 ರಿಂದ ಜಿಲ್ಲೆಯಾದ್ಯಂತ ಲಾಕ್ ಡೌನ್ ನಿಯಮ ಸಡಿಲಿಸಿದ್ದು ಬೆಳಿಗ್ಗೆ 7 ರಿಂದ ಸಾಯಂಕಾಲ 7 ವರೆಗೆ ವಾಹನ ಓಡಾಟ ಹಾಗು ಇತರ ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಿದ್ದು ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಿಂದ ಎಲ್ಲ ಹೊರ ಜಿಲ್ಲೆಗಳ ಕಾರ್ಮಿಕರನ್ನು ಈಗಾಗಲೇ ಅವರವರ ಊರಿಗೆ ಕಳುಹಿಸಿಕೊಡಲಾಗಿದೆ. ಹೊರ ರಾಜ್ಯಗಳ ಕಾರ್ಮಿಕರನ್ನು ಕಳುಹಿಸಿಕೊಡಲು ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಕಟ್ಟಡ ಹಾಗು ಹೋಟೆಲ್ ಕಾರ್ಮಿಕರಾಗಿದ್ದಾರೆ. ಅವರು ಹೋದರೆ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗೆ ಹಾಗು ಹೋಟೆಲ್ಗಳಲ್ಲಿ ಕಾರ್ಮಿಕರ ಕೊರತೆ ಕಂಡುಬಂದು ಕಾಮಗಾರಿ ಹಾಗು ಹೋಟೆಲ್ ವ್ಯವಹಾರ ಕುಂಠಿತವಾಗುತ್ತದೆ. ಸಲೂನ್, ಬಾರ್ ಏನ್ ರೆಸ್ಟೋರಂಟುಗಳು, ಹೋಟೆಲುಗಳು, ಸಿನಿಮಾ ಹಾಲ್, ಮಾಲುಗಳು, ಬಾರ್ ಬಾರ್ ಶಾಪ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಬಟ್ಟೆ ಅಂಗಡಿ, ವಾಣಿಜ್ಯ ಸಂಕೀರ್ಣ ಎಸೆನ್ಸಿಯಲ್ ಸರ್ವಿಸ್ ಅಂಗಡಿ ಒರಸ್ತುಪಡಿಸಿ ವ್ಯಾಪಾರ ವಹಿವಾಟುಗಳು , ಜನಸಂದಣಿ ಆಗುವ ವ್ಯಾಪಾರ ಕೇಂದ್ರಗಳು, ಯಾವುದೂ ತೆರೆಯುವ ಹಾಗಿಲ್ಲ. ಬಸ್ ಸಂಚಾರ ಇಲ್ಲ. ಹೀಗಿರುವಾಗ ಮತ್ತೆ ಯಾಕೆ ಜಿಲ್ಲಾಡಳಿತ ಬೆಳಿಗ್ಗೆ 7 ರಿಂದ ಸಾಯಂಕಾಲ 7 ರವರಿಗೆ ಸಡಿಲಿಕೆ ಮಾಡಿದೆ?. ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೊಟ್ಟಲ್ಲಿ ಆರ್ಥಿಕ ಚಟುವಟಿಕೆಯ ಜೊತೆಯಾಗಿ ಕೊರೊನ ತಡೆಗಟ್ಟುವಲ್ಲಿ ಪರಿಣಾಮಕಾರಿ ಹೆಜ್ಜೆ ಇಟ್ಟಂತೆ ಆಗುತ್ತಿತ್ತು. ಪಕ್ಕದ ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಇದ್ದರೂ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಸಡಿಲಿಕೆ ಕೊಟ್ಟಿರುತ್ತಾರೆ. ನಮ್ಮ ಉಸ್ತುವಾರಿ ಮಂತ್ರಿ ಅದೇ ಜಿಲ್ಲೆಯವರಾಗಿದ್ದು ಅವರಿಗೆ ಗೊತ್ತಾಗಲಿಲ್ಲವೇ. ಇಂತಹ ನಿರ್ಲಕ್ಷ ನಡೆಯಿಂದ ನಮ್ಮ ಜಿಲ್ಲೆ ಮಗದೊಮ್ಮೆ ಕೆಂಪು ವಲಯಕ್ಕೆ ಹೋಗಲು ದಿನಗಳು ದೂರವಿಲ್ಲ. ಜಿಲ್ಲಾಡಳಿತ ಕೊರೊನ ನಿಯಂತ್ರಿಸುವಲ್ಲಿ ಹಾಗು ಕೊರೊನ ಈ ರೀತಿ ಹರಡಲು ಕಾರಣವನ್ನು ಕಂಡು ಹುಡುಕುವಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿಗಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಇಲ್ಲಿಯ ಸಂಸದರು ಶಾಸಕರುಗಳು ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಬಿಡಲಿಲ್ಲ. ಈ ಕಾರಣದಿಂದ ನಮ್ಮ ಜಿಲ್ಲೆ ಇನ್ನೂ ಕೂಡ ಕೊರೊನ ಮುಕ್ತ ಆಗಲಿಲ್ಲ ಹಾಗು ಲೊಕ್ಡೌನ್ ಸಂದರ್ಭದಲ್ಲೇ ಕೊರೊನ ಕ್ಸೇಸ್ ಹೆಚ್ಚಿಗೆ ಆಗಿತ್ತು.

2. ಕೊರೊನವನ್ನು ಎದುರಿಸಲು ಲಾಕ್ ಡೌನ್ ಮಾಡಲಾಯಿತು. ಜನ ಅದಕ್ಕೆ ಸ್ಪಂದಿಸಿದರು. ಚಪ್ಪಾಳೆ ಜಾಗಟೆ ಹೊಡೆದರು, ದೀಪ ಹಚ್ಚಿದರು. ಸರಕಾರ ನೀಡಿದ ಆದೇಶದಂತೆ ಜನ ಮನೆಯ ಒಳಗೆ ಕಳೆದರು. ಆರ್ಥಿಕವಾಗಿ ಜನ ತೊಂದರೆಗೆ ಬಿದ್ದರು. ಸರಕಾರ ಸ್ಪಂದನೆಗೆ ಬರುತ್ತದೆ ಎಂಬ ಆಶಾ ಭಾವನೆ ಇತ್ತು. ಆದರೆ ಸರಕಾರದ ನಡೆ ಜನರ ನೀರೀಕ್ಷಗೆ ವಿರುದ್ಧವಾಗಿತ್ತು. ಮಧ್ಯಮ ವರ್ಗ, ಕೆಲ ಮಧ್ಯಮ ವರ್ಗ, ಬಡ ವರ್ಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದರು. ಜನ ಸರಕಾರದಿಂದ ನಿರೀಕ್ಷೆ ಮಾಡಿದ್ದು ಆಹಾರ. ಆದರೆ ಸರಕಾರ ಬಿ ಪಿ ಎಲ್ ಹಾಗು ಎ ಪಿ ಎಲ್ ಕಾರ್ಡುದಾರರಿಗೆ ಬರೇ ತಲಾ ೫ ಕೆಜಿ ಅಕ್ಕಿ ಅಲ್ಲದೆ ಏನನ್ನು ಕೊಟ್ಟಿಲ್ಲ. ಇಂತಹ ಸಂಧರ್ಭದಲ್ಲಿ ಆಹಾರದ ಕಿಟ್ಟನ್ನು ಕೊಡುವುದು ಸರಕಾರದ ಜವಾಬ್ಧಾರಿಯಾಗಿದೆ. ಜನರು ಕೊಟ್ಟ ತೆರಿಗೆ ಹಣ ಎಲ್ಲಿ ಹೋಗಿದೆ. ಸಂಕಷ್ಟ ಕಾಲದಲ್ಲಿ ಹೇಗೆ ಜನರಿಗೆ ಸ್ಪಂದಿಸ ಬೇಕಿದೆ ಎಂದು ಯಡಿಯೂರಪ್ಪ ಸರಕಾರ ಪಕ್ಕದ ಕೇರಳ ರಾಜ್ಯವನ್ನು ನೋಡಿ ಕಲಿಯಲಿ. ಅಲ್ಲಿ ಸರಕಾರ ಎಲ್ಲರಿಗು ಆಹಾರದ ಕಿಟ್ಟನ್ನು ಮನೆಗೆ ತಲುಪಿಸುತ್ತಿದೆ.

3. ದಕ್ಷಿಣ ಕನ್ನಡ ಜಿಲ್ಲಾಡಳಿತ ರೇಷನ್ ಕಿಟ್ಟನ್ನು ಕೆಲವು ಆಯ್ದಕಡೆ ಕೊಡಲು ತಯಾರು ಮಾಡಲು ಮಂಗಳೂರಿನ ಒಂದು ಏಜೆನ್ಸಿಗೆ ನೀಡಿತ್ತು. ಆದರೆ ಪಾರದರ್ಶಕತೆಯನ್ನು ಪಾಲಿಸಿಲ್ಲ. ಆಹಾರ ಕಿಟ್ಟನ್ನು ತಯಾರಿಸಲು ಟೆಂಡರ್ ಕರೆಯದೆ ನೀಡಲಾಗಿದ್ದು ಇದರಲ್ಲಿ ಜಿಲ್ಲಾಡಳಿತ ಮಂಗಳೂರು ಸಂಸದರು ಹಾಗು ಮಂಗಳೂರು ದಕ್ಷಿಣ ಮತ್ತು ಉತ್ತರ ಶಾಸಕರ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ. ಕೋಟ್ಯಂತರ ರೂಪಾಯಿಯ ಅವ್ಯವಹಾರ ನಡೆದಿದೆ ಎಂಬ ಗುಮಾನಿಯಿದೆ. ಮಾತ್ರವಲ್ಲದೆ ಮಂಗಳೂರು ದಕ್ಷಿಣ ಹಾಗು ಉತ್ತರ ವಿಧಾನಸಭಾ ಶಾಸಕರು ಅವರ ಹೆಸರಿನಲ್ಲಿ ಆಹಾರದ ಕಿಟ್ಟನ್ನು ಮಾಡಿ ಅವರ ಲೇಬಲ್ ಹಾಕಿ ವಿತರಿಸಿದ್ದು ಇದಕ್ಕೆ ಸರಕಾರದ ಹಣ ದುರುಪಯೋಗಪಡಿಸಲಿಗಿದೆ ಎಂಬ ಆರೋಪವಿದೆ. ಜಿಲ್ಲಾಡಳಿತಕ್ಕೆ ಆಹಾರದ ಕಿಟ್ಟನ್ನು ಮಾಡಿದ ಅದೇ ಏಜನ್ಸಿ ಸಂಸದರಿಗೆ ಹಾಗು ಶಾಸಕರಿಗೆ ಆಹಾರದ ಕಿಟ್ಟನ್ನು ತಯಾರಿಸಿದೆ. ಎಲ್ಲ ಕಿಟ್ಟುಗಳು ಮ ನ ಪ ಕಟ್ಟಡದ ಮುಂಭಾಗದಲ್ಲಿರುವ ಕಟ್ಟದಲ್ಲಿ ತಯಾರಿಸಲಾಗಿದೆ ಹಾಗು ಮ ನ ಪ ಸದಸ್ಯರಾದಿಯಾಗಿ ಎಲ್ಲರಿಗು ಅಲ್ಲಿಂದ ಹಂಚಲಾಗಿತ್ತು. ಜಿಲ್ಲಾಡಳಿತ ಆಹಾರ ಸಾಮಗ್ರಿ ಖರೀಧಿಸುವಾಗ ಕೆ ಪಿ ಟಿ ಟಿ ನಿಯಮವನ್ನು ಉಲ್ಲಂಘಿಸಲಾಗಿದೆ. ಉಸ್ತುವಾರಿ ಸಚಿವರು ನಡೆ ಕೂಡ ಸಂಶಯಕ್ಕೆ ಎದೆ ಮಾಡಿ ಕೊಟ್ಟಿದೆ. ಆದುದರಿಂದ ಇದನ್ನು ಲೋಕಾಯುಕ್ತರಿಂದ ತನಿಖೆ ಮಾಡಿಸ ಬೇಕು ಎಂದು ಜಿಲ್ಲಾ ಕಾಂಗ್ರೆಸ್ ಆಗ್ರಹಿಸುತ್ತದೆ.


Spread the love

Exit mobile version