Home Mangalorean News Kannada News ದಕ ಜಿಲ್ಲಾಧಿಕಾರಿ ವರ್ಗಾವಣೆಯ ವಿಚಾರದಲ್ಲಿ ಖಾದರ್ ರಾಜಕೀಯ ಮಾಡುತ್ತಿದ್ದಾರೆ – ಸಚಿವ ಕೋಟ

ದಕ ಜಿಲ್ಲಾಧಿಕಾರಿ ವರ್ಗಾವಣೆಯ ವಿಚಾರದಲ್ಲಿ ಖಾದರ್ ರಾಜಕೀಯ ಮಾಡುತ್ತಿದ್ದಾರೆ – ಸಚಿವ ಕೋಟ

Spread the love

ದಕ ಜಿಲ್ಲಾಧಿಕಾರಿ ವರ್ಗಾವಣೆಯ ವಿಚಾರದಲ್ಲಿ ಖಾದರ್ ರಾಜಕೀಯ ಮಾಡುತ್ತಿದ್ದಾರೆ – ಸಚಿವ ಕೋಟ

ಮಂಗಳೂರು: ದಕ ಜಿಲ್ಲಾಧಿಕಾರಿ ವರ್ಗಾವಣೆಯ ವಿಚಾರದಲ್ಲಿ ಮಾಜಿ ಸಚಿವ ಖಾದರ್ ರಾಜಕೀಯ ಮಾಡುತ್ತಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ಸರಕಾರ ಮಾಡಿದ ವರ್ಗಾವಣೆಯನ್ನು ಖಾದರ್ ರಾಜಕೀಯಗೊಳಿಸಿದ್ದು ದುರದೃಷ್ಠಕರ. ಯಾವುದೇ ಆರೋಪಿಗಳನ್ನು ರಕ್ಷಣೆ ಮಾಡಲು ಇದು ಖಾದರ್ ಕಾಲವಲ್ಲ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ದಕ ಜಿಲ್ಲಾ ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ಸರಕಾರ ರಾಜಕೀಯ ಮಾಡಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು ಕಾಲಕಾಲಕ್ಕೆ ರಾಜ್ಯ ಸರಕಾರ ಮಾಡುವ ವರ್ಗಾವಣೆಯ ಅಡಿಯಲ್ಲಿ ದಕ ಜಿಲ್ಲಾ ಜಿಲ್ಲಾಧಿಕಾರಿಗಳ ವರ್ಗಾವಣೆ ನಡೆದಿದೆ. ಅದಕ್ಕೆ ರಾಜಕೀಯ ಲೇಪವನ್ನು ಬಳಸಿ ಮಾಜಿ ಸಚಿವ ಯು ಟಿ ಖಾದರ್ ಅವರು ಇದಕ್ಕೆ ರಾಜಕೀಯ ಲೇಪವಿದೆ ಎಂದು ಅಪಾದನೆ ಮಾಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗೆ ಯಾರು ಕೊಲೆ ಬೆದರಿಕೆ ಹಾಕಿದ್ದಾರೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳನ್ನು ಹೇಳಿದ್ದಾರೆ.

ಯು ಟಿ ಖಾದರ್ ಅವರು ಕೂಡಲೇ ತಮ್ಮ ಮಾತುಗಳನ್ನು ವಾಪಾಸು ಪಡೆಯಬೇಕು ಹಾಗೂ ಸ್ವಾಭಾವಿಕವಾಗಿ ಕಾಲಕಾಲಕ್ಕೆ ರಾಜ್ಯ ಸರಕಾರ ಯಾವ ರೀತಿಯ ಆಡಳಿತಾತ್ಮಕ ವರ್ಗಾವಣೆ ಮಾಡಲಾಗುತ್ತದೋ ಅದರ ಅಡಿಯಲ್ಲಿಯೇ ಜಿಲ್ಲಾಧಿಕಾರಿಗಳ ವರ್ಗಾವಣೆ ನಡೆದಿದೆ. ಅಲ್ಲದೆ ಅವರ ಮೇಲೆ ಯಾರು ಬೆದರಿಕೆ ಹಾಕಿದ್ದಾರೊ ಅಂತಹವರ ಮೇಲೆ ಗೃಹ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು ಯಾವುದೇ ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ದಕ ಜಿಲ್ಲೆಯಲ್ಲಿ ಯು ಟಿ ಖಾದರ್ ಕಾಲದಲ್ಲಿ ಪೊಲೀಸರಿಗೆ ಬೆದರಿಕೆ ಹಾಕುವಂತಹ, ಪೊಲೀಸರ ಮೇಲೆ ಹಲ್ಲೆ ಮಾಡುವಂತಹ, ಗೂಂಡಾಗಿರು ಮಾಡುವಂತಹ ಹಲವು ಪ್ರಕರಣಗಳು ನಡೆದಿವೆ. ಆದರೆ ಇವತ್ತು ಖಾದರ್ ಕಾಲವಲ್ಲ ಎನ್ನುವುದನ್ನು ಅವರು ನೆನಪಿಸಿಕೊಳ್ಳುವಂತಹ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.


Spread the love

Exit mobile version