Home Mangalorean News Kannada News ದಕ ಜಿಲ್ಲೆಯಲ್ಲಿ ಈ ವರೆಗೆ  ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ – ಜಿಲ್ಲಾಧಿಕಾರಿ ಸಿಂಧೂ ರೂಪೇಶ್

ದಕ ಜಿಲ್ಲೆಯಲ್ಲಿ ಈ ವರೆಗೆ  ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ – ಜಿಲ್ಲಾಧಿಕಾರಿ ಸಿಂಧೂ ರೂಪೇಶ್

Spread the love

ದಕ ಜಿಲ್ಲೆಯಲ್ಲಿ ಈ ವರೆಗೆ  ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ – ಜಿಲ್ಲಾಧಿಕಾರಿ ಸಿಂಧೂ ರೂಪೇಶ್

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 437. ಯಲ್ಲ ಪ್ರಯಾಣಿಕರನ್ನು ಮತ್ತು ಎನ್.ಎಮ್.ಪಿ.ಟಿಯಲ್ಲಿ 45 ಜನರನ್ನು ತಪಾಸಣೆಗೆ ಒಳಪಡಿಸಿದ್ದು ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್ ರೋಗದ ಲಕ್ಷಣಗಳು ಕಂಡು ಬರುವುದಿಲ್ಲ.

ಫೆಬ್ರವರಿ 1 ರಿಂದ ಈ ವರೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 25351 ಪ್ರಯಾಣಿಕರನ್ನು ಮತ್ತು ಜನವರಿ 23 ರಿಂದ ಈ ವರೆಗೆ ಎನ್.ಎಮ್.ಪಿ.ಟಿಯಲ್ಲಿ ಒಟ್ಟು 5358 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಜಿಲ್ಲೆಯಲ್ಲಿ ಈ ವರೆಗೆ ಖಚಿತ ಕೊರೊನಾ ವೈರಸ್ ಪ್ರಕರಣಗಳು ಧೃಡೀಕರಣಗೊಂಡಿಲ್ಲ.

ವಿಭಾಗೀಯ ಜಂಟಿ ನಿರ್ದೇಶಕರು,ಮೈಸೂರು ವಿಭಾಗದ ಡಾ ಪುಷ್ಪಲತಾ ಬಿಎಸ್ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಡಿರುವ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿರುತ್ತಾರೆ.

ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಗಂಟಲು ನೋವು ಕಂಡು ಬಂದಲ್ಲಿ ಕೂಡಲೇ ಉಚಿತ ಕರೆ ಸಂಖ್ಯೆ 104/1077 ದೂರವಾಣಿ ಸಂಖ್ಯೆ 0824-2442590 ಗೆ ಕರೆ ಮಾಡುವುದು ಅಥವಾ ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.  ಸಾರ್ವಜನಿಕರ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದ.

ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಪಡದೇ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.


Spread the love

Exit mobile version