Spread the love
ದಕ ಜಿಲ್ಲೆಯಲ್ಲಿ ಒಂದೇ ದಿನ 30 ಕೋವಿಡ್ ಪಾಸಿಟಿವ್ ದೃಢ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ ಕೊರೋನ ಸ್ಫೋಟವಾಗಿದ್ದು, ಒಂದೇ ದಿನ ಬರೋಬ್ಬರಿ 30 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ. 17 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಸೌದಿ ಅರೇಬಿಯಾದಿಂದ ಬಂದ 25 ಮಂದಿ ಮತ್ತು ಮಹಾರಾಷ್ಟ್ರದಿಂದ ಬಂದ ಐವರಲ್ಲಿ ಸೋಂಕು ಪತ್ತೆಯಾಗಿದೆ.
ಶನಿವಾರ ಸೋಂಕು ಪತ್ತೆಯಾದವರ ಪೈಕಿ ಒಂದು ವರ್ಷದ ಮೂರು ಮಕ್ಕಳು, ಎರಡು ವರ್ಷದ ಇಬ್ಬರು ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಐದು ವರ್ಷದ ಕೆಳಗಿನ ಒಟ್ಟು ಏಳು ಮಕ್ಕಳು, ಎಂಟರಿಂದ 14 ವರ್ಷದೊಳಗಿನ ಮೂರು ಮಕ್ಕಳು ಮತ್ತು ಆರು ಮಂದಿ ಗರ್ಭಿಣಿಯರು ಸೇರಿದ್ದಾರೆ.
Spread the love