Spread the love
ದಕ ಜಿಲ್ಲೆಯಲ್ಲಿ ಕೊರೋನಾ ಗೆ ಮತ್ತೊಂದು ಬಲಿ – ಮೃತರ ಸಂಖ್ಯೆ 26ಕ್ಕೆ ಏರಿಕೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಗೆ ಸಾವನಪ್ಪುವವರ ಸಂಖ್ಯೆ ಮುಂದುವರೆದಿದ್ದು ಮಂಗಳವಾರ ಜುಲಾಯಿ ೭ ರಂದು ಇನ್ನೊಂದು ಮಹಿಳೆ ಸಾವನಪ್ಪುದವರೊಂದಿಗೆ ಜಿಲ್ಲೆಯಲ್ಲಿ ಕೋರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ.
ಉಳ್ಳಾಲದ ಆಜ಼ಾದ್ ನಗರದ ಸುಮಾರು 62 ವರ್ಷ ವಯಸ್ಸಿನ ಮಹಿಳೆಯೊಬ್ಬರು ವೆನ್ಲೊಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರು ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜುಲಾಯಿ ೭ ರಂದು ಬೆಳಿಗ್ಗೆ ೬೨ ವರುಷದ ವ್ಯಕ್ತಿಯೊಬ್ಬರು ಕೊವಿಡ್ ಸೊಂಕಿಗೆ ಬಲಿಯಾಗಿದ್ದರು. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 26ಕ್ಕೇರಿದೆ.
Spread the love