Home Mangalorean News Kannada News ದಕ ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ – ಬಂಟ್ವಾಳದ ಮಹಿಳೆಗೆ ಸೋಂಕು ದೃಢ

ದಕ ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ – ಬಂಟ್ವಾಳದ ಮಹಿಳೆಗೆ ಸೋಂಕು ದೃಢ

Spread the love
RedditLinkedinYoutubeEmailFacebook MessengerTelegramWhatsapp

ದಕ ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ – ಬಂಟ್ವಾಳದ ಮಹಿಳೆಗೆ ಸೋಂಕು ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಬಂಟ್ವಾಳ ತಾಲೂಕಿನ 75 ವರ್ಷದ ವೃದ್ದೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಏಪ್ರಿಲ್ 22 ರಂದು 75 ವರ್ಷದ ಹೆಂಗಸು ಖಾಸಗಿ ಆಸ್ಪತ್ರೆಯಿಂದ ಇವರನ್ನು ವೆನ್ಲಾಕ್ ಆಸ್ಪತ್ರೆಯ ಐಸಿಯು ನಲ್ಲಿ ದಾಖಲಾಗಿಸಿದ್ದು, ಇವರ ಗಂಟಲು ದ್ರವ ಪರೀಕ್ಷೆಯು ಸ್ವೀಕೃತವಾಗಿದ್ದು ಇವರಿಗೆ ಸೋಂಕು ಇರುವುದು ದೃಢ ಪಟ್ಟಿರುತ್ತದೆ.

ಸದರಿ ಮಹಿಳೆ ಏಪ್ರಿಲ್ 19 ರಂದು ರಂದು ಮೃತರಾಗಿರುವ ರೋಗಿ ಸಂಖ್ಯೆ ಪಿ-390 ರವರ ಹತ್ತಿರದ ಸಂಬಂಧಿಯಾಗಿರುತ್ತಾರೆ. ಇವರು ಕಳೆದ ಏಪ್ರಿಲ್ 18 ರಿಂದ ಪಾರ್ಶ್ವವಾಯುಗೆ (Stroke) ಸಂಬಂಧಿಸಿದಂತೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಎಂಬುದಾಗಿ ತಿಳಿದುಬಂದಿರುತ್ತದೆ. ಪ್ರಸ್ತುತ ಮಹಿಳೆಯನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version