Spread the love
ದಕ ಜಿಲ್ಲೆಯಲ್ಲಿ ಸೋಮವಾರ 131 ಮಂದಿಯಲ್ಲಿ ಕೊರೋನಾ ಪಾಸಿಟಿವ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸ್ಪೋಟ ಮುಂದುವರೆದಿದ್ದು, ಸೋಮವಾರ 131 ಮಂದಿಯಲ್ಲಿ ಪಾಸಿಟಿವ್ ದೃಢಗೊಂಡಿದೆ.
ಸೋಮವಾರ ಪತ್ತೆಯಾದ ಸೋಂಕಿತರಲ್ಲಿ 16 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 63 ಮಂದಿಗೆ ಐಎಲ್ ಐ, 10 ಮಂದಿಗೆ ಸಾರಿ ಯಿಂದಾಗಿ ಸೋಂಕು ದೃಢಗೊಂಡಿದೆ. 4 ಮಂದಿ ಅಂತರಾಷ್ಟ್ರೀಯ ಪ್ರಯಾಣದಿಂದ ಸೋಂಕು ದೃಢಗೊಂಡರೆ 38 ಮಂದಿಯ ಟ್ರಾವೆಲ್ ಹಿಸ್ಟರಿಯನ್ನು ಪತ್ತೆಹಚ್ಚಲಾಗುತ್ತಿದೆ.
ಎಲ್ಲಾ ಸೋಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Spread the love