Home Mangalorean News Kannada News ದಡಾರ – ರುಬೆಲ್ಲಾ 4.23 ಲಕ್ಷ ಮಕ್ಕಳಿಗೆ ಚುಚ್ಚು ಮದ್ದು

ದಡಾರ – ರುಬೆಲ್ಲಾ 4.23 ಲಕ್ಷ ಮಕ್ಕಳಿಗೆ ಚುಚ್ಚು ಮದ್ದು

Spread the love

ದಡಾರ – ರುಬೆಲ್ಲಾ 4.23 ಲಕ್ಷ ಮಕ್ಕಳಿಗೆ ಚುಚ್ಚು ಮದ್ದು

ಮ0ಗಳೂರು : ದಕ್ಷಿಣ ಕನ್ನಡ ಫೆಬ್ರವರಿ 7 ರಿಂದ ಮಾ. 1 ರವರಗೆ ದಡಾರ – ರುಬೆಲ್ಲಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಜಿಲ್ಲೆಯ 2551 ಶಾಲೆಗಳಲ್ಲಿ, 2104 ಅಂಗನವಾಡಿ ಕೇಂದ್ರಗಳಲ್ಲಿ ನಡೆಸಿ 9 ರಿಂದ 15 ವರ್ಷದೊಳಗಿನ 4,23,970 ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದೆ.

ಮಾರ್ಚ್ 2 ರಿಂದ 8 ರವೆರೆಗೆ ಸ್ವೀಪಿಂಗ್ ಚಟುವಟಿಕೆ ನಡೆಯಲಿದ್ದು, ಈ ಅಭಿಯಾನದಲ್ಲಿ ನಾನಾ ಕಾರಣಗಳಿಂದ ಚುಚ್ಚುಮದ್ದು ಹಾಕಿಸಿಕೊಳ್ಳದ 9 ರಿಂದ 15 ವರ್ಷದೊಳಗಿನ ಮಕ್ಕಳ ಪೋಷಕರು ಹತ್ತಿರದ ಸರಕಾರಿ ಆಸ್ಪತ್ರೆಗಳು, ನಗರ ಆರೋಗ್ಯ ಕೇಂದ್ರ ಹಾಗೂ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ತಮ್ಮ ಮಕ್ಕಳಿಗೆ ಚುಚ್ಚುಮದ್ದು ಹಾಕಿಸಿಕೊಳ್ಳಬಹುದು. ಪ್ರತಿದಿನ ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಚುಚ್ಚುಮದ್ದು ನೀಡಲಾಗುವುದು.

ದಡರ ರುಬೆಲ್ಲಾ ಅಭಿಯಾನದಲ್ಲಿ ಸಹಕರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಮಕ್ಕಳ ತಜ್ಞರು, ವೈದ್ಯಕೀಯ ಮಹಾವಿದ್ಯಾಲಯದ ಪ್ರತಿನಿಧಿಗಳು, ವಕ್ಫ್ ಮಂಡಳಿ, ಐಎಂಎ, ಏಎಪಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು, ಮಹಾನಗರ ಪಾಲಿಕೆ, ಪುರಸಭೆ, ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಅಧಿಕಾರಿಯವರಿಗೆ ಹಾಗೂ ಸಿಬ್ಬಂದಿಯವರಿಗೆ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.


Spread the love

Exit mobile version