ದನ ಕಳ್ಳತನ ಆರೋಪ: ನಾಲ್ವರು ಆರೋಪಿಗಳ ಬಂಧನ
ಕುಂದಾಪುರ: ಕುಂದಾಪುರ: ದನ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುಲ್ವಾಡಿ ನಿವಾಸಿ ಮೊಹಮ್ಮದ್ ಹನೀಫ್, ಅಬುಬಕ್ಕರ್, ಮೊಹಮ್ಮದ್ ಸಿನಾನ್, ರಿಜ್ವಾನ್ @ ದಸ್ತಗೀರ್ ಬಂಧಿತ ಆರೋಪಿಗಳು.
ಸಪ್ಟೆಂಬರ್ 28ರಂದು ಬೆಳಿಗ್ಗೆ ಮನೆಯ ಪಕ್ಕದ ಹಾಡಿಯಲ್ಲಿ ಮೇಯಲು ಬಿಟ್ಟಿದ್ದ ದನಗಳಲ್ಲಿ ಒಂದು ದನವನ್ನು ನಾಲ್ವರು ಆರೋಪಿಗಳು ಎಳೆದು ತಂದು ಆಟೋ ರಿಕ್ಷಾದಲ್ಲಿ ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ತುಂಬುತ್ತಿರುವುದ್ದರು. ಇದನ್ನು ಗಮನಿಸಿದ ಮನೆಯವರು ಕೂಗುತ್ತಾ ಓಡಿ ಬಂದಿದ್ದರಿಂದ ಆರೋಪಿಗಳು ಆಟೋರಿಕ್ಷಾ ಹತ್ತಿ ಪರಾರಿಯಾಗಿದ್ದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಆರಂಭಿಸಿದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಭೀಮಾಶಂಕರ ಸಿನ್ನೂರ ಮತ್ತವರ ತಂಡ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲಿ ಓರ್ವನಾದ ಮೊಹಮ್ಮದ್ ಹನೀಫ್ ಗುಲ್ವಾಡಿ ಎಂಬಾತನನ್ನು ಸಪ್ಟೆಂಬರ್ 29 ರಂದು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಾದ ಗುಲ್ವಾಡಿ ಗ್ರಾಮದ ನಿವಾಸಿಗಳಾದ ಅಬುಬಕ್ಕರ್, ಆತನ ಮಗ ಮೊಹಮ್ಮದ್ ಸಿನಾನ್ ಹಾಗೂ ರಿಜ್ವಾನ್ ಎಂಬವರನ್ನು ಅಕ್ಟೋಬರ್ 3 ರಂದು ವಶಕ್ಕೆ ಪಡೆದು ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|ಅರುಣ್ ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ದಲಿಂಗಪ್ಪ, ಪರಮೇಶ್ವರ ಹೆಗ್ಡೆ ನಿರ್ದೇಶನದಂತೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ ಯು ಹಾಗೂ ಪೋಲಿಸ್ ವೃತ್ತ ನಿರೀಕ್ಷಕರಾದ ಜಯರಾಮ್ ಡಿ ಗೌಡ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಭೀಮಾಶಂಕರ ಸಿನ್ನೂರ ಹಾಗೂ ಸಿಬ್ಬಂದಿಗಳಾದ ರಾಜು ಬಿ. ಕಿಶನ್ ಗೌಡ, ಶ್ರೀಧರ್ ಪಾಟೀಲ್, ಮಂಜುನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.