Home Mangalorean News Kannada News ದಮಾಮ್: ಇಂಡಿಯಫ್ರಟರ್ನಿಟಿ ಫೋರಮ್ ವತಿಯಿಂದ ಇಫ್ತಾರ್ ಕೂಟ

ದಮಾಮ್: ಇಂಡಿಯಫ್ರಟರ್ನಿಟಿ ಫೋರಮ್ ವತಿಯಿಂದ ಇಫ್ತಾರ್ ಕೂಟ

Spread the love

ದಮಾಮ್,:ರಮದಾನ್ ತಿಂಗಳು ಇಸ್ಲಾಮೀ ಚರಿತ್ರೆಯಲ್ಲಿ ಹಲವು ಬದಲಾವಣೆ, ಕ್ರಾಂತಿ, ಸುಧಾರಣೆಗಳಿಗೆ ಮುನ್ನುಡಿ ಬರೆದ ತಿಂಗಳಾಗಿದ್ದು, ಅಂತಹ ಘಟನೆಗಳನ್ನು ಮೆಲುಕು ಹಾಕುತ್ತಾ ಒಂದು ಅತ್ಯುತ್ತಮ ಸಮುದಾಯವನ್ನು ರೂಪಿಸುವಲ್ಲಿ ರಮದಾನ್ತಿಂಗಳು ನಮಗೆ ಪ್ರೇರಕವಾಗಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಅವರು ಕರೆ ನೀಡಿದರು.

ಅವರು ಇಂಡಿಯ ಫ್ರಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ವಿಭಾಗದ ವತಿಯಿಂದ ದಮಾಮ್, ಅಲ್ ಹಸ, ಖೋಬರ್ ಹಾಗೂ ಜುಬೈಲ್ ಮುಂತಾದ ಕಡೆಗಳಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಅತ್ಯುತ್ತಮ ಸಮುದಾಯದ ನಿರ್ಮಾಣವು ಭಾರತದ ದೇಶದಲ್ಲಿ ಕಾಲದ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಅತ್ಯಂತ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಸಂಪೂರ್ಣ ಸಬಲೀಕರಣದ ಹಾದಿಯಲ್ಲಿ  ಸಂಘಟನೆಯು ಮುನ್ನಡೆಯುತ್ತಿದೆ. ಸುಮಾರು 25 ವರ್ಷಗಳ ಹಿಂದೆ ಒಂದು ಸಂಘಟನೆಯಾಗಿ ಹುಟ್ಟಿಕೊಂಡ ಪಾಪ್ಯುಲರ್ ಫ್ರಂಟ್, ಇಂದು ದೇಶದಲ್ಲಿ ಸಾಮಾಜಿಕ ಚಳವಳಿಯಾಗಿ ದೇಶದ ಉದ್ದಗಲಕ್ಕೂ ವ್ಯಾಪಿಸಿ ಜನಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಶಾಫಿ ತಿಳಿಸಿದರು. ಸಂಘಟನೆಯು ದೇಶಾದ್ಯಂತ ಹಮ್ಮಿಕೊಂಡಿರುವ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳ ಕುರಿತು ಅವರು ಜನರಿಗೆ ವಿವರಿಸಿದರು.

ವಿವಿಧ ಕಡೆಗಳಲ್ಲಿ ನಡೆದ ಇಫ್ತಾರ್ಕೂಟದ ವೇದಿಕೆಯಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಮ್ನ ಈಸ್ಟರ್ನ್ ಪ್ರೊವಿನ್ಸ್ ಅಧ್ಯಕ್ಷ ಇಮ್ತಿಯಾಜ಼್, ಕಾರ್ಯದರ್ಶಿಗಳಾದ ಮುಹಮ್ಮದ್ ಆಶ್ರಫ್, ಮುಹಮ್ಮದ್ ಇರ್ಶಾದ್, ದಮಾಮ್ ಘಟಕದ ಅಧ್ಯಕ್ಷ ಅಝರುದ್ದೀನ್, ಜುಬೈಲ್ಘಟಕದ ಅಧ್ಯಕ್ಷ ಅಬೂಸ್ವಾಲಿ, ಇಂಡಿಯನ್ ಸೋಶಿಯಲ್ ಫೋರಮ್ನ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಫಯಾಜ಼್, ಉದ್ಯಮಿಫತೇಹ್ ಅಲ್ ಜುಬೈಲ್ ಮ್ಯಾನೇಜಿಂಗ್ಡೈರೆಕ್ಟರ್ ಮುಷ್ತಾಖ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.

 


Spread the love

Exit mobile version