ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಆಗ್ರಹಿಸಿ ಹಕ್ಕೊತ್ತಾಯ ಸಭೆ
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಸಾಮಾಜಿಕ ಮತ್ತು ಮಾಧ್ಯಮ ಸಮಿತಿ ವತಿಯಿಂದ ದಲಿತ ಕ್ರೈಸ್ತರನ್ನು ಕೂಡ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಕ್ಕೊತ್ತಾಯ ಸಭೆ ಜರುಗಿತು.
ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಡೆನಿಸ್ ಮೊರಾಸ್ ಪ್ರಭು ಮಾತನಾಡಿ ಭಾರತ ಸರಕಾರ ಆದಷ್ಟು ಶೀಘ್ರದಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಕಲ್ಯಾನ್ಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ ವಿನ್ಸೆಂಟ್ ಆಳ್ವಾ ಅವರಿಗಿದ್ದದ್ದು ನಮಗ್ಯಾಕೆ ಇಲ್ಲ ಇದೇ ಪ್ರಶ್ನೆಯನ್ನು ಇಂದು ಭಾರತದಾದ್ಯಂತ ಇರುವ ಎಲ್ಲಾ ಕ್ರೈಸ್ತರು ದಲಿತ ಕ್ರೈಸ್ತರ ಪರವಾಗಿ ಕೇಳುತ್ತಿದ್ದಾರೆ, ಮಾತ್ರವಲ್ಲದೆ ಸಂವಿಧಾನದಲ್ಲಿ ಇರುವಂತಹ ಹಕ್ಕು ಕೇವಲ ಕೆಲವೊಂದು ವರ್ಗಕ್ಕೆ ಸೇರಿದ ದಲಿತರಿಗೆ, ಪರಿಶಿಷ್ಟ ಜಾತಿ, ಪಂಗಡಕ್ಕೆ ಮಾತ್ರವಲ್ಲದೆ ನಮಗೂ ಕೂಡ ಸಿಗಬೇಕು ಎಂದು ಅಗಸ್ಟ್ 10ನ್ನು ದಲಿತ ಕ್ರೈಸ್ತರ ಪರವಾಗಿ ಕರಾಳ ದಿನವಾಗಿ ಆಚರಿಸಿ ಹಕ್ಕೊತ್ತಾಯ ಮಾಡುತ್ತಿದ್ದೇವೆ.
ದಲಿತರಿಗೆ ಸಿಗಬೇಕಾದಂತ ಸೌಲಭ್ಯವನ್ನು ಸಿಖ್ಕರಿಗೆ, ಬೌದ್ಧರಿಗೆ ನೀಡಲಾಗಿದೆ ಆದರೆ ಈ ಸೌಲಭ್ಯವನನ್ನು ದಲಿತ ಕ್ರೈಸ್ತರಿಗೆ ನೀಡುವಲ್ಲಿ ಸರಕಾರಕ್ಕಿರುವ ತೊಡಕಾದರೂ ಏನು. ಕೇವಲ ಹಿಂದೂ ಧರ್ಮದಲ್ಲಿರುವವರು ಅಥವಾ ಆ ಧರ್ಮವನ್ನು ಆಲಂಗಿಸಿದವರು, ಸಿಖ್ಕ್ ಧರ್ಮವನ್ನು ಆಲಂಗಿಸಿದವರು, ಹಾಗೂ ಬೌದ್ಧ ಧರ್ಮವನ್ನು ಆಲಂಗಿಸಿದವರು ಮಾತ್ರ ದಲಿತರಾಗಿ ಮುಂದುವರಿಯುವುದಾದರೆ ಇದು ಕ್ರೈಸ್ತರಿಗೆ ಹಾಗೂ ಮುಸಲ್ಮಾನ ಧರ್ಮದವರಿಗಿಲ್ಲ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಎಂ ಪಿ ನೊರೊನ್ಹಾ ಮಾತನಾಡಿ ಎಲ್ಲರಿಗೂ ಸಮಾನ ನಾಗರಿಕೆ ಸಂಹಿತೆ ಕಾನೂನು ತರುವುದಾಗಿ ಕೇಂದ್ರ ಸರ್ಕಾರ ಆಗಾಗ ಹೇಳುತ್ತಿದೆ. ಉಳಿದ ವಿಚಾರಗಳಲ್ಲಿ ಸಮಾನ ನಾಗರಿಕ ಸಂಹಿತೆ ಪ್ರತಿಪಾದಿಸುವ ಕೇಂದ್ರ ಸರ್ಕಾರ ದಲಿತರ ವಿಚಾರದಲ್ಲಿ ಆದಷ್ಟು ಬೇಗನೆ ದಲಿತ ಬೌದ್ಧ ಧರ್ಮದವರಿಗೆ ಇರುವ ಕಾನೂನೇ ದಲಿತ ಕ್ರೈಸ್ತರಿಗೆ ಅನ್ವಯಿಸಲಿ ಎಂದು ಒತ್ತಾಯಿಸಿದರು.
ಹಕ್ಕೊತ್ತಾಯ ಸಭೆಯ ಕೊನೆಗೆ ಜಿಲ್ಲಾಧಿಕಾರಿಯವರ ಮುಖಾಂತರ ರಾಷ್ಟ್ರಪತಿ ಹಾಗೂ ಪ್ರಧಾನಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಸಾಮಾಜಿಕ ಮತ್ತು ಮಾಧ್ಯಮ ಸಮಿತಿಯ ಸಂಚಾಲಕರಾದ ವಂ ಒನಿಲ್ ಡಿಸೋಜಾ ಸಭೆಯ ಉದ್ದೇಶವನ್ನು ಪ್ರಾಸ್ತಾವಿಕವಾಗಿ ಮಾತನಾಡಿದರು.
untouchability is restricted to Hinduism only so converts have no right to include them in schedule caste, it may leads to mass convertion.