Home Mangalorean News Kannada News ದಸರಾ ರಜೆ ಅಕ್ಟೋಬರ್ 3 ರಿಂದ 21 ರವರೆಗೆ ನೀಡಲು ಕಾರ್ಣಿಕ್ ಆಗ್ರಹ

ದಸರಾ ರಜೆ ಅಕ್ಟೋಬರ್ 3 ರಿಂದ 21 ರವರೆಗೆ ನೀಡಲು ಕಾರ್ಣಿಕ್ ಆಗ್ರಹ

Spread the love

ದಸರಾ ರಜೆ ಅಕ್ಟೋಬರ್ 3 ರಿಂದ 21 ರವರೆಗೆ ನೀಡಲು ಕಾರ್ಣಿಕ್ ಆಗ್ರಹ

ಮಂಗಳೂರು: ನಾಡ ಹಬ್ಬ ದಸರಾ ರಜೆಯನ್ನು ಈ ಅಕ್ಟೋಬರ್ 3 ರಿಂದ 21 ರವರೆಗೆ ನೀಡಲು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಆಗ್ರಹಿಸಿದ್ದಾರೆ

ನಾಡ ಹಬ್ಬ ನವರಾತ್ರಿ ನಮ್ಮ ರಾಜ್ಯದಲ್ಲಿ ವಿಜ್ರಂಭಣೆಯಿಂದ ಆಚರಿಸುತ್ತಾ ಬಂದಿದ್ದು,  ಈ ಕಾರಣದಿಂದಲೇ ಶೈಕ್ಷಣಿಕ ವರ್ಷದ ಮಧ್ಯಾವಧಿ ರಜೆಯನ್ನು ದಸರಾ ರಜೆ ಎಂದು ಕರೆಯುವ ಪದ್ಧತಿ ಬೆಳೆದು ಬಂದಿರುವುದು.  ಈ ಸಾಲಿನಲ್ಲಿ ಈ ದಸರ ರಜೆಯನ್ನು ದಿನಾಂಕ 09.10.2016 ರಿಂದ 27.10.2016ರ ವರೆಗೆ ನೀಡಲಾಗಿರುತ್ತದೆ.  ಈ ಬಾರಿಯ ನವರಾತ್ರಿ ಹಬ್ಬವು ದಿನಾಂಕ 1.10.2016 ರಿಂದ ಆರಂಭವಾಗಲಿದೆ.  ರಾಜ್ಯದ ಬಹುಸಂಖ್ಯಾತರು ಆಚರಿಸುವ ಈ ನಾಡ ಹಬ್ಬಕ್ಕೆ ರಜೆ ನೀಡುವುದರಿಂದ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಹಾಗೂ ಪಾಲಕರಲ್ಲಿ ಹಿತಕರವಾದ ವಾತಾವರಣ ನಿರ್ಮಾಣವಾಗಲಿದೆ.  ದಿನಾಂಕ 2ನೇ ಅಕ್ಟೋಬರ್ ರಾಷ್ಟ್ರಪಿತ ಮಹಾತ್ಮ ಗಾಂಧೀ ಜಯಂತಿಯಾಗಿರುವ ಹಿನ್ನಲೆಯಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 21ರವರೆಗೆ ರಜೆ ನೀಡುವ ಸೂಕ್ತ ಆದೇಶ ಹೊರಡಿಸುವಂತೆ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರನ್ನು   ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಆಗ್ರಹಿಸಿದ್ದಾರೆ.

 


Spread the love

Exit mobile version