ದಸರಾ ರಜೆ : ಶಾಸಕ ವೇದವ್ಯಾಸ ಕಾಮತ್ ಪ್ರಯತ್ನ ಫಲಿಸಿತು
ಮಂಗಳೂರು: ಕರ್ನಾಟಕದಲ್ಲಿ ಮೈಸೂರಿನಂತೆಯೇ ದೇವರು ನಾಡು ದಕ್ಷಿಣ ಕನ್ನಡದಲ್ಲಿ ಕೂಡ ದಸರಾ ಪ್ರಮುಖ ಉತ್ಸವವಾಗಿದ್ದು “ಮಂಗಳೂರು ದಸರಾ” ಕೂಡ ವಿಶ್ವವಿಖ್ಯಾತಿ ಪಡೆದಿರುವುದು ನಮಗೆಲ್ಲಾ ಗೊತ್ತಿರುವ ಸಂಗತಿ. ಮಂಗಳೂರಿನಲ್ಲಿ ರಾಜ್ಯ ಸರಕಾರದ ಆದೇಶದಂತೆ ದಸರಾ ರಜೆ ಕಡಿತಗೊಳಿಸಲಾಗಿತ್ತು.
ಇದನ್ನು ಪ್ರಶ್ನಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಯಾವುದೇ ಕಾರಣಕ್ಕೂ ಕೂಡ ಶಾಲೆಗಳ ದಸರಾ ರಜೆಯಲ್ಲಿ ಕಡಿತಗೊಳಿಸಬಾರದು. ಇದರಿಂದ ಮಕ್ಕಳಿಗೆ ಹಾಗೂ ಹೆತ್ತವರಿಗೆ ನವರಾತ್ರಿ ಉತ್ಸವಗಳಲ್ಲಿ ಪಾಲ್ಗೊಳ್ಳಲು ಅನಾನುಕೂಲವಾಗುತ್ತದೆ. ಹಿಂದಿನಂತೆ ದಸರಾ ರಜೆ ಅಕ್ಟೋಬರ್ 7 ತಾರೀಕಿನಿಂದ 21 ನೇ ತಾರೀಕಿನ ವರೆಗೆ ಇರಬೇಕೆಂದು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ, ರಾಜ್ಯ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ, ಜಿಲ್ಲಾ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದರು.
ಶಾಸಕರ ಹಾಗೂ ಪೋಷಕರ ತೀವ್ರ ವಿರೋಧದ ಹಿನ್ನಲೆಯಲ್ಲಿ ಕೊನೆಗೂ ದಕ ಉಸ್ತುವಾರಿ ಸಚಿವ ಯುಟಿ ಖಾದರ್ ದಸರಾ ರಜೆಯಲ್ಲಿ ಯಾವುದೇ ಕಡಿತ ಇಲ್ಲ ಎಂದು ಹೇಳಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಅವರಿಗಿರುವ ಉತ್ಸವಗಳ ಮೇಲಿನ ಕಾಳಜಿ ವಿದ್ಯಾರ್ಥಿಗಳ, ಪೋಷಕರ, ಜನಸಾಮಾನ್ಯರ ಜನಮೆಚ್ಚುಗೆಗೆ ಪಾತ್ರವಾಗಿದೆ. ಹಬ್ಬಗಳ ಬಗ್ಗೆ ರಾಜ್ಯ ಸರಕಾರಕ್ಕಿರುವ ಇಬ್ಬಗೆ ನೀತಿ ವಿರುದ್ಧ ಹೋರಾಟಕ್ಕೆ ಜಯ ಸಿಕ್ಕಿದೆ
I do not agree with this dasara vacation. Students have lost lots of classes already due to rains. If I were a student in Mangalore now, I would have felt unhappy about not making up those classes. I hope people stop appeasing to these feelings and let the students grow academically and become competetive.
Mr Kamath will have other issues to discuss in and out of assembley.
PS: Has Mr Kamath consulted with Mr Srikar Prabhu?