Home Mangalorean News Kannada News ದಾಭೋಲಕರ್-ಪಾನಸರೆ ಪ್ರಕರಣದಲ್ಲಿ ಬಂಧಿಸಲಾದ ಹಿಂದೂ ಯುವಕರಿಗೆ ಪೊಲೀಸ್ ಕಸ್ಟಡಿಯಲ್ಲಿ ಅಮಾನವೀಯ ಥಳಿತ; ಥಳಿಸಿದ ಅಧಿಕಾರಿಗಳಿಗಿದೆ ಯಾರ...

ದಾಭೋಲಕರ್-ಪಾನಸರೆ ಪ್ರಕರಣದಲ್ಲಿ ಬಂಧಿಸಲಾದ ಹಿಂದೂ ಯುವಕರಿಗೆ ಪೊಲೀಸ್ ಕಸ್ಟಡಿಯಲ್ಲಿ ಅಮಾನವೀಯ ಥಳಿತ; ಥಳಿಸಿದ ಅಧಿಕಾರಿಗಳಿಗಿದೆ ಯಾರ ಆಶೀರ್ವಾದ ?

Spread the love

ದಾಭೋಲಕರ್-ಪಾನಸರೆ ಪ್ರಕರಣದಲ್ಲಿ ಬಂಧಿಸಲಾದ ಹಿಂದೂ ಯುವಕರಿಗೆ ಪೊಲೀಸ್ ಕಸ್ಟಡಿಯಲ್ಲಿ ಅಮಾನವೀಯ ಥಳಿತ; ಥಳಿಸಿದ ಅಧಿಕಾರಿಗಳಿಗಿದೆ ಯಾರ ಆಶೀರ್ವಾದ ?

ದಿನಾಂಕ ೮.೯.೨೦೧೮ ರಂದು ಕೇಂದ್ರ ತನಿಖಾ ದಳದ ಅಧೀಕ್ಷಕ ಎಸ್. ಆರ್. ಸಿಂಗ್ ಇವರು ಡಾ. ದಾಭೋಲಕರ್ ಇವರ ಕೊಲೆ ಪ್ರಕರಣದ ಆರೋಪಿ ಶರದ ಕಳಸಕರನನ್ನು ತನಿಖೆಗಾಗಿ ಪುಣೆಗೆ ಕರೆ ತಂದಿದ್ದರು. ಆದುದರಿಂದ ಕೇಂದ್ರ ತನಿಖಾ ದಳದ ಬೇಲಾಪೂರ, ನವ ಮುಂಬೈಯ ಕಛೇರಿಯು ಎಸ್.ಆರ್.ಸಿಂಗ್ ಅನುಪಸ್ಥಿತರಿದ್ದರೆಂದು ಅಲ್ಲಿ ಇರಿಸಲಾಗಿದ್ದ ಇತರ ಆರೋಪಿಗಳಿಗೆ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಅನಂತರ ನಾವು ೯.೯.೨೦೧೮ ರಂದು ಆ ಆರೋಪಿಗಳನ್ನು ಭೇಟಿಯಾದೆವು; ಆಗ ನಮಗೆ ಬೆಚ್ಚಿಬೀಳಿಸುವಂತಹ ಮಾಹಿತಿ ತಿಳಿಯಿತು, ಅದು ಮುಂದಿನಂತಿದೆ,

೧. ಶ್ರೀ. ರಾಜೇಶ ಬಂಗೇರಾ ಮತ್ತು ಶ್ರೀ. ಅಮೋಲ ಕಾಳೆ ಇವರನ್ನು ಕೊಲ್ಹಾಪುರದ ತನಿಖಾ ದಳದ ಪೊಲೀಸ್ ಅಧೀಕ್ಷಕ ಮಟ್ಟದ ಒಬ್ಬ ಅಧಿಕಾರಿಯು ಬೇಲಾಪೂರದ ಕೇಂದ್ರ ತನಿಖಾ ವಿಭಾಗದ ಕಛೇರಿಯೊಳಗೆ ನುಗ್ಗಿ ಅಮಾನವೀಯವಾಗಿ ಥಳಿಸಿದರು ಮತ್ತು ‘ಕಾ. ಪಾನಸರೆ ಪ್ರಕರಣದಲ್ಲಿ ಪಾಲ್ಗೊಂಡ ಬಗ್ಗೆ ತಪ್ಪೊಪ್ಪಿಕೊಳ್ಳದಿದ್ದರೆ ಇದಕ್ಕೂ ಗಂಭೀರ ಚಿತ್ರಹಿಂಸೆಯನ್ನು ಎದುರಿಸಬೇಕಾದೀತು, ‘ನಾವು ನಿಮ್ಮನ್ನು ಶೀಘ್ರದಲ್ಲಿಯೇ ವಶಕ್ಕೆ ಪಡೆಯುತ್ತೇವೆ’, ಎಂದು ಬೆದರಿಕೆ ಹಾಕಿದರು. ಕಾ. ಪಾನಸರೆ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಅಧಿಕೃತವಾಗಿ ಕಸ್ಟಡಿ ಪಡೆಯದಿದ್ದರೂ ಕೊಲ್ಹಾಪುರದ ತನಿಖಾ ದಳದ ಪೊಲೀಸ್ ಅಧಿಕಾರಿಯು ಈ ರೀತಿ ಕಾನೂನುಬಾಹಿರವಾಗಿ ಥಳಿಸಿದ್ದಾರೆ, ಇದು ಅತ್ಯಂತ ಗಂಭೀರವಾಗಿದೆ.

೨. ೧೦.೯.೨೦೧೮ ರಂದು ಸದ್ಯ ನ್ಯಾಯಾಂಗ ಕಸ್ಟಡಿಯಲ್ಲಿರುವ ಶ್ರೀ. ಸಚಿನ ಅಂದುರೆಯವರನ್ನು ಅವರ ವಕೀಲರು ಭೇಟಿಯಾದಾಗ ಮಹಾರಾಷ್ಟ್ರ ಸರಕಾರದ ಇದೇ ಅಧಿಕಾರಿಯು ನಂದಕುಮಾರ ನಾಯರ್ ಉಪಸ್ಥಿತಿಯಲ್ಲಿ ಅತ್ಯಂತ ಹಿಂಸಾತ್ಮಕವಾಗಿ ಶ್ರೀ. ಸಚಿನ ಅಂದುರೆಯವರನ್ನು ಥಳಿಸಿರುವುದು ತಿಳಿಯಿತು.

೩. ಕೇಂದ್ರ ತನಿಖಾ ದಳದ ಪಶ್ಚಿಮ ಭಾರತ ಶಾಖೆಯ ಮುಖ್ಯಸ್ಥ ಹುದ್ದೆಯನ್ನು ಅಲಂಕರಿಸಿದ ನಂದಕುಮಾರ ನಾಯರ ಎಂಬ ಅಧಿಕಾರಿಯೂ ಸಹ ಸಚಿನ್‌ರಿಗೆ ಥಳಿಸಿದರು ಮತ್ತು ‘ಅಮೋಲ ಕಾಳೆ ಮತ್ತು ಡಾ. ವೀರೇಂದ್ರ ತಾವಡೆಯವರು ನಿನ್ನ ಹೆಂಡತಿಯನ್ನು ಉಪಭೋಗಿಸಿದ್ದನ್ನು ಒಪ್ಪಿದ್ದಾರೆ’, ಎಂಬ ಆಶಯದ ಅತ್ಯಂತ ಹೀನ ಭಾಷೆಯನ್ನು ಬಳಸಿದ್ದಾರೆ.

೪. ನಂದಕುಮಾರ ನಾಯರರವರು ‘ನಿನ್ನನ್ನು ಬಚಾವ್ ಮಾಡುವ ವಕೀಲರ ಹೆಸರನ್ನೇ ಕೊಲೆಯ ರೂವಾರಿ ಎಂದು ಹೇಳಿಬಿಡು’, ಎಂದು ಹೇಳಿ ಸಚಿನ ಅಂದುರೆ ಮೇಲೆ ತೀವ್ರ ಒತ್ತಡ ಹಾಕಿದರು. ನಾಯರ್ ಇವರು ‘ನಿನ್ನ ಹೆಂಡಿಯ ಬಲಾತ್ಕಾರ ಮಾಡುವೆನು’, ಎಂದೂ ಸಚಿನ್‌ಗೆ ಬೆದರಿಕೆ ಹಾಕಿದರು

೫. ‘ಈಗ ಒಪ್ಪಿಕೊಳ್ಳದಿದ್ದಲ್ಲಿ, ಕೊಲ್ಲಾಪುರ ಪೊಲೀಸರ ಕಸ್ಟಡಿಗೆ ಹೋದಾಗ ನೀನು ಕಲ್ಪನೆ ಮಾಡದಷ್ಟು ಚಿತ್ರಹಿಂಸೆಯನ್ನು ಕೊಡುತ್ತೇವೆ’, ಎಂದೂ ನಂದಕುಮಾರ ನಾಯರ ಮತ್ತು ಮಹಾರಾಷ್ಟ್ರ ಪೊಲೀಸ್ ದಳದ ಹಸಿರು ನೀಲಿ ಕಣ್ಣುಗಳುಳ್ಳ ಅಧೀಕ್ಷಕ ದರ್ಜೆಯ ಅಧಿಕಾರಿಯು ಸಚಿನ ಅಂದುರೆ ಇವರಿಗೆ ಬೆದರಿಸಿದರು.

೬. ಎಲ್ಲಕ್ಕಿಂತ ವಿಷಾದದ ವಿಷಯವೆಂದರೆ, ಇವರಿಬ್ಬರೂ ಅಧಿಕಾರಿಗಳು ‘ನಮಗೆ ದೇವೆಂದ್ರ ಫಡಣವೀಸ್ ಸಾಹೇಬರ ಆಶೀರ್ವಾದವಿದೆ ಮತ್ತು ಉಚ್ಚ ನ್ಯಾಯಾಲದ ನ್ಯಾಯಮೂರ್ತಿಯವರು ನಮ್ಮ ಜೇಬಿನಲ್ಲಿದ್ದಾರೆ’, ಈ ರೀತಿಯಲ್ಲಿ ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದರು.

ಪ್ರಸ್ತುತ ಆರೋಪಿಯನ್ನು ಪ್ರತಿನಿಧಿಸುವ ನ್ಯಾಯವಾದಿಗಳ ಸಂಘಟನೆ ಅಂದರೆ ‘ಹಿಂದೂ ವಿಧಿಜ್ಞ ಪರಿಷದ್’ ಇಂದು ಪತ್ರಿಕಾಗೋಷ್ಟಿಯಲ್ಲಿ ಇದರ ಬಗೆಗಿನ ದೂರಿನ ಪತ್ರವನ್ನು ಪ್ರಸ್ತುತಪಡಿಸಿದರು. ಪ್ರಸ್ತುತ ದೂರಿನ ಸಂದರ್ಭದಲ್ಲಿ ಆರೋಪಿಯೊಂದಿಗೆ ಅದಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ನಾರ್ಕೋ ಪರೀಕ್ಷೆ ಮಾಡಬೇಕು ಮತ್ತು ಅಗತ್ಯವಿದ್ದರೆ ಆರೋಪಿಯ ವಕೀಲರ ನಾರ್ಕೋ ಪರೀಕ್ಷೆಯನ್ನೂ ಮಾಡಬೇಕು, ಎಂದು ಹಿಂದೂ ವಿಧಿಜ್ಞ ಪರಿಷದ್‌ನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಶ್ರೀ. ಸಂಜೀವ ಪುನಾಳೆಕರ ಇವರು ಆಗ್ರಹಿಸಿದರು. ಅದೇ ರೀತಿ ಜನರ ಹಣವನ್ನು ನುಂಗಿ ಹಿಂದೂಗಳ ಬಗ್ಗೆ ದ್ವೇಷವನ್ನು ಹಬ್ಬಿಸುವುದು, ಹಿಂದೂಗಳ ಮೇಲೆ ಅತ್ಯಾಚಾರ ಮಾಡುವುದು ಮತ್ತು ಹಿಂದುತ್ವಕ್ಕಾಗಿ ಕಾರ್ಯವನ್ನು ಮಾಡುವ ಅಮಾಯಕ ಹಿಂದೂ ಯುವಕರಿಗೆ ಕಿರುಕುಳ ಕೊಡುವುದು, ಇಂತಹ ಕಾರ್ಯವನ್ನು ಹಿಂದೂದ್ವೇಷಿ ವಿಚಾರವುಳ್ಳ ಅಧಿಕಾರಿಗಳು ಆಡಳಿತಾರೂಢ ಪಕ್ಷದ ತೆರೆಮರೆಯಲ್ಲಿದ್ದು ಹೇಗೆ ಮಾಡುತ್ತಿದ್ದಾರೆ, ಇದೂ ಜನರ ಮುಂದೆ ಬರಲಿದೆ, ಎಂದೂ ನ್ಯಾಯವಾದಿ ಪುನಾಳೆಕರ ಇವರು ಈ ಸಂದರ್ಭದಲ್ಲಿ ಹೇಳಿದರು. ಈ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ವಿಧಿಜ್ಞ ಪರಿಷದ್‌ನ ನ್ಯಾಯವಾದಿ ಧರ್ಮರಾಜ ಚಂದೇಲ್ ಇವರೂ ಉಪಸ್ಥಿತರಿದ್ದರು.

‘ಸತ್ಯಮೇವ ಜಯತೆ !’, ಇದು ಹಿಂದುವಿನ ಧ್ಯೇಯವಾಕ್ಯವಾಗಿದೆ. ದೌರ್ಭಾಗ್ಯದಿಂದ ಪ್ರಸಕ್ತ ರಾಜಕಾರಣಿಗಳು ಸತ್ಯವನ್ನು ಹಿಂದೂ ಧರ್ಮಗ್ರಂಥದಿಂದ ತೆಗೆದುಕೊಳ್ಳದೇ, ‘ಸತ್ಯಮೇವ ಜಯತೆ !’ ಈ ಕಾರ್ಯಕ್ರಮದ ನಿರ್ಮಿಸುವ ಆಮೀರ ಖಾನ್‌ರಿಂದ ಶೋಧಿಸುತ್ತಿದ್ದಾರೆ ! ಈ ರೀತಿಯಲ್ಲಿ ಮಾಡುವ ರಾಜಕಾರಣಿಗಳು ಸತ್ಯ ಮತ್ತು ಸಾಮಾನ್ಯ ಹಿಂದೂ ಇವರಿಬ್ಬರಿಂದ ದೂರವಾಗಿದ್ದಾರೆ, ಎಂದು ನ್ಯಾಯವಾದಿ ಪುನಾಳೆಕರ ಇವರು ಈ ಸಂದರ್ಭದಲ್ಲಿ ಖೇದ ವ್ಯಕ್ತಪಡಿಸಿದರು. ಈ ಪ್ರಕರಣದ ದೂರನ್ನು ಗೃಹಮಂತ್ರಿಯಾಗಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಕೇಂದ್ರದ ಗೃಹಮಂತ್ರಿ, ಅದೇರೀತಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ, ಎಂದೂ ಅವರು ಹೇಳಿದರು.

ಮಹಾರಾಷ್ಟ್ರ ಸರಕಾರ ಅಂದರೆ ಮುಖ್ಯಮಂತ್ರಿಯವರು ಈ ದೂರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರ ಬಗ್ಗೆ ಕೂಡಲೇ ಹಸ್ತಕ್ಷೇಪವನ್ನು ಮಾಡಬೇಕು, ಸಂಬಂಧಿತ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನಾಲಾಸೋಪಾರಾ, ಕೊಲ್ಲಾಪುರ, ಸಾತಾರಾ, ಪುಣೆ, ಠಾಣೆ, ಸಂಭಾಜಿನಗರ, ಗೋವಾ ಈ ರೀತಿ ಅನೇಕ ಸ್ಥಳದಲ್ಲಿ ಸಂಘಟಿತರಾಗಿ ಪ್ರತಿಭಟನೆಯನ್ನು ಮಾಡುವ ಹಿಂದೂಗಳಿಗೆ ಮುಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಪೊಲೀಸ ಅಧಿಕಾರಿಯ ಕಾರ್ಯಾಲಯಕ್ಕೆ ಪ್ರತಿಭಟನಾ ಮೆರವಣಿಗೆ ತೆಗೆದುಕೊಂಡು ಹೋಗುವ ಪ್ರಮೇಯ ಬರದಿರಲಿ, ಎಂದು ಹಿಂದೂ ನ್ಯಾಯವಾದಿಗಳ ವತಿಯಿಂದ ಕಳಕಳಿಯ ವಿನಂತಿಯನ್ನು ಈ ಪತ್ರಿಕಾಗೋಷ್ಠಿಯಲ್ಲಿ ಮಾಡಲಾಯಿತು.


Spread the love

Exit mobile version