ದುಬೈ ಮೆಹಫಿಲೆ ಮುಹಬ್ಬತ್ತ್ ಸಮಾರಂಭದ ಸ್ವಾಗತ ಸಮಿತಿ ರಚನೆ

Spread the love

ದುಬೈ ಮೆಹಫಿಲೆ ಮುಹಬ್ಬತ್ತ್ ಸಮಾರಂಭದ ಸ್ವಾಗತ ಸಮಿತಿ ರಚನೆ

ದುಬೈ: ಅಲ್ ಖಾದಿಸ ಕಾವಳಕಟ್ಟೆ ಯುಎಇ ಸಮಿತಿ ವತಿಯಿಂದ ಬೃಹತ್ ಮೆಹಫಿಲೆ ಮುಹಬ್ಬತ್ತ್ ಮತ್ತು ಯುಎಇ ರಾಷ್ಟ್ರೀಯ ದಿನಾಚರಣೆಯು ದಿನಾಂಕ ಡಿಸೆಂಬರ್ 2 ರಂದು ದುಬೈ ಮುರಕ್ಕಾಬಾದ್ ನಲ್ಲಿರುವ ಜೆ ಡಬ್ಲ್ಯೂ ಮಾರಿಯಟ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಖಾಝೀ ಇಬ್ರಾಹಿಂ ಮುಸ್ಲಿಯಾರ್ ಬೇಕಲ, ರಾಜ್ಯ ಸಚಿವರಾದ ಯುಟಿ ಖಾದರ್, ಅಲ್ ಖಾದಿಸ ಶಿಲ್ಪಿ ಮೌಲಾನಾ ಮುಹಮ್ಮದ್ ಫಾಝಿಲ್ ರಜ್ವಿ ಕಾವಳಕಟ್ಟೆ, ಯುವ ವಾಗ್ಮಿ ಹಾಫಿಳ್ ಸುಫಿಯಾನ್ ಸಖಾಫಿ ಸೇರಿದಂತೆ ಅನೇಕ ಉಲಮಾ ಉಮರಾ ನಾಯಕರುಗಳು, ಸಾಮಾಜಿಕ, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಬೇಕಾಗಿ ಸ್ವಾಗತ ಸಮಿತಿಯ ರಚನೆಯು ಇತ್ತೀಚಿಗೆ ನಡೆಯಿತು.

qadisa-1

ಸ್ವಾಗತ ಸಮಿತಿಯ ಚೇರ್ಮನ್ ಆಗಿ ಫರಾಝ್ ಕೋಟೆಕಾರ್ ಮತ್ತು ಜನರಲ್ ಕನ್ವೀನರ್ ಆಗಿ ಸಲೀಂ ಅಲ್ತಾಫ್ ಫರಂಗಿಪೇಟೆ ಹಾಗೂ ಕೋಶಾಧಿಕಾರಿಯಾಗಿ ರಹೀಮ್ ಅಡ್ಡೂರು ಆಯ್ಕೆಗೊಂಡರು, ಉಪಾಧ್ಯಕ್ಷರುಗಳಾಗಿ ದುಬೈಯಲ್ಲಿರುವ ಅನಿವಾಸಿ ಕನ್ನಡಿಗ ಉದ್ಯಮಿಗಳಾದ ಬಷೀರ್ ಬೊಳುವಾರು, ಬಷೀರ್ ಆಸ್ಟರ್ ಬಂಟ್ವಾಳ, ನಝೀರ್ ಹಾಜಿ ಕೆಮ್ಮಾರ, ಅಶ್ರಫ್ ಹಾಜಿ ಅಡ್ಯಾರ್, ಮಹಬೂಬ್ ರಹ್ಮಾನ್ ಸಖಾಫಿ ಕಿನ್ಯ ಆಯ್ಕೆಯಾದರು. ಸಮಿತಿಯ ಅಧೀನದಲ್ಲಿ ಕೆಳಗಿನ ಉಪಸಮಿತಿಗಳನ್ನು ಆರಿಸಲಾಯಿತು.

ಪ್ರೋಗ್ರಾಮ್ ಕೋ ಆರ್ಡಿನೇಟರ್ : ಇಕ್ಬಾಲ್ ಕಾಜೂರು
ಕಮ್ಮ್ಯುನಿಕೇಷನ್ ಕೋ ಆರ್ಡಿನೇಟರ್ : ಮುಹಮ್ಮದ್ ಆಝೀಮ್ ಉಚ್ಚಿಲ

ಉಪ ಸಂಚಾಲಕರುಗಳು: ಮುಹಮ್ಮದ್ ರಫೀಕ್ ಕಲ್ಲಡ್ಕ, ಮುಹಮ್ಮದ್ ಅಲಿ ಕೂಳೂರು, ರಹೀಮ್ ಕೋಡಿ, ನವೀದ್ ಅಹಮದ್
ಕಾರ್ಯಕ್ರಮ ಸಂಚಾಲಕರುಗಳು: ಆಝೀಝ್ ಅಹ್ಸನಿ ಇಂದ್ರಾಜೆ, ಫಾರೂಕ್ ಮಂಗಳಪೇಟೆ, ರಶೀದ್ ಪಡೀಲ್, ರಫೀಕ್ ಸಂಪ್ಯ, ಲತೀಫ್ ಮುಲ್ಕಿ.
ಸ್ಟೇಜ್ ನಿರ್ವಹಣೆ : ಫಾರೂಕ್ ನಾಳ, ರಿಫಾಯಿ ಗೂನಡ್ಕ, ಉಮ್ಮರ್ ಬದ್ಯಾರ್, ಬಷೀರ್ ಕೋಟೇಶ್ವರ
ಹಣಕಾಸು : ಕರೀಂ ಹಾಜಿ ಉಳ್ಳಾಲ, ಹುಮಾಯೂನ್ ಬಜ್ಪೆ, ಮುಹಮ್ಮದ್ ಸಾಲಿಹ್, ಅಹ್ಮದ್ ಬಾವ
ಸಾರಿಗೆ : ಇಸ್ಮಾಯಿಲ್ ಮದನಿನಗರ, ಆಸೀಫ್ ಇಂದ್ರಾಜೆ, ಹಸನ್ ಜನ್ಸಾಲೆ, ಇಸ್ಮಾಯಿಲ್ ಮೂಳೂರು, ಹನೀಫ್ ಪುತ್ತೂರು.
ಮೀಡಿಯ : ರಿಯಾಝ್ ಕೊಂಡಂಗೇರಿ, ರಫೀಕ್ ಜೌಹರಿ ಅಳಿಕೆ, ಬಷೀರ್ ಮಾಸ್ಟರ್ ಕೊಡಗು, ಕಮಲ್ ಅಜ್ಜಾವರ, ಸಾಜಿದ್ ಬಜ್ಪೆ
ಐಟಿ : ನಝೀರ್ ಬಜ್ಪೆ
ಸ್ವಯಂಸೇವಕರ ತಂಡ : ನಿಯಾಝ್ ಬಸರ, ಷರೀಫ್ ಬೈರಿಕಟ್ಟೆ, ರಫೀಕ್ ಜೆಪ್ಪು, ಹಮೀದ್ ಬಸರ, ಹನೀಫ್ ಪುತ್ತೂರು, ರಫೀಕ್ ಸುರತ್ಕಲ್


Spread the love