ದೂರವಾಯ್ತು ಆತಂಕ, ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಬ್ ಸ್ಪೋಟಿಸುವಲ್ಲಿ ಯಶಸ್ವಿ

Spread the love

ದೂರವಾಯ್ತು ಆತಂಕ, ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಬ್ ಸ್ಪೋಟಿಸುವಲ್ಲಿ ಯಶಸ್ವಿ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್ ಅನ್ನು ಸ್ಪೋಟಿಸುವ ಮೂಲಕ ನಿಶ್ಕ್ರಿಯಗೊಳಿಸುವಲ್ಲಿ ಬಾಂಬ್ ಪತ್ತೆ ದಳ ಯಶಸ್ವಿಯಾಗಿದ್ದು ಜನರಲ್ಲಿದ್ದ ಆತಂಕ ದೂರವಾಗಿದೆ. ಬಾಂಬ್ ಸ್ಫೋಟಗೊಂಡ ಬಳಿಕ ಕಡಿಮೆ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದೆ. ನೆಲಮಟ್ಟದಿಂದ 12 ಅಡಿ ಆಳದಲ್ಲಿ ಬಾಂಬ್ ಸ್ಫೋಟಿಸಿದ್ದು ಇದರಿಂದಾಗಿ ನಿಜವಾದ ತೀವ್ರತೆಅರಿವಾಗಿಲ್ಲ ಎಂದೂ ಹೇಳಲಾಗುತ್ತಿದೆ.

ವಿಮಾನ ನಿಲ್ದಾಣದಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಕೆಂಜಾರು ಮೈದಾನಕ್ಕೆ ಬಾಂಬ್ ಪ್ರತಿರೋಧಕ ವಾಹನವನ್ನು ಸಾಗಿಸಿ ಬಾಂಬ್ ನಿಷ್ಕ್ರಿಯಗೊಳಿಸಲು ಪ್ರಯತ್ನಿಸಲಾಗಿತ್ತು. ಆದರೆ ಎರಡು ಗಂಟೆಗಳ ಕಾಲದ ಪ್ರಯತ್ನದ ಹೊರತಾಗಿಯೂ ಬಾಂಬ್ ನಿಷ್ಕ್ರಿಯಗೊಳಿಸಲು ಸಾಧ್ಯವಾಗದೆ ಹೋದಾಗ 12 ಅಡಿ ಆಳದ ಗುಂಡಿಯಲ್ಲಿ ಮರಳು ಚೀಲಗಳನ್ನು ಇಟ್ಟು ನಡುವೆ ಬಾಂಬ್ ಇರಿಸಿ ಸ್ಪೋಟಿಸಲಾಗಿದೆ.

ಇದರಿಂದಾಗಿ ಮಂಗಳುರು ಮಾತ್ರವಲ್ಲದೆ ರಾಜ್ಯದ ಜನತೆಯೂ ನಿರಾಳವಾಗಿದ್ದಾರೆ.

ಶೀಘ್ರವೇ ಪ್ರಕರಣ ಬೇಧಿಸುತ್ತೇವೆ:ಕಮಿಷನರ್ ಡಾ.ಹರ್ಷ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವ ಸಜೀವ ಬಾಂಬ್ ಪ್ರಕರಣವನ್ನು ಶೀಘ್ರವೇ ಬೇಧಿಸಲಾಗುತ್ತದೆ, ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್​ ಆಯುಕ್ತ ಡಾ. ಹರ್ಷ ಹೇಳಿದ್ದಾರೆ.

ಮಂಗಳೂರು ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ವಿಶೇಷ ಪತ್ರಿಕಾಗೋಷ್ಠಿ ಕರೆದಿದ್ದ ಪೋಲೀಸ್ ಆಯುಕ್ತರು “ವಿಮಾನ ನಿಲ್ದಾನದಲ್ಲಿ ಸ್ಪೋಟಕವನ್ನು ತಂದಿಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರ ಸಿಕ್ಕಿದೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ” ಎಂದಿದ್ದಾರೆ.

ಪ್ರಕರಣ ಬೇಧಿಸಲು ಮೂರು ತಂಡಗಳನ್ನು ರಚನೆ ಮಾಡುತ್ತಿದ್ದು ಶಂಕಿತನ ಮಾಹಿತಿ ಕಲೆಹಾಕುವ ಕಾರ್ಯ ನಡೆದಿದೆ.ಇದಾಗಲೇ ಸಾಕಷ್ಟು ಸುಳಿವುಗಳು ಸಿಕ್ಕಿದ್ದು ಶೀಘ್ರವೇ ಪ್ರಕರಣ ಬೇಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.


Spread the love