ದೇವಳ ನಗರಿಯಲ್ಲಿ ದಿ ಓಷಿಯನ್ ಪರ್ಲ್ ಹೋಟೆಲ್ ಅದ್ಧೂರಿ ಶುಭಾರಂಭ

Spread the love

ದೇವಳ ನಗರಿಯಲ್ಲಿ ದಿ ಓಷಿಯನ್ ಪರ್ಲ್ ಹೋಟೆಲ್ ಅದ್ಧೂರಿ ಶುಭಾರಂಭ

ಉಡುಪಿ: ದೇಗುಲಗಳ ನಗರಿ ಎಂದೇ ಖ್ಯಾತವಾಗಿರುವ ‘ಉಡುಪಿ’ಯ ಕಡಿಯಾಳಿಯಲ್ಲಿ ನಿರ್ಮಾಣಗೊಂಡಿರುವ ಜನತೆಯ ಬಹುನಿರೀಕ್ಷತ ಸ್ಟಾರ್ ಹೊಟೇಲ್ ‘ದಿ ಓಷಿಯನ್ ಪರ್ಲ್’ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡಿತು.

ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ಯವರ ಆಶೀರ್ವಚನ, ಮೌಲಾನಾ ಶಫಿ ಸಅದಿರವರ ದುವಾ, ಉಡುಪಿ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೊ ರವರ ಪ್ರಾರ್ಥನೆಯೊಂದಿಗೆ ಬುಧವಾರದಂದು ಹೊಟೇಲ್ ತನ್ನ ಸೇವೆಯನ್ನು ಪ್ರಾರಂಭಿಸಿದೆ.

image001hotel-ocean-pearl-inuguration-udupi-20161116 image002hotel-ocean-pearl-inuguration-udupi-20161116 image003hotel-ocean-pearl-inuguration-udupi-20161116 image004hotel-ocean-pearl-inuguration-udupi-20161116 image005hotel-ocean-pearl-inuguration-udupi-20161116 image006hotel-ocean-pearl-inuguration-udupi-20161116 image007hotel-ocean-pearl-inuguration-udupi-20161116 image008hotel-ocean-pearl-inuguration-udupi-20161116 image009hotel-ocean-pearl-inuguration-udupi-20161116 image010hotel-ocean-pearl-inuguration-udupi-20161116 image011hotel-ocean-pearl-inuguration-udupi-20161116 image012hotel-ocean-pearl-inuguration-udupi-20161116 image013hotel-ocean-pearl-inuguration-udupi-20161116 image014hotel-ocean-pearl-inuguration-udupi-20161116 image015hotel-ocean-pearl-inuguration-udupi-20161116 image016hotel-ocean-pearl-inuguration-udupi-20161116 image017hotel-ocean-pearl-inuguration-udupi-20161116 image018hotel-ocean-pearl-inuguration-udupi-20161116 image019hotel-ocean-pearl-inuguration-udupi-20161116 image020hotel-ocean-pearl-inuguration-udupi-20161116

ಈ ಅದ್ಧೂರಿ ಸಮಾರಂಭದಲ್ಲಿ ಸಮಾಜದ ಗಣ್ಯರಾದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ಶಶಿರಾಜ್ ಕುಂದರ್, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಅಭಯಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ಕಾರ್ಕಳ ವಿಧಾನ ಸಭೆ ಮುಖ್ಯ ಸಚೇತಕರು ಸುನಿಲ್ ಕುಮಾರ್, ಮಾಜಿ ಶಾಸಕ ಗೋಪಾಲ್ ಭಂಡಾರಿ, ಉಡುಪಿ ಕ್ರೆಡೈನ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್, ಪುರುಶೋತ್ತಮ ಪಿ.ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಕಿಶನ್ ಹೆಗ್ಡೆ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಯಶ್‍ಪಾಲ್ ಸುವರ್ಣ, ಮನೋಹರ್ ಶೆಟ್ಟಿ, ಪ್ರದೀಪ್ ಜಿ.ಪೈ, ವಿಲಾಸ್ ನಾಯಕ್, ಎ.ಜೆ.ಶೆಟ್ಟಿ, ಮಣಿಪಾಲ್ ಮೀಡಿಯಾ ನೆಟ್ವರ್ಕ್‍ನ ಟಿ. ಸತೀಶ್ ಪೈ, ಸಿಇಒ ವಿನೋದ್ ಕುಮಾರ್, ಸುಪ್ರಸಾದ್ ಶೆಟ್ಟಿ, ಸಿರಾಜ್ ಅಹಮದ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.
‘ದಿ ಓಶಿಯನ್ ಪರ್ಲ್ ಹೊಟೇಲ್ಸ್ ಪ್ರೈ.ಲಿ’ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಯರಾಮ್ ಬನಾನ್, ಎಮ್‍ಡಿ ಶ್ರೀ ರೋಷನ್ ಬನಾನ್, ಉಪಾಧ್ಯಕ್ಷ ಶ್ರೀ ಬಿ.ಎನ್ ಗಿರೀಶ್, ಜನರಲ್ ಮ್ಯಾನೇಜರ್ ಶ್ರೀ ಬಿಜು ವರ್ಗೀಸ್, ಶ್ರೀ ದಿನೇಶ್ ಬನಾನ್, ಪ್ರಾಜೆಕ್ಟ್ ಮ್ಯಾನೇಜರ್ ಶ್ರೀ ಶಿವ ಕುಮಾರ್, ಹೊಟೇಲ್ ಕಟ್ಟಡದ ಪ್ರಮೋಟರ್ ಮತ್ತು ಗ್ರಾಂಡ್ ಡೆ ಹಿಮಾಲಯಾ ಹೊಟೇಲ್ಸ್ ಮತ್ತು ರೆಸಾಟ್ರ್ಸ್ ಪ್ರೈ.ಲಿ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಹಮ್ಮದ್ ಸಲೀಂ ಮತ್ತಿತರರು ಉಪಸ್ಥಿತರಿದ್ದರು.
‘ದಿ ಓಷಿಯಲ್ ಪರ್ಲ್ ಉಡುಪಿ’ ಇಲ್ಲಿರುವ ಸಾಗರ್‍ರತ್ನ ವೆಜ್ ರೆಸ್ಟೋರೆಂಟ್, ಕೋರಲ್ ಮಲ್ಟಿ ಕ್ವಿಜ್ಹಿನ್ ಡೈನ್ ರೆಸ್ಟೋರೆಂಟ್, ಟೈಡ್ 24×7 ಕಾಫಿ ಶಾಪ್, ದ ಜಾಜ್ಹ್ ಲಾಂಜ್ ಬಾರ್, ಜೇಡ್, ಪಾರ್ಟಿ ಹಾಲ್ ಹಾಗೂ ಪೆಸಿಫಿಕ್ ಬ್ಯಾಂಕ್ವೆಟ್ ಹಾಲ್ ವಿಭಾಗಗಳು ನಿಮ್ಮ ಸೇವೆಗೆ ಸಿದ್ಧವಾಗಿವೆ.
ನೆಲ ಮಹಡಿಯಲ್ಲಿರುವ ಸಾಗರ್‍ರತ್ನ ವೆಜ್ ರೆಸ್ಟೋರೆಂಟ್ ನಿಮಗೆ ಉತ್ತರ ಹಾಗೂ ದಕ್ಷಿಣ ಭಾರತದ ಹೆಸರಾಂತ ಸ್ವಾದಿಷ್ಟ ಖಾದ್ಯಗಳ ಸವಿಯನ್ನು ಒದಗಿಸಲಿದೆ. ಹಾಗೆಯೇ ಇದೇ ಮಹಡಿಯಲ್ಲಿರುವ 24×7 ಕಾಲ ಸೇವೆಗೆ ಲಭ್ಯವಿರುವ ಟೈಡ್, ನಾನ್‍ವೆಜ್ ಪ್ರಿಯರಿಗೆ ದೇಶದ ಹಾಗೂ ಯುರೋಪಿಯನ್ ವೈವಿಧ್ಯಮಯ ನಾನ್‍ವೆಜ್ ಖಾದ್ಯಗಳನ್ನು ಒದಗಿಸುವ ಮೊದಲ ಮಹಡಿಯಲ್ಲಿರುವ ಕೋರಲ್, ಉತ್ತಮ ಲಾಂಜ್ ಬಾರ್‍ನ ಆನಂದವನ್ನು ಒದಗಿಸುವ ಜಾಝ್ ಜತೆಗೆ ವಿಶೇಷ ಸಂಭ್ರಮಾಚರಣೆ, ಕಾರ್ಯಾಗಾರಗಳು, ಪತ್ರಿಕಾ ಗೋಷ್ಠಿ ಇತ್ಯಾದಿಗಳಿಗಾಗಿ ಸುವ್ಯವಸ್ಥಿತ ಕಾನ್ಫರೆನ್ಸ್ ಹಾಲ್ ಇದೇ ಮಹಡಿಯಲ್ಲಿದ್ದು ಇವೆಲ್ಲವೂ ನಿಮ್ಮ ಸೇವೆಗಾಗಿ ಕಾತರವಾಗಿವೆ. ಇದಕ್ಕೆಲ್ಲಾ ಪೂರಕವಾಗಿ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ ಶೆಫ್‍ಗಳು ಖಾದ್ಯಗಳಿಗೆ ಮತ್ತಷ್ಟು ರುಚಿಯ ಸ್ಪರ್ಷವನ್ನು ನೀಡಲಿದ್ದಾರೆ.
2, 3 ಮತ್ತು 4ನೇ ಅಂತಸ್ತಿನಲ್ಲಿ ಉತ್ಕøಷ್ಟ ದರ್ಜೆಯ 45 ರೂಂಗಳು ಇದ್ದು 3 ಸ್ವೀಟ್ ಹಾಗೂ 3 ಕ್ಲಬ್ ರೂಂಗಳನ್ನು ಒಳಗೊಂಡಿವೆ. 5ನೇ ಮಹಡಿಯಲ್ಲಿ ಸುಮಾರು 500 ಜನರ ಸಭೆ, ಸಮಾರಂಭವನ್ನೇರ್ಪಡಿಸಬಹುದಾದ ಬ್ಯಾಂಕ್ವೆಟ್ ಹಾಲ್ ಕೂಡಾ ಇದೆ. 2.5 ಎಕ್ರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶವಿದ್ದು ಗ್ರಾಹಕರ ಅನುಕೂಲತೆಗಾಗಿ ‘ವ್ಯಾಲೇ ಪಾರ್ಕ್’ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಿಸಿನೆಸ್ ಸೆಂಟರ್, ಫಿಟ್‍ನೆಸ್ ಸೆಂಟರ್, ಟ್ರಾವೆಲ್ ಡೆಸ್ಕ್, ಡಾಕ್ಟರ್ ಆನ್ ಕಾಲ್, ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ.
‘ದಿ ಓಷಿಯನ್ ಪರ್ಲ್ ಉಡುಪಿ’ ಇಲ್ಲಿನ ಜನರಿಗೆ ಉತ್ತಮ ಗುಣಮಟ್ಟದ ಸೇವೆ ಹಾಗೂ ದೇಶವಿದೇಶಗಳ ಉತ್ಕøಷ್ಟ ಖಾದ್ಯಗಳನ್ನು ಒದಗಿಸುವ ಜತೆಗೆ ತಮ್ಮ ಸಂಭ್ರಮಾಚರಣೆಗಳಿಗೆ ಮತ್ತಷ್ಟು ಮೆರುಗನ್ನು ಒದಗಿಸಲು ಉತ್ತಮ ಹಾಲ್ ಹಾಗೂ ಪೂರಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ‘ದಿ ಓಷಿಯನ್ ಪರ್ಲ್ ಉಡುಪಿ’ ಇಲ್ಲಿನ ಜನರ ಸಂಪೂರ್ಣ ಸಹಕಾರ, ಪ್ರೀತಿ ವಿಶ್ವಾಸವನ್ನು ಬಯಸುತ್ತದೆ ಹಾಗೂ ಇಲ್ಲಿನ ಜನರ ಪಾರಂಪರಿಕ ಅಗತ್ಯತೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆಯನ್ನು ನೀಡುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಯರಾಮ್ ಬನಾನ್ ಪ್ರಕಟಣೆಯಲ್ಲಿ ತಿಳಿಸಿದರು.


Spread the love