ದೇವೆಗೌಡ, ಎಚ್ ಡಿ ಕೆ ಜೊತೆ ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗಿಶ್ ಶೆಟ್ಟಿ ವೀಡಿಯೋ ಕಾನ್ಫರೆನ್ಸ್
ಉಡುಪಿ: ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿಯರೊಂದಿಗೆ “ವಿಡಿಯೋ ಕಾನ್ಫರೆನ್ಸ್” ನ್ನು ನಡೆಸಿದರು.
ಉಡುಪಿ ಜಿಲ್ಲೆಯ ಮಳೆ ಹಾನಿ, ನೆರೆ ಹಾನಿಯ ಬಗ್ಗೆ ವಿವರಗಳನ್ನು ನೀಡಿದರು. ಮೂಲತಃ ಕಾಪು ಪಡು ಗ್ರಾಮದ ನಿವಾಸಿ ರಕ್ಷಾ ಅವರ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ನೇರವಾಗಿ ಆರೋಪಿಸುತ್ತಿದ್ದಾರೆ .ಈ ಬಗ್ಗೆ ಪಕ್ಷದ ವತಿಯಿಂದ ಪ್ರಕಟಣೆಯನ್ನು ನೀಡಲಾಗಿರುತ್ತದೆ. ನಂತರ ಸರಕಾರ ಸಿಒಡಿ ತನಿಖೆಗೆ ಆದೇಶಿಸಿದೆ. ಈ ಸಂಬಂಧ ದಾಖಲೆಗಳನ್ನು ನೀಡುವರೇ ಎಚ್ ಡಿ ಕುಮಾರಸ್ವಾಮಿ ಅವರು ಸೂಚಿಸಿದರು.
ಕೊವೀಡ್ ಸಂಬಂಧಪಟ್ಟಂತೆ ಆಸ್ಪತ್ರೆ ಖಾಸಗಿಯ ಚಿಕಿತ್ಸೆ ಬಗ್ಗೆ ಮತ್ತು ಕುಂದಾಪುರದ ಮೃತದೇಹ ಬದಲಿ ಮತ್ತು ಮೃತದೇಹ ಕಾಣೆಯಾಗಿದ್ದ ಬಗ್ಗೆ ತಿಳಿಸಲಾಯಿತು.
ಪಕ್ಷದ ರಾಜ್ಯ ಕಾರ್ಯದರ್ಶಿ ಶೇಖರ ಕೋಟ್ಯಾನ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಕಾಪು ವಿಧಾನಸಭಾ ಕ್ಷೇತ್ರದ ಮಹಾ ಪ್ರಧಾನ ಕಾಯದರ್ಶಿ ಅಬ್ದುಲ್ ಹಮೀದ್ ಯೂಸುಫ್,ಶಂಶುದ್ದೀನ್ ಮಜೂರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.