ದೇವೇಗೌಡ ಹುಟ್ಟುಹಬ್ಬ ಪ್ರಯುಕ್ತ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ರಕ್ತದಾನ
ಮಂಗಳೂರು: ಮಾಜಿ ಪ್ರಧಾನಿ ಮಣ್ಣಿನ ಮಗ ಕರ್ನಾಟಕ ರತ್ನ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ರವರ 85ನೇ ಹುಟ್ಟು ಹಬ್ಬದ ಪ್ರಯುಕ್ತ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ವತಿಯಿಂದ ಮಂಗಳೂರು ನಗರದ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು
ಈ ವೇಳೆ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಈ ದೇಶದ 11ನೇ ಪ್ರಧಾನಿ ಯಾಗಿ ಹೆಚ್ ಡಿ ದೇವೇಗೌಡರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ನಾವು ನೆನಪಿಸಬೇಕಾಗುತ್ತದೆ.ಮಹಿಳಾ ಮೀಸಲಾತಿ. ಕಾಶ್ಮೀರ ಸಮಸ್ಯೆ. ರೈತರಿಗೆ ರಸಗೋಬ್ಬರ ಸಬ್ಸಿಡಿ ಹುಬ್ಬಳ್ಳಿ ಈದ್ಗ ಸಮಸ್ಯೆ, ಕಾವೇರಿ ನೀರಿನ ಸಮಸ್ಯೆ, ಮಹಾದಾಯಿ ಸಮಸ್ಯೆಯ ಹೋರಾಟ ಅವರ ರೈತರ ಮೇಲೆ ಇರುವ ಕಾಳಜಿ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಕರಿಗೆ ಮಾರ್ಗದರ್ಶನವಾಗಿದೆ ಈ ನಿಟ್ಟಿನಲ್ಲಿ ಇಂದು ಬಡವರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಯಾಗಿ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ್ಝ, ಪಾಲಿಕೆ ಸದಸ್ಯರಾದ ಅಜೀಜ್ ಕುದ್ರೋಳಿ, ರಮೀಜಾ ನಾಸೀರ್, ಜಿಲ್ಲಾ ಮಹಾ ಕಾರ್ಯದರ್ಶಿ ರಾಮ್ ಗಣೇಶ್,ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್ಶಕ್ ಇಸ್ಮಾಯಿಲ್. ಜಿಲ್ಲಾ ಕಾರ್ಯದರ್ಶಿಗಳಾದ ಪೈಜಲ್, ದೀಪಕ್, ಸಿನಾನ್, ತೇಜಸ್ ನಾಯಕ್,ಈತೇಶ್ ರೈ,ಔಸಪ್, ಸಮೀರ್, ಅಬ್ದುಲ್ ಹಾದಿ. ಸಪನ್ ಜಿಲ್ಲಾ ನಾಯಕರುಗಳಾದ. ಮುನೀರ್ ಮುಕ್ಕಚೇರಿ. ರತ್ನಾಕರ್ ಸುವರ್ಣ.ಇಕ್ಬಾಲ್ ಇಲಿಮನೆ. ಅನೇಕ ಯುವ ಮುಖಂಡರು ಹಾಗೂ ಜಿಲ್ಲಾ ಮುಖಂಡರು ಭಾಗವಹಿಸಿದ್ದರು