ದೇಶದ ಜನತೆಗೆ 21 ದಿನ ದಿಗ್ಭಂದನ, ಭಾರತವೇ ಲಾಕ್ ಡೌನ್: ಪ್ರಧಾನಿ ಮೋದಿ ಖಡಕ್ ಆದೇಶ
ನವದೆಹಲಿ: ಜಗತ್ತನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್ ಭಾರತದಲ್ಲಿ ತನ್ನ ಕದಂಬಬಾಹು ಚಾಚುತ್ತಿದ್ದು ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್ ನಿಂದ ಬಾಧಿತವಾಗಿದೆ. ಇದರಿಂದ ದೇಶವನ್ನು ರಕ್ಷಿಸಿಕೊಳ್ಳಬೇಕೆಂದರೆ ದೇಶದ ಜನತೆ ಇನ್ನು 21 ದಿನಗಳ ಕಾಲ ರಸ್ತೆಗೆ ಇಳಿಯಬೇಡಿ ನಿಮ್ಮಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.
ನಾವು ಈ ಕ್ಷಣದಿಂದ ಸಂಕಲ್ಪ ಮಾಡೋಣ. ನಮಗೆ ನಾವೇ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡು ಮನೆಯಲ್ಲೇ ಇರಬೇಕು ಎಂದು ಹೇಳಿದರು.
ಕೊರೋನಾ ವೈರಸ್ ವಿರುದ್ಧ ಹೋರಾಡಲು 15 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದರು.
21 ದಿನ ದೇಶವೇ ಲಾಕ್ ಡೌನ್ ಆದರೂ ಅಗತ್ಯ ವಸ್ತುಗಳು ನಿಮಗೆ ಸಿಗುತ್ತದೆ. ಹಾಲು, ದಿನಸಿ, ಆಸ್ಪತ್ರೆ, ಮೆಡಿಕಲ್ ಶಾಪ್ ಮತ್ತು ತರಕಾರಿ ಎಂದಿನಂತೆ ಸಿಗುತ್ತದೆ.