Home Mangalorean News Kannada News ದೈವಿಕ ಪ್ರೇಮ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟವರು ಸೂಫಿಗಳು:ರಂಜಾನ್ ದರ್ಗಾ

ದೈವಿಕ ಪ್ರೇಮ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟವರು ಸೂಫಿಗಳು:ರಂಜಾನ್ ದರ್ಗಾ

Spread the love

ದೈವಿಕ ಪ್ರೇಮ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟವರು ಸೂಫಿಗಳು:ರಂಜಾನ್ ದರ್ಗಾ

ಭಾರತೀಯ ಸೂಫೀ ಪರಂಪರೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸೂಫಿಗಳು ಯಜಮಾನ ಸಂಸ್ಕøತಿ,ವರ್ಣ ವ್ಯವಸ್ಥೆ, ಜಾತೀಯತೆ, ಅಜ್ಞಾನ, ಅಂಧಕಾರವನ್ನು ದೂರವಿರಿಸಿ ತಮ್ಮ ಪ್ರೇಮತತ್ವದ ಮೂಲಕ ಜಗತ್ತನ್ನು ಪ್ರೀತಿಸಲು ತೋರಿಸಿಕೊಟ್ಟವರು” ಎಂದು ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕøತ ಸಾಹಿತಿ ರಂಜಾನ್ ದರ್ಗಾ ಹೇಳಿದರು.

ಆಳ್ವಾಸ್ ನುಡಿಸಿರಿಯ ದ್ವಿತೀಯ ದಿನದಂದು ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಲಾದ ಕರ್ನಾಟಕ ದರ್ಶನ: ಅಧ್ಯಾತ್ಮ ಪರಂಪರೆ ಎಂಬ ವಿಷಯದ ಬಗ್ಗೆ ವಿಶೇಷೋಪನ್ಯಾಸವನ್ನು ನೀಡಿದ ಅವರು ಸೂಫೀ ಪಂಥಗಳ ಬಗ್ಗೆ ಮಾತನಾಡಿದರು.

`ಕರ್ನಾಟಕದ ಸೂಫಿಗಳಿಂದ ಕಲಿಯಲು ಬಹಳಷ್ಟಿದೆ. ಅವರ ತತ್ವ ಗ್ರಂಥಗಳು ಆಂಗ್ಲ ಭಾಷೆಗೆ ಅನುವಾದಗೊಂಡರೆ ಇಡೀ ಜಗತ್ತೇ ಕರುನಾಡಿನತ್ತ ಅಚ್ಚರಿಯಿಂದ ನೋಡುವಂತಾಗುತ್ತದೆ. ಭಕ್ತಿ ಪಂಥ, ಬೌದ್ಧ ಪಂಥ, ಬೌದ್ಧ ಸಿದ್ಧ ಪಂಥ, ಅವಧೂತ ಪಂಥಗಳಿಂದ ಪ್ರಭಾವಿತರಾದ ಸೂಫಿಗಳ ಸಿದ್ಧಾಂತದ ತತ್ವಗಳು ನಮ್ಮ ಮಣ್ಣಿನ ಮೇಲೆ ಪ್ರಭಾವ ಬೀರಿದೆ’ ಎಂದರು.

ಸೂಫಿಸಂಗೆ ಪ್ರತ್ಯೇಕ ಆಕಾರವಿಲ್ಲ ಎಂದ ಅವರು ಖಾದಿರಿಯ್ಯ, ಚಿಸ್ತಿಯ್ಯ, ಸುಹುರವರ್ದಿಯ್ಯ, ರಿಫಾಯಿಯ್ಯ ಎಂಬ ನಾಲ್ಕು ಪಂಥಗಳು ಬಹಳ ಪ್ರಮುಖವಾದುದು, ಅಲ್ಲದೇ ಅವುಗಳು ಶರೀಅತ್, ಹಕೇಕತ್, ಮಅರಿಫತ್, ತ್ವರೀಖತ್ ಎಂಬ ನಾಲ್ಕು ಆಧಾರ ಸ್ಥಂಭಗಳ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ಸೂಫಿ ತತ್ವಗಳ ಬಗ್ಗೆ ವಿವರಿಸಿದರು. ಬಂದೇ ನವಾಜ್, ಕೊಡಕ್ಕಲ್ ಬಸವಣ್ಣ, ಯೂಸುಫ್ ಆದಿಲ್ ಖಾನ್ ರಂತಹ ಅಧ್ಯಾತ್ಮಿಕ ತತ್ವ ಚಿಂತಕರು ಇದೇ ಹಾದಿಯನ್ನು ತುಳಿದರು. `ದ್ವೈತ ಸಿದ್ದಾಂತವು ಬರೀ ತೋರಿಕೆಯಾಗಿದ್ದು, ಜಗತ್ತು ಅದ್ವೈತದಿಂದ ಉದಯಿಸಿದೆ ಎಂದು ಅವರು ತೋರಿಸಿಕೊಟ್ಟವರು’ ಎಂದು ಮಾರ್ಮಿಕವಾಗಿ ನುಡಿದರು.

ಜಗತ್ತಿನಲ್ಲಿಂದು ಹಿಂದುಗಳನ್ನು ಕೋಮುವಾದಿಗಳೆಂದೂ,ಇಸ್ಲಾಮನ್ನು ಮೂಲಭೂತವಾದಿಗಳೆಂದೂ ಪ್ರತ್ಯೇಕಿಸಿ ಕಾಣಲಾಗುತ್ತಿದೆ. ಅತ್ಯಾಚಾರ,ಅನಾಚಾರಗಳು ನಿರಂತರ ಗರಿಗೆದರುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಈ ಮಣ್ಣಿನಲ್ಲಿ ಐಕ್ಯತೆಯ ಬೀಜವನ್ನು ಬಿತ್ತಿ ಮರೆಯಾದ ಸೂಫಿಗಳ ತತ್ವಗಳನ್ನು ಪಾಲಿಸಿ ಬದುಕು ರೂಪಿಸಬೇಕು ಕರೆ ನೀಡಿದರು.

ವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷೆ ಮಲ್ಲಿಕಾ ಎಸ್ ಘಂಟಿ,ನುಡಿಸಿರಿಯ ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ.ನಾ.ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version