ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ದೇಶದ ಮೊದಲ ಪ್ರಧಾನಿ ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆ ಮಂಗಳವಾರ ನಗರದ ನೆಹರೂ ಮೈದಾನದಲ್ಲಿ ನಡೆಯಿತು.
ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿ ಆಧುನಿಕ ಭಾರತ ನಿರ್ಮಿಸುವಲ್ಲಿ ಅವರು ನೀಡಿದ ಕೊಡುಗೆ ಅಪಾರ. ದೇಶವನ್ನು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಮೇಲೆ ನಂಬಿಕೆ ಇಟ್ಟು ಬದುಕಿದವರು ಎಂದು ಸ್ಮರಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನೆಹರೂ ಅವರು ದೀನ ದಲಿತರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ, ಕೃಷಿ, ನೀರಾವರಿ ಯೋಜನೆಗಳನ್ನು ಪ್ರಗತಿ ಮಾಡಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಭಾರತವು ತನ್ನದೇ ಆದ ಬಾಹ್ಯಾಕಾಶ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ನಂಬಿದ್ದರು. ಇಸ್ರೋ ಯೋಜನೆಗಳಿಗೆ ಸೂಕ್ತ ಅನುದಾನವನ್ನು ನೀಡಿ ಪ್ರೋತ್ಸಾಹಿಸುವ ಜೊತೆಗೆ ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ದೇಶಕ್ಕೆ ಅನನ್ಯ ಕೊಡುಗೆ ನೀಡಿ ಸಾಮಾಜಿಕ ಕ್ರಾಂತಿಯ ಹರಿಕಾರರೆನಿಸಿದರು ಎಂದು ಹೇಳಿದರು.
ಈ ಸಂದರ್ಭ ಬಿ.ಇಬ್ರಾಹೀಂ, ಐವನ್ ಡಿಸೋಜ, ಇಬ್ರಾಹೀಂ ಕೋಡಿಜಾಲ್, ಪದ್ಮರಾಜ್.ಆರ್, ಶಾಹುಲ್ ಹಮೀದ್, ಲುಕ್ಮಾನ್ ಬಂಟ್ವಾಳ್, ಬಿ.ಎಂ.ಅಬ್ಬಾಸ್ ಅಲಿ, ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಕೆ.ಅಪ್ಪಿ, ಜೆಸಿಂತಾ ಆಲ್ಫ್ರೆಡ್, ಲ್ಯಾನ್ಸಿ ಲೋಟೊ ಪಿಂಟೊ, ಲತೀಫ್ ಕಂದಕ್, ಝೀನತ್ ಸಂಶುದ್ದೀನ್, ಸಂಶುದ್ದೀನ್ ಕುದ್ರೋಳಿ, ನೀರಜ್ ಚಂದ್ರಪಾಲ್, ಶಮೀರ್ ಪಜೀರ್, ಗಿರೀಶ್ ಆಳ್ವ, ಶುಭೋದಯ ಆಳ್ವ, ಉಮ್ಮರ್ ಫಾರುಕ್ ಪುದು, ಗಣೇಶ್ ಪೂಜಾರಿ, ವಿಕಾಶ್ ಶೆಟ್ಟಿ, ಗಿರೀಶ್ ಶೆಟ್ಟಿ, ಟಿ.ಹೊನ್ನಯ್ಯ, ಟಿ.ಕೆ.ಸುಧೀರ್, ಜಯಶೀಲ ಅಡ್ಯಂತಾಯ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪದ್ಮನಾಭ ಅಮೀನ್, ಟಿ.ಕೆ.ಶೈಲಜಾ, ಯೋಗಿಶ್ ನಾಯಕ್, ಹೈದರ್ ಬೋಳಾರ್, ಝುಬೈರ್ ತಲಮೊಗರು, ಉದಯ್ ಆಚಾರ್ಯ, ಚೇತನ್ ಕುಮಾರ್, ಶಾಂತಲಗಟ್ಟಿ, ಇಮ್ರಾನ್ ಎ.ಆರ್, ಜಾರ್ಜ್, ದಿನೇಶ್ ರಾವ್, ನೀತ್ ಶರಣ್, ಸತೀಶ್ ಪೆಂಗಲ್, ಅಲ್ತಾಫ್ ಸುರತ್ಕಲ್, ಮಂಜುಳಾ ನಾಯಕ್, ಆಸೀಫ್ ಬೆಂಗ್ರೆ, ಮಲ್ಲಿಕಾರ್ಜುನ ಕೋಡಿಕಲ್, ಸಿದ್ದೀಕ್ ಅಮ್ಮೆಮ್ಮಾರ್, ಅನ್ಸಾರುದ್ದೀನ್ ಸಾಲ್ಮರ, ನಜೀಬ್ ಮಂಚಿ, ಶೀತರಾಮ ಶೆಟ್ಟಿ, ಹುಸೈನ್ ಕಾಟಿಪಳ್ಳ, ಸಮರ್ಥ್ ಭಟ್, ಜಯರಾಜ್ ಕೋಟ್ಯಾನ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕ್ಕಿಂ ಡಿಸೋಜ ಸ್ವಾಗತಿಸಿ ನಿರೂಪಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.