ದ.ಕ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳಾ ಕ್ಲಬ್ಬಿನ ಸದಸ್ಯರಿಗೆ ಒಟ್ಟು 76 ಪದಕಗಳು
ಮಂಗಳೂರು: ಇತ್ತೀಚೆಗೆ ಮಂಗಳೂರಿನ ಮಹಾನಗರ ಪಾಲಿಕಾ ಈಜು ಕೊಳದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ದ.ಕ. ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಮಂಗಳಾ ಈಜು ಕ್ಲಬ್ಬಿನ ಸದಸ್ಯರಾಗಿರುವ ವಿವಿದ ಶಾಲೆಗಳ ವಿದ್ಯಾರ್ಥಿಗಳು ವಿವಿದ ವಿಭಾಗಗಳಲ್ಲಿ ಸ್ಪರ್ದಿಸಿ 39 ಚಿನ್ನ,28 ಬೆಳ್ಳಿ,9ಕಂಚು ಗಳಿಸಿರುತ್ತಾರೆ. ಒಟ್ಟು 29 ಸ್ಪರ್ಧಿಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ
ಈ ಚಿತ್ರದಲ್ಲಿ ಕ್ಲಬ್‌ನ ಅದ್ಯಕ್ಷರಾದ ಪ್ರಮುಖ್ ರೈ ಈಜುಕೊಳದ ವ್ಯವಸ್ಥಾಪಕ ರಾದ ರಮೇಶ್ ಅವರೊಂದಿಗೆ ತರಬೇತುದಾರರ ಜೊತೆಯಲ್ಲಿ ಪದಕ ಗಳಿಸಿದ ಕ್ಲಭ್ಬಿನ ಈಜು ತಂಡದ ಸದಸ್ಯರು ಎಸ್.ಆರ್.ರಚನಾ ರಾವ್, ಚಿಂತನ್ ಎಸ್.ಶೆಟ್ಟಿ (ರಾಮಕೃಷ್ಣ ಹೈಸ್ಕೂಲ್ ಬಂಟ್ಸ್ ಹಾಸ್ಟೆಲ್), ವಿಯಾನ್ ಡಿ ಸೊಜ, ಶಮಂತ್ ಬಿ.ಪಿ, ಮಿಥುಲ್ ಎಲ್.ಶೆಟ್ಟಿ, ಕೀರ್ತನ್, ಡೆಲಾನ್ ವಾಸ್, ನಿಶಾನ್ (ಸಂತ ಅಲೋಶಿಯಸ್ ಉರ್ವ) ಅಭಿರೂಪ್ ಎಲ್ ಶೆಟ್ಟಿ (ಸಂತ ಅಲೋಷಿಯಸ್ ಪ್ರೈಮರಿ ಸ್ಕೂಲ್ ಕೊಡಿಯಾಲ್ ಬೈಲ್), ದರ್ಶನ್ ಎಚ್, ಬೂಷಣ್ (ಕೆನರಾ ಇಂಗ್ಲಿಷ್ ಹೈಸ್ಕೂಲ್ ಡೊಂಗೆರಿಕೇರಿ), ಪ್ರೇರಣ ಎ. ಕುಂದರ್, ಪ್ರಥಮ್ ಎ. ಕುಂದರ್, ಪಂಚಮಿ, ಆರ್ಯ ಬಾಳಿಗ ( ಕೆನರಾ ಹೈಸ್ಕೂಲ್ ಉರ್ವ), ಸರ್ವಾಣಿ, ವೈಷ್ಣವಿ (ಲೇಡಿಹಿಲ್ ಇಂಗ್ಲಿಷ್ ಪ್ರೈಮರಿ ಸ್ಕೂಲ್), ಸ್ಮ್ರತಿ, ಹನಿ ಪದ್ಮಶಾಲಿ (ವಿಕ್ಟೋರಿಯ ಹೈಸ್ಕೂಲ್ ಲೇಡಿಹಿಲ್), ಆರಾದನ ಬೇಕಲ್, ಆರ್ನಾ ಎಂ.ಪಿ, ಸ್ಟೀವ್ ಜೆಫ್ ಲೋಬೊ (ಮದುಸೂದನ್ ಡಿ.ಕುಶೆ), ಸಿಂಚನಾ(ಆಳ್ವಾಸ್ ಮೂಡಬಿದ್ರೆ), ತ್ರಿಶಾ, ಪ್ರತಿಷ್ಠಾ (ಸೈಂಟ್ ಮೇರೀಸ್ ಸ್ಕೂಲ್ ಫಳ್ನೀರ್)
ಕ್ಲಬ್ಬಿನ ಮುಖ್ಯ ತರಬೇತುದಾರರಾದ ಶ್ರೀ ಲೋಕರಾಜ್ ವಿಟ್ಲ, ಮತ್ತು ಸಹಾಯಕ ತರಬೇತುದಾರರಾದ ಶ್ರೀ ಎಂ ಶಿವಾನಂದ ಗಟ್ಟಿ, ಶಿಶಿರ್ ಗಟ್ಟಿ, ಶುಭಂ, ಗೇವಿನ್ ಸೋನ್ಸ್, ರಾಜೇಶ್ ಬೆಂಗ್ರೆ, ತೇಜಸ್ ಎಸ್ ರಾವ್, ಕೀರ್ತನ್ ಎಸ್ ಶೆಟ್ಟಿ, ಹಾಗೂ ಪುಂಡಲೀಕ್ ಖಾರ್ವಿ ಇವರಿಂದ ನಗರ ಮಂಗಳೂರಿನ ಮಹಾನಗರ ಪಾಲಿಕಾ ಈಜು ಕೊಳದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ