Home Mangalorean News Kannada News ದ.ಕ. ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರಿಗೆ ಮಾರ್ಗಸೂಚಿ

ದ.ಕ. ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರಿಗೆ ಮಾರ್ಗಸೂಚಿ

Spread the love

ದ.ಕ. ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರಿಗೆ ಮಾರ್ಗಸೂಚಿ

ಮಂಗಳೂರು : ದ.ಕ.ಜಿಲ್ಲೆಯಿಂದ ಇತರ ರಾಜ್ಯಗಳಿಗೆ ಪ್ರಯಾಣಿಸುವವರಿಗೆ ಜಿಲ್ಲಾಧಿಕಾರಿ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದಾರೆ.

ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರು https://sevasindhu.karnataka.gov.in ಗೆ ಲಾಗಿನ್ ಆಗಿ ತಮ್ಮ ಹೆಸರು ಮತ್ತು ಇತರ ವಿವರಗಳನ್ನು ನವುೂದಿಸಿ ನೋಂದಣಿ ಮಾಡಿಕೊಳ್ಳಬೇಕು.

ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶವಿಲ್ಲದವರು ಗ್ರಾ.ಪಂ., ಪಟ್ಟಣ ಪಂಚಾಯತ್, ನಗರ ಸಭೆ, ಪುರಸಭೆ, ತಾಲೂಕು ಕಚೇರಿ, ನಗರ ಪಾಲಿಕೆಯ ವಲಯ ಕಚೇರಿ, ಮಂಗಳೂರು ವನ್ ಅಥವಾ ಮಂಗಳೂರು ನಗರ ವ್ಯಾಪ್ತಿಯ ನಾಡ ಚೇರಿಗಳನ್ನು ಸಂಪರ್ಕಿಸಬಹುದು.

ಸ್ವೀಕೃತವಾದ ಅರ್ಜಿಗಳನ್ನು ರಾಜ್ಯ ಮಟ್ಟದಲ್ಲಿ ಪರಿಶೀಲನೆ ನಡೆಸಿ ಸ್ವೀಕರಿಸುವ ರಾಜ್ಯದ ಸಹಮತಿ ಇದ್ದಲ್ಲಿ ಮಾತ್ರ ಅನುಮೋದಿಸಲಾಗುತ್ತದೆ. ಅನುಮೋದಿತ ಅರ್ಜಿದಾರರಿಗೆ ರಾಜ್ಯ ಸರಕಾರದ ನೋಡಲ್ ಅಧಿಕಾರಿಯವರ ನಿರ್ದೇಶನದ ಮೇರೆಗೆ ಪ್ರಯಾಣದ ವ್ಯವಸ್ಥೆ ಮಾಡಲಾಗುತ್ತದೆ. ಪ್ರಯಾಣಿಕರು ಟಿಕೆಟ್ ಖರೀದಿಸಿ ಪ್ರಯಾಣಿಸತಕ್ಕದ್ದು. ಪ್ರಯಾಣ ಪೂರ್ವದಲ್ಲಿ ವೈದ್ಯಕೀಯ ಸ್ಕ್ರೀನಿಂಗ್ ಮಾಡಲಾಗುವುದು. ಅನುಮೋದಿತ ಪ್ರಯಾಣಿಕರು ಪ್ರಯಾಣಿಸುವಾಗ ತಮ್ಮೊಂದಿಗೆ ವಾಹನ ಚಾಲನಾ ಪರವಾನಿಗೆ/ ಪಾಸ್‌ಪೋರ್ಟ್/ವೋಟರ್ ಐಡಿ / ಆಧಾರ್ ಕಾರ್ಡ್/ ಪಾನ್ ಕಾರ್ಡ್ ಹೊಂದಿರಬೇಕು.

ಈ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ ಕಂಟ್ರೋಲ್ ರೂಂ ನಂ. 1077 ಅಥವಾ ವಾಟ್ಸಾಪ್ ನಂ. 9483908000ನ್ನು ಬಳಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version