ದ.ಕ.ದಲ್ಲಿ ರವಿವಾರ ಏಳು ಮಂದಿಗೆ ಕೊರೋನ ಸೋಂಕು ದೃಢ
ಮಂಗಳೂರು : ದ.ಕ. ಜಿಲ್ಲೆಯಲ್ಲಿ ರವಿವಾರ ಮತ್ತೆ ಏಳು ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜೂ.17ರಂದು ಕುವೈತ್ನಿಂದ ಬಂದಿದ್ದ ಮೂವರು, ಪಿ-6618ರ ಸಂಪರ್ಕದಲ್ಲಿದ್ದ 30 ವರ್ಷದ ಮಹಿಳೆ ಹಾಗೂ 38 ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಪುತ್ತೂರಿನ 70 ವರ್ಷದ ವೃದ್ಧನನ್ನು ‘ಇನ್ಫ್ಲೂಯೆಂಝಾ ಲೈಕ್ ಇಲ್ನೆಸ್’ ಪ್ರಕರಣವೆಂದು ಪರಿಗಣಿಸಲಾಗಿದೆ.
ಇನ್ನು 56 ವರ್ಷದ ಬೆಳ್ತಂಗಡಿಯ ವ್ಯಕ್ತಿಯನ್ನು ‘ಸೆವೆರ್ ಅಕ್ಯೂಟ್ ರೆಸ್ಪಿರೇಟರಿ ಇನ್ಫೆಕ್ಷನ್ ಪ್ರಕರಣಕ್ಕೆ ಸೇರ್ಪಡೆಗೊಳಿಸಲಾಗಿದೆ. ಸೋಂಕಿತರೆಲ್ಲರೂ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.