ದ.ಕ. ಮುಸ್ಲಿಂ ಒಕ್ಕೂಟದಿಂದ 3 ಲಕ್ಷ ರೂ ಕುಟುಂಬ ಪರಿಹಾರ ನಿಧಿ ಹಸ್ತಾಂತರ
ಸೌದಿ ಅರೇಬಿಯಾ: ಸೌದಿ ಅರೇಬಿಯಾದ ರಿಯಾದಿನಲ್ಲಿ ಕಾರ್ಯಾಚರಿಸುತ್ತಿರುವ ಸಾಮಾಜಿಕ ಸಂಘಟನೆ ದಕ್ಷಿಣ ಕರ್ನಾಟಕ ಮುಸ್ಲಿಮ್ ಒಕ್ಕೂಟ (DKMO) ಇತ್ತೀಚಿಗೆ ನಿಧನರಾದ ಸದಸ್ಯರಾದ ಅಬ್ದುಲ್ ಗಫೂರ್ ಬಸ್ರುರ್ ಅವರ ಕುಟುಂಬಕ್ಕೆ 3 ಲಕ್ಷ ರೂಪಾಯಿಗಳನ್ನು ಸಮಿತಿಯ ಕುಟುಂಬ ಪರಿಹಾರ ನಿಧಿ ಯೋಜನೆಯ ಮೂಲಕ ನೀಡಿತು.
ಡಿಕೆಎಂಒ ಅಧ್ಯಕ್ಷ ಅಬ್ದುಲ್ ಅಜೀಜ್ ಬಜ್ಪೆ, ಡಿಕೆಎಂಒ ಕಾರ್ಯದರ್ಶಿ ಇಸ್ಮಾಯಿಲ್ ಮೊಂಟೆಪದವು, ಡಿಕೆಎಂಒ ಕಾರ್ಯಕಾರಿ ಸಮಿತಿ ಸದಸ್ಯ ಶಾಫಿ ತೋಡಾರ್ ಮತ್ತು ಅಬ್ಬಾಸ್ ಮಾಣಿ ಅವರು ದಿವಂಗತ ಅಬ್ದುಲ್ ಗಫೂರ್ ಬಸ್ರುರ್ ರವರ ಪುತ್ರನಿಗೆ ಪರಿಹಾರದ ಚೆಕ್ಕನ್ನು ಹಸ್ತಾಂತರಿಸಿದರು.
ಕುಟುಂಬದ ಆಧಾರಸ್ಥಂಭವಾಗಿರುವ ಅನಿವಾಸಿ ಭಾರತೀಯರ ಹಠಾತ್ ಮರಣದ ಸಂಧರ್ಭ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸ್ಥಾಪನೆಯಾದ ಡಿಕೆಎಂಒ ಸಂಸ್ಥೆ ಈ ಹಿಂದೆ ದಕ್ಷಿಣ ಕರ್ನಾಟಕದಾದ್ಯಂತ ಒಟ್ಟು 8 ಸದಸ್ಯರ ಕುಟುಂಬಕ್ಕೆ ಪರಿಹಾರ ನಿಧಿ ನೀಡಿದೆ. ಮುಖ್ಯವಾಗಿ ಅನಿವಾಸಿ ಭಾರತೀಯರು ಸೌದಿ ಅರೇಬಿಯಾದಲ್ಲಿ ಮತ್ತು ಸ್ವದೇಶದಲ್ಲಿ ಸಂಕಷ್ಟಕ್ಕೊಳಗಾದಾಗ ಸಹಕಾರ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಪ್ರಸ್ತುತ ಒಂದು ಸಾವಿರಕ್ಕೂ ಹೆಚ್ಚಿನ ದಕ್ಷಿಣ ಕರ್ನಾಟಕ ಮೂಲದ ಅನಿವಾಸಿ ಸದಸ್ಯರನ್ನು ಹೊಂದಿದೆ.
ಆರಂಭದಲ್ಲಿ, DKMO ಕುಟುಂಬ ಪರಿಹಾರ ನಿಧಿ (ಫ್ಯಾಮಿಲಿ ರಿಲೀಫ್ ಫಂಡ್) ಯೋಜನೆಯ ಮೂಲಕ ಮರಣ ಹೋದಿಂದ ಅನಿವಾಸಿ ಭಾರತೀಯರ ಕುಟುಂಬವನ್ನು ಬೆಂಬಲಿಸುವ ಕಾರ್ಯಸೂಚಿಯೊಂದರಿಂದ ರಚಿಸಲಾಗಿದೆ, ಆದರೆ ಈಗ ಸಂಸ್ಥೆಯು ಸದಸ್ಯರಿಗೆ ಅಗತ್ಯವಾದ ಹಣಕಾಸಿನ ಸಾಲ, ಸಂಕಷ್ಟದಲ್ಲಿದ್ದು ಊರಿಗೆ ತೆರಳುವವರಿಗೆ ವಿಮಾನ ಪ್ರಯಾಣ ಟಿಕೆಟ್, ಸಾಮಾನ್ಯ ಪರಿಹಾರ ನಿಧ, ಸ್ವದೇಶದಲ್ಲಿ ಸ್ವಯಂ ಉದ್ಯೋಗವನ್ನು ಕಂಡುಕೊಳ್ಳಲು ಮೈಕ್ರೋ ಸಾಲ, ವರಧಕ್ಷಿಣೆ ವಿರೋಧಿ ಅಭಿಯಾನ ಮುಂತಾದ ಯೋಜನೆಗಳನ್ನು ನಡೆಸುತ್ತಿದೆ.