ಧರ್ಮದ್ರೋಹಿಗಳು ಎಷ್ಟೇ ವಿರೋಧಿಸಿದರೂ, ಭವ್ಯವಾದ ರಾಮಮಂದಿರದ ನಿರ್ಮಾಣ ಆಗಿಯೇ ಸಿದ್ಧ ! – ಸ್ವಾಮಿ ಗೋವಿಂದದೇವಗಿರಿ ಮಹಾರಾಜರು

Spread the love

ಧರ್ಮದ್ರೋಹಿಗಳು ಎಷ್ಟೇ ವಿರೋಧಿಸಿದರೂ, ಭವ್ಯವಾದ ರಾಮಮಂದಿರದ ನಿರ್ಮಾಣ ಆಗಿಯೇ ಸಿದ್ಧ ! – ಸ್ವಾಮಿ ಗೋವಿಂದದೇವಗಿರಿ ಮಹಾರಾಜರು

ಹಿಂದಿನ ದಾಳಿಖೋರರು ಹಾಗೂ ಇಂದಿನ ಅವರ ಕೈಗೊಂಬೆಗಳು ರಾಮಮಂದಿರಕ್ಕೆ ಮಾತ್ರವಲ್ಲದೇ ಹಿಂದೂ ಸಂಸ್ಕೃತಿಯನ್ನು ಸಂಪೂರ್ಣ ನಾಶ ಮಾಡುವ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಅನೇಕ ಸಂಘಟನೆಗಳು, ಪಕ್ಷಗಳು ಹಾಗೂ ವ್ಯಕ್ತಿಗಳು ಸಕ್ರಿಯರಾಗಿದ್ದಾರೆ. ರಾಮಮಂದಿರದ ನಿರ್ಮಾಣದಿಂದಾಗಿ ಹಿಂದೂಗಳ ಶಕ್ತಿ ಜಾಗೃತವಾಗಲಿದೆ. ಆದ್ದರಿಂದ ಈ ಶಕ್ತಿಗಳ ವಿರೋಧ ಹೆಚ್ಚಾಗುತ್ತಿದೆ; ಆದರೆ ಧರ್ಮದ್ವೇಷಿಗಳು ಎಷ್ಟೇ ವಿರೋಧಿಸಿದರೂ, ಭವ್ಯವಾದ ರಾಮಮಂದಿರ ನಿರ್ಮಾಣವಾಗಿಯೇ ಸಿದ್ಧ, ಎಂದು ಖಂಡತುಂಡವಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಕೊಶಾಧ್ಯಕ್ಷ ಪ.ಪೂ. ಸ್ವಾಮಿ ಗೋವಿಂದದೇವಗಿರಿಜಿ ಮಹಾರಾಜರು ಪ್ರತಿಪಾದಿಸಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಚರ್ಚಾ ಹಿಂದೂ ರಾಷ್ಟ್ರ ಕೀ’ ಈ ‘ಆನ್ಲೈನ್’ ವಿಚಾರ ಸಂಕೀರ್ಣದಲ್ಲಿ ‘ರಾಮಮಂದಿರ ನಿರ್ಮಾಣಕ್ಕೆ ಈಗೇಕೆ ವಿರೋಧ ?’, ಈ ವಿಷಯದಲ್ಲಿ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು. ಈ ವಿಚಾರ ಸಂಕೀರ್ಣದಲ್ಲಿ ಅಯೋಧ್ಯೆ ಸಂತ ಸಮಿತಿಯ ಮಹಂತ ಪವನಕುಮಾರ ದಾಸ ಶಾಸ್ತ್ರೀಜಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ವಕ್ತಾರರಾದ ನ್ಯಾಯವಾದಿ ವಿಷ್ಣುಶಂಕರ ಜೈನ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರೂ ಉಪಸ್ಥಿತರಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತೀಶ ಕೊಚರೆಕರ ಹಾಗೂ ಶ್ರೀ. ಸುಮಿತ ಸಾಗವೇಕರ ಇವರು ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಮಾಡಿದರು. ಈ ಕಾರ್ಯಕ್ರಮವನ್ನು ಫೇಸ್ಬುಕ್ ಹಾಗೂ ಯೂ-ಟ್ಯೂಬ್ ಮೂಲಕ ೬೮,೪೭೯ ಜನರು ಪ್ರತ್ಯಕ್ಷವಾಗಿ ನೋಡಿದರೆ, ೨,೯೫,೯೩೦ ಜನರ ತನಕ ಈ ಕಾರ್ಯಕ್ರಮ ತಲುಪಿತು.

ರಾಮಮಂದಿರದೊಂದಿಗೆ ಅಯೋಧ್ಯೆಯಲ್ಲಿ ಧ್ವಂಸವಾಗಿದ್ದ ೩೬೦ ದೇವಸ್ಥಾನಗಳನ್ನೂ ಪುನಃ ಸ್ಥಾಪಿಸಬೇಕು ! -ಮಹಂತ ಪವನಕುಮಾರ ದಾಸ ಶಾಸ್ತ್ರೀಜಿ

ಕೇವಲ ರಾಮಮಂದಿರ ಮಾತ್ರವಲ್ಲದೇ, ಅಯೋಧ್ಯೆಯಲ್ಲಿನ ಲಕ್ಷ್ಮಣ, ಭರತ ಹಾಗೂ ಶತ್ರುಘ್ನದೊಂದಿಗೆ ಒಟ್ಟು ೩೬೦ ದೇವಸ್ಥಾಗಳನ್ನು ದಾಳಿಖೋರರು ಧ್ವಂಸ ಮಾಡಿ ಅದರ ಮೇಲೆ ಮಸೀದಿ ಹಾಗೂ ಕಬ್ರಸ್ತಾನವನ್ನು ನಿರ್ಮಿಸಿದರು. ಈ ಪ್ರಾಚೀನ ದೇವಸ್ಥಾನದ ಮೊಗಲೀಕರಣ ಮಾಡಿದ ಪ್ರಕರಣವನ್ನೂ ನ್ಯಾಯಾಲಯದಲ್ಲಿ ಮಂಡಿಸಲಾಗಿದೆ. ಅದಕ್ಕಾಗಿ ನಾವು ಸಾಧು-ಸಂತರು ಸತತ ಸಂಘರ್ಷ ಮಾಡುತ್ತಿದ್ದೇವೆ. ಆದ್ದರಿಂದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ರಾಮಮಂದಿರದೊಂದಿಗೆ ಅಯೋಧ್ಯೆಯಲ್ಲಿ ಧ್ವಂಸವಾಗಿದ್ದ ಎಲ್ಲ ೩೬೦ ದೇವಸ್ಥಾನಗಳನ್ನೂ ಪುನಃ ನಿರ್ಮಾಣ ಮಾಡಬೇಕು, ಎಂಬುದು ಸಮಸ್ತ ಹಿಂದೂಗಳ ಅಪೇಕ್ಷೆಯಾಗಿದೆ ಎಂದು ಸಂತ ಸಮಿತಿಯ ಮಹಂತ ಪವನಕುಮಾರ ದಾಸ ಶಾಸ್ತ್ರೀಜಿಯವರು ಈ ಸಮಯದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಮಾತನಾಡುತ್ತಾ, ಶ್ರೀರಾಮನ ಇಡೀ ಜೀವನವು ಸಂಘರ್ಷದಿಂದ ಕೂಡಿತ್ತು. ಆದ್ದರಿಂದ, ರಾಮಮಂದಿರ ನಿರ್ಮಾಣ ಮತ್ತು ರಾಮರಾಜ್ಯದ ಸ್ಥಾಪನೆ ಇವುಗಳಿಗಾಗಿ ನಾವೂ ಸಂಘರ್ಷ ಮಾಡಬೇಕಾಗುವುದು. ಹಿಂದೂಗಳ ೫೦೦ ವರ್ಷಗಳ ವನವಾಸ ಮುಗಿದು ಈಗ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಇದರಿಂದ ರಾಷ್ಟ್ರದ ಆಧ್ಯಾತ್ಮಿಕ ಚೇತನ ಹೆಚ್ಚಾಗಲಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆಶೀರ್ವಾದದಿಂದ ಈ ಕಾರ್ಯ ನಡೆಯುತ್ತಿದೆ. ಇದರಿಂದ ಮುಂದೆ ರಾಮರಾಜ್ಯ ಅಂದರೆ ಧರ್ಮಕಾರ್ಯವು ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಜೈನ್ ಇವರು ಮಾತನಾಡುತ್ತಾ, ಮುಂಬಯಿಯ ಸಾಕೇತ ಗೋಖಲೆಯವರು ‘ಮುಂಬಯಿಯಲ್ಲಿ ಕೊರೋನಾದ ನಿಯಮಗಳನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿರುವಾಗ ಆ ಬಗ್ಗೆ ಮನವಿಯನ್ನು ಸಲ್ಲಿಸದೇ ಅಯೋಧ್ಯೆಯಲ್ಲಿನ ರಾಮಮಂದಿರದ ಭೂಮಿಪೂಜೆಯ ವಿರುದ್ಧ ಏಕೆ ಮನವಿ ಸಲ್ಲಿಸಿದರು ? ಅವರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದ ನಂತರ ಆತನ ಮನೆ ಹತ್ತಿರ ’ಜೈ ಶ್ರೀರಾಮ್’ ಎಂದು ಘೋಷಣೆ ನೀಡಿದಾಗ ಮಹಾರಾಷ್ಟ್ರದ ಗೃಹಸಚಿವರು ಒಂದು ಗಂಟೆಯೊಳಗೆ ದೊಡ್ಡ ಪೊಲೀಸ್ ಭದ್ರತೆಯನ್ನು ಒದಗಿಸಿದರು. ಇದೆಲ್ಲವನ್ನೂ ನೋಡಿದಾಗ, ಕೆಲವು ರಾಜಕೀಯ ಪಕ್ಷಗಳು ಇದರ ಹಿಂದೆ ಕೈವಾಡವಿದೆ ಎಂಬುದು ಸ್ಪಷ್ಟವಾಗುತ್ತದೆ’, ಎಂದರು.’ ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ.ರಮೇಶ ಶಿಂದೆಯವರು ಮಾತನಾಡುತ್ತಾ, ಸರ್ವೋಚ್ಚ ನ್ಯಾಯಾಲಯವು ರಾಮ ಮಂದಿರದೊಂದಿಗೆ ಮಸೀದಿ ನಿರ್ಮಾಣಕ್ಕೂ ಅನುಮತಿ ನೀಡಿದೆ; ಆದರೆ ಮಸೀದಿಯನ್ನು ಯಾರೂ ವಿರೋಧಿಸಲಿಲ್ಲ. ರಾಮ ಮಂದಿರದ ವಿಷಯ ಬಂದಾಗ ಅದು ‘ಬುದ್ಧಭೂಮಿಯಾಗಿದೆ’, ‘ಅಲ್ಲಿ ಅನೇಕ ಜನರನ್ನು ಕೊಲ್ಲಲ್ಪಟ್ಟಿದ್ದರಿಂದ ಅದು ಸ್ಮಶಾನ’ ಮತ್ತು ಈಗ ಅದನ್ನು ಕೊರೋನಾದ ಆಧಾರದಲ್ಲಿ ವಿರೋಧಿಸಲಾಗುತ್ತಿದೆ. ಕೊರೋನಾ ಇರುವಾಗ ಮದ್ಯದಂಗಡಿಗಳನ್ನು ತೆರೆದರು ಆಗ ಅದರ ವಿರುದ್ಧ ಯಾರೂ ಮನವಿ ಸಲ್ಲಿಸಲಿಲ್ಲ. ಶ್ರೀಜಗನ್ನಾಥ ಪುರಿಯ ಯಾತ್ರೆಗೂ ಇದೇ ರೀತಿ ಆಕ್ಷೇಪ ವ್ಯಕ್ತವಾಯಿತು. ಭೂಮಿಪೂಜೆಗೆ ವಿರೋಧವು ಸಾರ್ವಜನಿಕ ಹಿತಾಸಕ್ತಿಗಾಗಿ ಅಥವಾ ಕರೋನಾ ಹರಡುವುದನ್ನು ತಡೆಯುವುದಕ್ಕಲ್ಲ ಬದಲಾಗಿ ರಾಮ ಮಂದಿರಕ್ಕೆ ಎಂದು ಹಿಂದೂಗಳು ನೆನಪಿನಲ್ಲಿಡಬೇಕು.


Spread the love