ಧರ್ಮಸ್ಥಳ: ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

Spread the love

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಪ್ರಸಕ್ತ 2015-16ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ-28 ರಂದು ನಡೆಯಿತು.

ಪ್ರಾರಂಭದಲ್ಲಿ ಗಣಹೋಮವನ್ನು ನೆರವೇರಿಸಿ ಬಳಿಕ ಶಾಲಾ ಸಂಚಾಲಕ ಶ್ರೀಯುತ ಅನಂತ ಪದ್ಮನಾಭ ಭಟ್‍ರವರು ಸುಮಾರು 9-15ರ ಸುಮಾರಿಗೆ ದೀಪ ಪ್ರಜ್ವಲಿಸಿ ಶುಭ ಹಾರೈಸುವುದರ ಮೂಲಕ ಶಾಲಾ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಅವರು ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿ  ಕಳೆದ 2014-15ನೇ ಸಾಲಿನ ಎಸ್.ಎಸ್.ಎಲ್.ಸಿ.ಪಬ್ಲಿಕ್ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಫಲಿತಾಂಶದೊಂದಿಗೆ ಶೇ.100 ಸಾಧನೆ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನೂ ಹಾಗೂ ಇದಕ್ಕೆಲ್ಲಾ ಕಾರಣಕರ್ತರಾದ ಶಿಕ್ಷಕವೃಂದದವರನ್ನೂ ಶಾಲಾ ಆಢಳಿತ ಮಂಡಳಿಯ ಪರವಾಗಿ ಶ್ಲಾಘಿಸಿದರು. ಮಾತ್ರವಲ್ಲದೆ ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉತ್ತಮ ನಾಗರಿಕರಾಗಿ ಬಾಳಿ ಸರ್ವರಿಗೂ ಕೀರ್ತಿ ತರಲೆಂದು ಹರಸಿದರು.

ಶಾಲಾ ಸಲಹಾಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪ್ರೇರೇಪಿಸಿ ಶುಭ ಕೋರಿದರು.

ನೂತನ ವರ್ಷದ ಶುಭಾರಂಭದ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕಿಯರು ತಮ್ಮ ಸ್ವ-ರಚಿತ ಕನ್ನಡ ಕವನವನ್ನು ಹಾಡಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂ.ವಿ. ಸರ್ವರನ್ನೂ ಸ್ವಾಗತಿಸಿ ಶಾಲಾ ಕಾರ್ಯ ಚಟುವಟಿಕೆಗಳು ಅತ್ಯ್ತ್ಯುತ್ತಮ ರೀತಿಯಲ್ಲಿ ನಿರ್ವಿಘ್ನವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ‘ಮರಳಿ ಬಾ ಶಾಲೆಗೆ’ ಹಾಗೂ ಇನ್ನಿತರ  ಮಹಾನ್ ವ್ಯಕ್ತಿಗಳ ವಿದ್ಯೆ ಮತ್ತು ಜ್ಞಾನಕ್ಕೆ ಸಂಬಂಧಿಸಿದ ಚಿಂತನಗಳನ್ನು ಭಿತ್ತಿಪತ್ರಗಳಲ್ಲಿ ಪ್ರದರ್ಶಿಸಲಾಗಿತ್ತು. ಶಾಲೆಯನ್ನು ರಂಗವಲ್ಲಿ ಮತ್ತು ತಳಿರು-ತೋರಣಗಳಿಂದ ಸಿಂಗರಿಸಿ, ಸಂಗೀತದ ಸುಸ್ವರದೊಂದಿಗೆ ವಿದ್ಯಾಭಿಮಾನಿ ಪೆÇೀಷಕರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಸಂತಸದಿಂದ ಆಕರ್ಷಿಸಿ ಬರಮಾಡಿಕೊಳ್ಳುವಂತಿತ್ತು. ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿವಿಧ ಹಾಡುಗಳ ಗಾಯನ, ನೃತ್ಯ ಮತ್ತು ಪ್ರಹಸನ ಕಾರ್ಯಕ್ರಮ ನೀಡಿ ಸರ್ವರನ್ನೂ ಮನರಂಜಿಸಿದರು.

ವಿದ್ಯಾರ್ಥಿ ಅನುಪಮ್‍ರಾಜ್‍ನ ನಿರೂಪಣೆಯೊಂದಿಗೆ ಆರಂಭಗೊಂಡ ಸದ್ರಿ ಕಾರ್ಯಕ್ರಮವು ವಿದ್ಯಾರ್ಥಿನಿ ಪೂರ್ಣಿಮಾಳ ವಂದನಾರ್ಪಣೆ ಹಾಗೂ ಸಿಹಿ ವಿತರಣೆಯೊಂದಿಗೆ ಮುಕ್ತಾಯಗೊಂಡಿತು. ಈ ರೀತಿ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮತ್ತು  ಶಾಲಾ ಸಹಶಿಕ್ಷಕರು ಹೆಚ್ಚಿನ ಉತ್ಸಾಹದಿಂದ ಹಾಜರಿದ್ದು ತಮ್ಮಲ್ಲಿನ ವಿದ್ಯಾಭಿಮಾನ ಮತ್ತು ಕಾರ್ಯತತ್ಪರತೆಗೆ ಉತ್ತಮ ಸಾಕ್ಷಿಯಾದರು.


Spread the love