ಧಾರ್ಮಿಕ ಪ್ರಭೋದಕ ಎಂ.ಎಂ.ಅಕ್ಬರ್ ರವರನ್ನು ಬಂಧಮುಕ್ತ ಗೊಳಿಸುವಂತೆ ಎಸ್.ಡಿ.ಪಿ.ಐ ಆಗ್ರಹ
ಮಂಗಳೂರು: ಹೈದರಬಾದ್ ಪೊಲೀಸರು ಧಾರ್ಮಿಕ ಪ್ರಭೋದಕ ಹಾಗೂ ಪೀಸ್ ಇಂಟರ್ ನ್ಯಾಷನಲ್ ರಾಷ್ಟ್ರೀಯ ನಿರ್ದೇಶಕರಾಗಿರುವ ಎಂ.ಎಂ.ಅಕ್ಬರ್ ರವರನ್ನು ಸುಳ್ಳು ಆರೋಪಿಗಳನ್ನು ಹೊರಿಸಿ ಅಕ್ರಮವಾಗಿ ಬಂಧಿಸಿದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತೇವೆ ಎಂದು ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿದ್ದಾರೆ.
ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಎಲ್ಲಾ ಧರ್ಮ ,ಪಂಗಡ ,ಜಾತಿ ಯವರಿಗೂ ಅವರವರ ಧರ್ಮಕ್ಕೆ ಅನುಸಾರವಾಗಿ ಜೀವಿಸುವಂvಹ ಅವಕಾಶ ಇದೆ. ದೇಶದ ಸಂವಿಧಾನದ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಪಾಲಿಸಿಕೊಂಡು ಅವರವರ ಧರ್ಮವನ್ನು ಪ್ರಚಾರಪಡಿಸಲು ಮತ್ತು ಆ ಪ್ರಕಾರ ಜೀವಿಸಲು ಅವಕಾಶವಿರುವಾಗ ಇಸ್ಲಾಮಿಕ್ ಸಂದೇಶಗಳನ್ನು ಬೋಧನೆ ಮಾಡುವುದು ಘೋರ ತಪ್ಪಾಗಿ ಚಿತ್ರಿಸಿಕೊಂಡು ಹಿಂದುತ್ವ ಪ್ಯಾಶಿಸಂ , ಮತ್ತು ಕೇಂದ್ರ ಸರಕಾರ ಮುಸಲ್ಮಾನರನ್ನು ಧಮನಿಸಲು ಪ್ರಯತ್ನಿಸುತ್ತಿರುವುದು ಈ ದೇಶದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.
ಮುಸಲ್ಮಾನರ ದಮನದ ಮುಂದುವರಿದ ಭಾಗವಾಗಿ ಇದೀಗ ಧಾರ್ಮಿಕ ವಿಧ್ವಾಂಸರನ್ನು ಗುರಿಯಾಗಿಸಿ ಅವರನ್ನು ಬಂಧಿಸುತ್ತಿರುವುದು ಮತ್ತು ಸಂವಿಧಾನಕವಾಗಿ ಕಾರ್ಯಚರಿಸುತ್ತಿರುವ ಸಂಘಟನೆಗಳನ್ನು ನಿರ್ಭಂಧಿಸುತ್ತಿರುವುದು ಕಂಡು ಬರುತ್ತಿದೆ.ಆದುದರಿಂದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತಿದ್ದೇನೆಂದರೆ, ರಾಷ್ಟ್ರಪತಿಯವರು ಮದ್ಯಪ್ರವೇಶ ಮಾಡಿಕೊಂಡು ಮುಸಲ್ಮಾನರ ಮೇಲೆ ಸರಕಾರ ನಡೆಸುತ್ತಿರುವ ದಮನದ ನೀತಿಯನ್ನು ನಿಲ್ಲಿಸಿ- ಈಗಾಗಲೇ ಬಂಧನದಲ್ಲಿರುವ ಧಾರ್ಮಿಕ ಪ್ರಚೋಧಕ ಎಂ.ಎಂ.ಅಕ್ಬರ್‍ರವರನ್ನು ಬಂಧನ ಮುಕ್ತಗೊಳೀಸಬೇಕೆಂದು ಆಗ್ರಹಿಸುತ್ತದೆ ಎಂದು ಅವರು ಹೇಳಿದ್ದಾರೆ.