Home Mangalorean News Kannada News ನಕಲಿ ವಾಹನ ನೋಂದಣಿ ಜಾಲ ಭೇಧಿಸಿದ ಪೋಲಿಸರು : ಇಬ್ಬರ ಬಂಧನ

ನಕಲಿ ವಾಹನ ನೋಂದಣಿ ಜಾಲ ಭೇಧಿಸಿದ ಪೋಲಿಸರು : ಇಬ್ಬರ ಬಂಧನ

Spread the love

ನಕಲಿ ವಾಹನ ನೋಂದಣಿ ಜಾಲ ಭೇಧಿಸಿದ ಪೋಲಿಸರು : ಇಬ್ಬರ ಬಂಧನ

ಮಂಗಳೂರು: ವಾಹನಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಹಣಕಾಸು ಸಂಸ್ಥೆಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ವಂಚಿಸುತ್ತಿದ್ದು  ಹಾಗೂ ನಕಲಿ ನೊಂದಾಣೆ ಸಂಖ್ಯೆ ಅಳವಡಿಸಿ ವಾಹನಗಳನ್ನು ಉಪಯೋಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಉಳಾಯಿಬೆಟ್ಟು ನಿವಾಸಿ ನವೀನ್ ನೊರೊನ್ಹಾ (41) ಮತ್ತು ಬೆಂದೂರ್ ನಿವಾಸಿ ವಿನ್ಸೆಂಟ್ ಸಿಕ್ವೇರಾ (59) ಎಂದ ಗುರುತಿಸಲಾಗಿದೆ.

ಮಂಗಳೂರು – ಮೂಡುಶೆಡ್ಡೆ  ನಡುವೆ  ರೂಟ್ ನಂಬ್ರ: 3ಬಿ ಯಲ್ಲಿ ಸಂಚರಿಸುವ ಕೆಎ-19-ಬಿ-4866  ನೇ  ಬಸ್ಸಿಗೆ ನಕಲಿ ನೊಂದಾಣೆ ಸಂಖ್ಯೆಯನ್ನು ಅಳವಡಿಸಿ ಸಂಚಾರ ನಡೆಸುತ್ತಿದೆ ಎಂದು ಮಂಗಳೂರು ಸಿಸಿಬಿ ಪೊಲೀಸ್ ದೊರೆತ ಖಚಿತ ವರ್ತಮಾನದಂತೆ  ಆ ಬಸ್ಸನ್ನು ಮಂಗಳೂರು ನಗರದ ಮೂಡುಶೆಡ್ಡೆ ಬಳಿ ಪರಿಶೀಲಿಸಿದಾಗ  ಈ ಬಸ್ಸಿಗೆ ಬೇರೆ ಬಸ್ಸಿನ ಚಾಸಿಸ್ ನಂಬ್ರವನ್ನು ಹಾಗೂ ನೊಂದಾಣೆ ಸಂಖ್ಯೆಯನ್ನು ಅಳವಡಿಸಿ ಓಡಾಟ ನಡೆಸುತ್ತಿದ್ದುದರಿಂದ ಈ ರೀತಿಯಾಗಿ ವಾಹನದ ನಂಬ್ರವನ್ನು ಬದಲಾವಣೆ ಮಾಡಿದ ಆರೋಪಿಗಳು ವರ್ಕ್ ಶಾಪಿನಲ್ಲಿ  ಚಾಸಿಸ್ ನಂಬ್ರವನ್ನು ನಕಲಿಯಾಗಿ ಅಳವಡಿಸಿರುವುದಾಗಿದೆ.

ಆರೋಪಿ ನವೀನ್ ನೊರೊನ್ಹಾ ನ ಮಾಹಿತಿಯಂತೆ ಇದೇ ರೀತಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ನಕಲಿ ನೊಂದಾಣೆ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ 2 ಟ್ರಕ್ ಹಾಗೂ ಒಂದು ಜೆಸಿಬಿ ಯನ್ನು  ಹಾಗೂ ನಕಲಿ ಚಾಸಿಸ್ ನಂಬ್ರವನ್ನು ಸೃಷ್ಠಿ ಮಾಡಲು ಉಪಯೋಗಿಸಿದ  ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 81,09,000/- ಆಂದಾಜಿಸಲಾಗಿದೆ.

ಅಲ್ಲದೇ ಈ ರೀತಿ ಸರಕಾರಕ್ಕೆ ತೆರಿಗೆ ಹಣ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಮರುಪಾವತಿ ಮಾಡದೇ ವಂಚನೆ ಮಾಡುವ ಈ ವ್ಯವಸ್ಥಿತ ಜಾಲದಲ್ಲಿ ಭಾಗಿಯಾದವರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ.  ಆರೋಪಿಗಳ ಪತ್ತೆ ಕಾರ್ಯಚರಣೆ ಮಾಡಲಾಗುತ್ತಿದೆ. ಆರೋಪಿಗಳು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಲಾಭಗಳಿಸುವ ಸಮಾನ ಉದ್ದೇಶದಿಂದ ಒಟ್ಟು ಸೇರಿ ಒಳಸಂಚು ನಡೆಸಿ ಲಾರಿ ಮತ್ತು ಜೆಸಿಬಿ ಯನ್ನು ಕಳವು ಮಾಡಿಕೊಂಡು ಅವುಗಳಲ್ಲಿ ಬಸ್ಸು ಮತ್ತು ಲಾರಿಗಳ ಚಾಸಿಸ್ ನಂಬ್ರಗಳನ್ನು ಅದಲು ಬದಲಾಯಿಸಿ ಹಾಗೂ ಇಂಜಿನ್ ನಂಬ್ರಗಳನ್ನು ತಿರುಚಿಸಿ    ( ವಿರೂಪಗೊಳಿಸಿ) ನಂತರ ಬೇರೆ ನೊಂದಾಣೆ ನಂಬ್ರಗಳನ್ನು ನೀಡಿ ಅವುಗಳು ನೈಜವಾದುದೆಂದು ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಆರ್ ಟಿಒ ಸಂಬಂಧಿತ ಇಲಾಖೆಯ ನಕಲಿ ಸಹಿ ಮೊಹರು ಸೃಷ್ಠಿಸಿ ಸಂಬಂಧಪಟ್ಟ ಇಲಾಖೆಗೆ  ಹಾಗೂ ಹಣಕಾಸು ಸಂಸ್ಥೆಗಳಿಗೆ ಮೋಸ ಮತ್ತು ವಂಚನೆ ನಡೆಸುತ್ತಿದ್ವರು.

ಆರೋಪಿ ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗುವುದು

ಪೊಲೀಸ್ ಕಮೀಷನರ್   ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ   ಹನುಮಂತರಾಯ  ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.


Spread the love

Exit mobile version