ನಗರಕ್ಕೆ ಇನ್ನುಮುಂದೆ ವಾರದಲ್ಲಿ ನಾಲ್ಕು ದಿನ ನೀರು ಪೊರೈಕೆ ; ಕವಿತಾ ಸನೀಲ್
ಮಂಗಳೂರು: ಮಂಗಳೂರು ನಗರಕ್ಕೆ ಇನ್ನು ಮುಂದೆ 4 ದಿನ ನಿರಂತರ ನೀರು ಪೊರೈಕೆಯಾಗಲಿದ್ದು, ಬಳಿ ಎರಡು ದಿನಗಳ ಕಾಲ ಪೊರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಸ್ತುತ ತುಂಬೆ ಅಣೆಕಟ್ಟಿನಲ್ಲಿ 4.67 ನೀರಿನ ಸಂಗ್ರಹವಿದ್ದು, ಎಎಂಆರ್ ಡ್ಯಾಮ್ ನಲ್ಲಿ 17.73 ಮೀಟರ್ ನೀರು ಶೇಖರಣೆ ಇದೆ. ಇದರ ಆಧಾರದಲ್ಲಿ ಎಪ್ರಿಲ್ ಅಂತ್ಯದವರೆಗೆ 4 ದಿನಗಳ ಕಾಲ ನಿರಂತರ ನೀರು ಪೊರೈಸಲು ಮತ್ತು ಎರಡು ದಿನ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಎಪ್ರಿಲ್ ಅಂತ್ಯದ ವೇಳೆ ಮಳೆಯಾದಲ್ಲಿ ಅಥವಾ ಮಳೆಯಾಗದೇ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಇಳಿಕೆಯಾದರೆ ನೀರು ಪೊರೈಕೆಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದರು.