ನಗರಸಭಾ ಸದಸ್ಯ ರಮೇಶ್ ಕಾಂಚನ್ ರಿಂದ ಆಶಾ ಕಾರ್ಯಕರ್ತೆಯರಿಗೂ ಪಡಿತರ ಕಿಟ್ ವಿತರಣೆ
ಉಡುಪಿ: ಲಾಕ್ ಡೌನ್ ಸಮಯದಲ್ಲಿ ಕೊರೋನಾ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ ಉಡುಪಿಯ ಆಶಾ ಕಾರ್ಯಕರ್ತೆಯರಿಗೆ ಪಡಿತರ ಕಿಟ್ ನ್ನು ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದಲ್ಲಿ ಶನಿವಾರ ವಿತರಿಸಲಾಯಿತು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ|ನಾಗರತ್ನ ಅವರು ಆಶಾ ಕಾರ್ಯಕರ್ತೆಯರಿಗೆ ಕೊಡಮಾಡಿದ ಪಡಿತರ ಕಿಟ್ ನ್ನು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ನಗರಸಭಾ ಸದಸ್ಯ ರಮೇಶ್ ಕಾಂಚನ್ ಸರಕಾರದ ಯಾವುದೇ ಕೆಲಸವಾಗಿ ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನು ಆಶಾಕಾರ್ಯಕರ್ತೆಯರು ನೆರವೇರಿಸುತ್ತಾರೆ. ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಸೇವೆ ನಿಜವಾಗಿಯೂ ಶ್ಲಾಘನೀಯವಾಗಿದೆ. ಗ್ರಾಮದ ಪ್ರತಿ ಮನೆಮನೆಗೆ ಭೇಟಿ ನೀಡುತ್ತಾ ನಮ್ಮ ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಅವರಿಗೆ ಸರಕಾರದಿಂದ ಸಿಗುವ ವೇತನ ಕಡಿಮೆಯಾದರೂ ಕೂಡ ವರ್ಷವಿಡೀ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಇಂತಹ ಕೊರೋನಾ ಸಮಸ್ಯೆಯ ಸಂದರ್ಬದಲ್ಲಿ ಅವರಿಗೆ ನೇರವಾಗುವ ನಿರ್ಧಾರವನ್ನು ಕೈಗೊಂಡಿದ್ದು ದಾನಿಗಳು ಹಾಗೂ ತನ್ನ ಸ್ವಂತ ನೆರವಿನಿಂದ 35 ಕಾರ್ಯಕರ್ತೆಯರಿಗೆ ಪಡಿತರ ಕಿಟ್ ನೀಡಲಾಗುತ್ತದೆ. ಸೋಮವಾರ ಮತ್ತೆ ಕೆಲವು ಆಶಾ ಕಾರ್ಯಕರ್ತೆಯರಿಗೆ ಪರ್ಕಳದಲ್ಲಿ ಕೂಡ ವಿತರಿಸಲಾಗುವುದು ಎಂದರು.
ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.