ನಗರಸಭೆಯ ಕಸದ ಬುಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ, ಆಸ್ಪತ್ರೆಗೆ ದಾಖಲು

Spread the love

ನಗರಸಭೆಯ ಕಸದ ಬುಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ, ಆಸ್ಪತ್ರೆಗೆ ದಾಖಲು

ಉಡುಪಿ: ತಾಯಿಯೊಬ್ಬಳು ಮಗುವನ್ನು ಹೆತ್ತು ಬಳಿಕ ಕಸದ ಬುಟ್ಟಿಗೆ ಎಸೆದು ಹೋದ ಘಟನೆ ಉಡುಪಿ ನಗರದ ಭಾಗದ ಚಿತ್ತರಂಜನ್ ಸರ್ಕಲ್ ಬಳಿ ಸೋಮವಾರ ನಡೆದಿದೆ.

ಸೋಮವಾರ ಬೆಳಿಗ್ಗೆ ನಗರಸಭೆಯ ಪೌರ ಕಾರ್ಮಿಕರೊಬ್ಬರು ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮಗುವಿನ ಅಳು ಕೇಳಿಸಿದ್ದು ಹುಡುಕಾಡಿದಾಗ ಪಕ್ಕದ ನಗರಸಭೆಯ ಕಸದ ಬುಟ್ಟಿಯಲ್ಲಿ ಹೆಣ್ಣು ಮಗುವೊಂದು ಇರುವುದು ಪತ್ತೆಯಾಗಿದ್ದು ಕೂಡಲೇ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದು ಅವರು ಮಗವನ್ನು ಉಡುಪಿ ಸರಕಾರಿ ಮಹಿಳಾ ಹೆರಿಗೆ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ.

ಪ್ರಸ್ತುತ ಮಗುವಿಗೆ ವೈದ್ಯರಿಂದ ಆರೈಕೆ ನಡೆಯುತ್ತಿದ್ದು ಆಸ್ಪತ್ರೆಯಲ್ಲಿ ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

ಉಡುಪಿ ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love