‘ನದಿಗಳಿಗಾಗಿ ಜಾಥಾ’ ಅಭಿಯಾನಕ್ಕೆ ಮಾರ್ಪಳ್ಳಿ ಚಂಡೆ ಬಳಗದ ಸಾಥ್
ಉಡುಪಿ: ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ದೇಶದ ನದಿಗಳನ್ನು ಉಳಿಸಲು ಆರಂಭವಾಗಿರುವ ಆಂದೋಲನಕ್ಕೆ ಉಡುಪಿ ಮಾರ್ಪಳ್ಳಿ ಚೆಂಡೆ ಬಳಗವು ಹುಲಿವೇಷದ ಮೂಲಕ ಬೆಂಬಲ ಸೂಚಿಸಿದೆ.
ದೇಶದಲ್ಲಿನ ನದಿಗಳ ಉಳಿವಿಗಾಗಿ ಅರಿವು ಮೂಡಿಸಲು ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ ಹಮ್ಮಿಕೊಂಡಿರುವ ‘ನದಿಗಳಿಗಾಗಿ ರ್ಯಾಲಿ’ (ರ್ಯಾಲಿ ಫಾರ್ ರಿವರ್) ಅಭಿಯಾನವು ರಾಜ್ಯಕ್ಕೆ ಆಗಮಿಸಿದ್ದು, ವಿವಿಧೆಡಯಲ್ಲಿ ಬೃಹತ್ ಸಮಾವೇಶಗಳು ನಡೆಯಲಿವೆ.
ಇದಕ್ಕೆ ಬೆಂಬಲವಾಗಿ ನಮ್ಮ ಸುತ್ತಮುತ್ತಲಿನ ನದಿಗಳ ಉಳಿಕೆಗಾಗಿ ಉಡುಪಿ ಮಾರ್ಪಳ್ಳಿ ಚಂಡೆ ಬಳಗವು ಇತ್ತೀಚೆಗೆ ನಡೆದ ಕೃಷ್ಣಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ವೇಳೆ ಸದ್ಗುರು ಜಗ್ಗಿ ವಾಸುದೇವ್ ಹಮ್ಮಿಕೊಂಡಿರುವ ‘ನದಿಗಳಿಗಾಗಿ ರ್ಯಾಲಿ’ಅಭಿಯಾನದ ಪ್ರಚಾರವನ್ನು ಉಡುಪಿಯಲ್ಲಿ ನಡೆಸಿತು. ಇದಕ್ಕೆ ಬೆಂಬಲವೆಂತೆ ಹುಲಿವೇಷದ ಮೂಲಕ ನದಿಗಳ ಉಳಿಯುವಿಕೆಯ ಕುರಿತು ಜಾಗೃತಿ ಮೂಡಿಸುವ ವಿಶೇಷ ವೀಡಿಯೋ ರಚಿಸಿ ಯೂಟ್ಯೂಬ್ ಮೂಲಕ ಪ್ರಚಾರಪಡಿಸಿದೆ.
ಸೆಪ್ಟೆಂಬರ್ 3ರಂದು ಕೊಯಮತ್ತೂರಿನಲ್ಲಿ ಆರಂಭಗೊಂಡಿರುವ ರ್ಯಾಲಿ, ಅಕ್ಟೋಬರ್ 2ರಂದು ನವದೆಹಲಿಯಲ್ಲಿ ಸಮಾರೋಪಗೊಳ್ಳಲಿದೆ.
ಇದು ಪ್ರತಿಭಟನೆ ಅಲ್ಲ. ಇದು ಆಂದೋಲನವಲ್ಲ. ನಮ್ಮ ನದಿಗಳು ನಶಿಸಿ ಹೋಗುತ್ತಿವೆ ಎಂಬ ಅರಿವು ಮೂಡಿಸಲು ಒಂದು ಅಭಿಯಾನವಾಗಿದೆ. ನೀರನ್ನು ಬಳಸಿಕೊಳ್ಳುವ ಪ್ರತಿಯೊಬ್ಬರೂ ನದಿಗಳ ಉಳಿವಿಗಾಗಿ ನಡೆಯುತ್ತಿರುವ ಈ ಚಳುವಳಿಯಲ್ಲಿ ಭಾಗವಹಿಸಬೇಕು. ಭಾರತದ ನದಿಗಳನ್ನ ಪುರುಜ್ಜೀವನಗೊಳಿಸಬೇಕಾದ ತುರ್ತು ಕುರಿತಂತೆ ಅರಿವು ಮೂಡಿಸಲು ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತಿರುವುದಾಗಿ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಹೇಳಿದ್ದಾರೆ. ಈ ಅಭಿಯಾನ ಕೃಷಿ ಮತ್ತು ಅರಣ್ಯ ರಕ್ಷಣೆ ಬಗ್ಗೆಯೂ ಅರಿವು ಮೂಡಿಸಲಿದೆ.
ಇಶಾ ಫೌಂಡೇಶನ್ ಸಹಯೋಗದೊಂದಿಗೆ ಮಧ್ಯಪ್ರದೇಶ ಸರ್ಕಾರ ನರ್ಮದಾ ನದಿಯ ಪುನರುಜ್ಜೀವನಗೊಳಿಸುವ ಗುರಿಯೊಂದಿಗೆ. ಮರಗಳನ್ನ ನೆಡುವ ಮತ್ತು ನದಿಗಳ ಉಳಿವಿನ ಬಗ್ಗೆ ಅರಿವು ಮೂಡಿಸಲು ದೊಡ್ಡ ಚಳುವಳಿ ಆರಂಭಿಸಿದೆ. ಮಹಾರಾಷ್ಟ್ರ ಸರ್ಕಾರವೂ ಸಹ ಗೋದಾವರಿ ನದಿಯ ಪುನಶ್ಚೇತನಗೊಳಿಸುವುದಕ್ಕೆ ಮತ್ತು 50 ಕೋಟಿ ಮರಗಳ ನೆಡುತೋಪು ಮಾಡಲು ಮಹಾರಾಷ್ಟ್ರದ ಸರ್ಕಾರದೊಂದಿಗೆ ಇಶಾ ಫೌಂಡೇಶನ್ ಜ್ಞಾಪನಾ ಪತ್ರವೊಂದಕ್ಕೆ ಸಹಿ ಹಾಕಿದೆ.
ಇಶಾ ಫೌಂಡೇಶನ್ ನಡೆಸುತ್ತಿರುವ ನದಿಗಳ ಪುನಶ್ಚೇತನ ಕುರಿತಾದ ಈ ಜಾಗೃತಿ ಅಭಿಯಾನಕ್ಕೆ (8000980009) ಟೋನ್ ಫ್ರೀ ನಂಬರ್`ಗೆ ಉಚಿತ ಮಿಸ್ ಕೊಟ್ಟು ಕೊಟ್ಟು ಬೆಂಬಲ ವ್ಯಕ್ತಪಡಿಸಬಹುದಾಗಿದೆ. ಈ ಅಭಿಯಾನದಲ್ಲಿ ದೇಶಾದ್ಯಂತ ಅಪಾರ ಪ್ರಮಾಣದ ಯುವ ಪಡೆ ಭಾಗವಹಿಸುತ್ತಿದೆ. ಸ್ವಯಂಪ್ರೇರಿತರು, ಪಂಚಾಯ್ತಿ ಸದಸ್ಯರು ಹೀಗೆ ವಿವಿಧ ಕ್ಷೇತ್ರಗಳ ಜನರು ಭಾಗವಹಿಸುತ್ತಿದ್ದಾರೆ. ಈ ಚಳುವಳಿಯ ಭಾಗವಾಗಿ ಸಮಾಜದ ಎಲ್ಲ ವಲಯಗಳನ್ನ ತಲುಪಲು ಆನ್`ಲೈನ್ ಮತ್ತು ಆಫ್`ಲೈನ್`ನಲ್ಲಿ 21 ಪ್ರಮುಖ ಕಾರ್ಯಕ್ರಮಗಳು ಮತ್ತು ಹತ್ತು ಹಲವು ಸಣ್ಣ ಪುಟ್ಟ ಕಾರ್ಯಕ್ರಮಗಳು ನಡೆಯಲಿವೆ.