Home Mangalorean News Kannada News ನನಗೆ ಮಗಳಿದ್ದಾಳೆ ಎಂಬುದು ಸಾಬೀತಾದರೆ ನಾನು ಪೀಠತ್ಯಾಗ ಮಾಡಲು ಸಿದ್ಧ ಎಂದ ಪೇಜಾವರದ ವಿಶ್ವೇಶತೀರ್ಥ ಶ್ರೀಗಳು

ನನಗೆ ಮಗಳಿದ್ದಾಳೆ ಎಂಬುದು ಸಾಬೀತಾದರೆ ನಾನು ಪೀಠತ್ಯಾಗ ಮಾಡಲು ಸಿದ್ಧ ಎಂದ ಪೇಜಾವರದ ವಿಶ್ವೇಶತೀರ್ಥ ಶ್ರೀಗಳು

Spread the love

ನನಗೆ ಮಗಳಿದ್ದಾಳೆ ಎಂಬುದು ಸಾಬೀತಾದರೆ ನಾನು ಪೀಠತ್ಯಾಗ ಮಾಡಲು ಸಿದ್ಧ ಎಂದ ಪೇಜಾವರದ ವಿಶ್ವೇಶತೀರ್ಥ ಶ್ರೀಗಳು

ಉಡುಪಿ: ನನಗೆ ಮಗಳಿದ್ದಾಳೆ ಎಂಬುದು ಸಾಬೀತಾದರೆ ನಾನು ಪೀಠತ್ಯಾಗ ಮಾಡಲು ಸಿದ್ಧ ಎಂದು ಪೇಜವಾರದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.

ಶೀರೂರು ಲಕ್ಷ್ಮೀವರತೀರ್ಥ ಸ್ವಾಮೀಜಿಗಳ ಸಾವು ಸಂಭವಿಸಿದ ನಂತರಹಲವು ಘಟನೆಗಳು ನಡೆದಿವೆ. ಶೀರೂರು ಶ್ರೀಗಳು ಪೇಜಾವರರ ಕುರಿತು ಆಡಿರುವ ಮಾತುಗಳುಳ್ಳ ಆಡಿಯೋವೊಂದು ಕೂಡ ಇತ್ತೀಚೆಗೆ ಮಾಧ್ಯಮಗಳಿಗೆ ಬಿಡುಗಡೆಯಾಗಿತ್ತು. ಅದರಲ್ಲಿ ಪೇಜಾವರರ ಮೇಲೆ ಹಲವು ಆರೋಪಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಪೇಜಾವರ ಶ್ರೀಗಳು ಚೆನ್ನೈನಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲೇನಿದೆ?

ನನ್ನ ತಾರುಣ್ಯದಲ್ಲಿ ನನಗೆ ಸ್ತ್ರೀ ಸಂಘವಿತ್ತು ಎಂಬುದು, ತಮಿಳುನಾಡಿನಲ್ಲಿ ನನಗೆ ಮಗಳಿದ್ದಾಳೆ ಎಂಬುದು ಶುದ್ಧ ಸುಳ್ಳು. ಈ ಹಿಂದೆ ಇದೇ ಅಭಿಪ್ರಾಯ ವ್ಯಕ್ತಪಡಿಸಿ ಕೆಲವರು ನನಗೆ ಪತ್ರ ಬರೆದಿದ್ದರು. ನನಗೆ ಗಂಡು ಮಗು ಇದೆ ಎಂದೂ ಆ ಪತ್ರಗಳಲ್ಲಿ ಬರೆಯಲಾಗಿತ್ತು. ಆದರೆ, ಇವೆಲ್ಲ ಕೇವಲ ಕಲ್ಪನೆ. ದೇಶದಲ್ಲಿ ಯಾರೂ ಈ ವಿಷಯವನ್ನು ನಂಬುವುದಿಲ್ಲ. ಈ ಸಂಬಂಧ ಯಾವುದೇ ಪರೀಕ್ಷೆ, ವಿಚಾರಣೆ ಎದುರಿಸಲು ನಾನು ಸಿದ್ಧ. ನನ್ನ ಮೇಲಿನ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಶೀರೂರು ಶ್ರೀಗಳ ಬಗೆಗಿನ ನನ್ನ ಹೇಳಿಕೆಯನ್ನು ಹಲವರು ಆಕ್ಷೇಪಿಸಿದ್ದಾರೆ. ಮಾಧ್ಯಮದವರು ಪ್ರಶ್ನೆ ಕೇಳಿದಾಗ ನಾನು ಉತ್ತರ ನೀಡಿದ್ದೆ ಅಷ್ಟೆ ಎಂದು ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

ಯಾವ ಪೀಠಾಧಿಪತಿಗಳನ್ನು ಇಳಿಸಿಲ್ಲ

ಇನ್ನು ಹಲವು ಪೀಠಾಧಿಪತಿಗಳನ್ನು ಪೇಜಾವರರು ಕೆಳಗಿಳಿಸಿದರು ಎಂಬ ಆರೋಪಕ್ಕೂ ಉತ್ತರ ನೀಡಿರುವ ಅವರು, ರಘುವಲ್ಲಭ ತೀರ್ಥ, ಮನೋಜ್ಞ ತೀರ್ಥ ಸ್ವಾಮೀಜಿಗಳು, ಸುಬ್ರಹ್ಮಣ್ಯದ ಸ್ವಾಮೀಜಿಗಳ ಪೀಠತ್ಯಾಗದಲ್ಲಿ ನನ್ನ ಪಾತ್ರವಿಲ್ಲ. ವಿಶ್ವವಿಜಯ ಶ್ರೀಗಳನ್ನು ಕೆಳಗಿಳಿಸಿಲ್ಲ. ಅವರಾಗಿಯೇ ಹೋದರು, ನನಗೆ ತಿಳಿಸದೆ ಪೀಠತ್ಯಾಗ ಮಾಡಿದ್ದರು. ಎಲ್ಲದಕ್ಕೂ ನನ್ನನ್ನು ದೂಷಿಸುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ಶೀರೂರು ಸ್ವಾಮೀಜಿಯಿಂದ ನಾನು ಹಣ ಅಪೇಕ್ಷಿಸಿರಲಿಲ್ಲ. ಈ ಬಗೆಗಿನ ತನಿಖೆಗೆ ನಾನು ಸಿದ್ಧ ಎಂದು ಅವರು ತಿಳಿಸಿದ್ದಾರೆ.


Spread the love

Exit mobile version