Home Mangalorean News Kannada News ನನ್ನ ಜೀವನ ಜನರ ಸೇವೆಗೆ ಮೀಸಲು; ಪ್ರಮೋದ್ ಮಧ್ವರಾಜ್

ನನ್ನ ಜೀವನ ಜನರ ಸೇವೆಗೆ ಮೀಸಲು; ಪ್ರಮೋದ್ ಮಧ್ವರಾಜ್

Spread the love

ನನ್ನ ಜೀವನ ಜನರ ಸೇವೆಗೆ ಮೀಸಲು; ಪ್ರಮೋದ್ ಮಧ್ವರಾಜ್

ಉಡುಪಿ: ದೇವರ ಹಾಗೂ ಜನತೆಯ ಅನುಗ್ರಹದಿಂದ ಈ ಹಂತಕ್ಕೆ ಬೆಳದಿದ್ದು, ಮುಂದೆಯೂ ನನ್ನ ಜೀವನವನ್ನು ಅವರ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಉಡುಪಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ತಮ್ಮ 49ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಬಳಗ ನಗರದ ಪುರಭವನದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

image001pramod-madhwaraj-birthday-20161017

ನನ್ನ ಕಾರ್ಯಕರ್ತರು ನನ್ನ ಮೇಲೆ ಇರಿಸಿದ ಪ್ರೀತಿಗೆ ನಾನು ಚಿರಋಣಿಯಾಗಿದ್ದು, ಅವರೇ ನನ್ನ ಜೀವನದ ದೊಡ್ಡ ಆಸ್ತಿಯಾಗಿದ್ದಾರೆ. ನಾನು ಶಾಸಕನಾಗಿ ಮೂರು ವರ್ಷದ ಸೇವೆಯಲ್ಲಿ ಒಂದು ಬಾರಿಯೂ ಕೂಡ ನನ್ನ ಕ್ಷೇತ್ರದ ಯಾವುದೇ ಮತದಾರ ನನ್ನಲ್ಲಿ ಜಗಳ ಮಾಡುವ ಪರಿಸ್ಥಿತಿ ಬಂದಿಲ್ಲ ನನ್ನ ಕೆಲಸ ಮುಗಿದಿಲ್ಲ ಬದಲಾಗಿ ಇನ್ನೂ ಇದೆ. ಕ್ಷೇತ್ರದ ಜನತೆಯ ಸೇವೆಗೆ ಸದಾ ಬದ್ಧನಾಗಿದ್ದು ದೀನದಲಿತರ ಸೇವೆಯನ್ನು ನಿರಂತರ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.

ಈ ವೇಳೆ ಮಾತನಾಡಿದ ಬೊಲ್ಯೋಟ್ಟು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಮನುಷ್ಯರಲ್ಲಿ ಸಂಪತ್ತು ಬಂದಾಗ ಅವರ ಜೀವನ ಶೈಲಿ ಬದಲಾಗುತ್ತದೆ ಆದರೆ ಎಷ್ಟೇ ಸಂಪತ್ತು ತಮ್ಮಲ್ಲಿ ಇದ್ದರೂ ಕೂಡ ಪ್ರಮೋದ್ ಮಧ್ವರಾಜ್ ಎಂದು ತಮ್ಮ ಸರಳತೆಯನ್ನು ಮರೆತಿಲ್ಲ. ತಮ್ಮ ಸಂಪತ್ತಿನ ಒಂದು ಭಾಗವನ್ನು ದೀನದಲಿತರಿಗಾಗಿ ಮೀಸಲಿಡುವ ಪ್ರಮೋದ್ ಸರ್ವಧರ್ಮದವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅವರ ನಿಷ್ಟೆ ಪ್ರಾಮಾಣಿಕತೆ ಇಂದು ಅವರಿಗೆ ರಾಜಕೀಯದಲ್ಲಿ ಇಂತಹ ಉನ್ನತ ಸ್ಥಾನವನ್ನು ತಂದುಕೊಟ್ಟಿದೆ ಇವರ ರಾಜ್ಯದ ಎಲ್ಲಾ ರಾಜಕಾರಣಿಗಳಿಗಿಂತ ಭಿನ್ನವಾಗಿದ್ದು ಇದಕ್ಕೆ ಕಾರಣ ಅವರ ಸರಳ ಆದರ್ಶ ಎಂದು ಹೇಳಿದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾ ಮಾತನಾಡಿ ಪ್ರಮೋದ್ ಮಧ್ವರಾಜ್ ಜನರ ಮಂತ್ರಿ ಎಂಬ ಹೆಸರನ್ನು ಪಡೆದಿದ್ದು ಇದಕ್ಕೆ ಅವರ ಎಲ್ಲರೊಂದಿಗೆ ಬೆರೆತು ಬಾಳುವ ಗುಣ. ಬಡವರ ಬಗ್ಗೆ ಅತೀವ ಕಾಳಜಿ ಹೊಂದಿರುವ ಅವರು ತಾಳ್ಮೆಯಿಂದ ಪ್ರತಿಯೊಬ್ಬರನ್ನು ಆಲಿಸುತ್ತಾರೆ. ನುಡಿದಂತೆ ನಡೆವ ಒರ್ವ ಸಜ್ಜನ ರಾಜಕಾರಣಿ ಆಗಿರುವ ಅವರು ಪ್ರತಿಯೊಬ್ಬರಿಗೂ ಸ್ಪಂದಿಸುವ ವಿಶೇಷ ಗುಣವನ್ನು ಹೊಂದಿದ್ದಾರೆ ಎಂದರು.

ಮೌಲಾನ ಹೆಚ್ ಸೂಫಿಯಾನ್ ಸಖಾಫಿ ಮಾತನಾಡಿ ಜನರ ಪ್ರೀತಿ ಸೇವೆಯನ್ನೇ ತಮ್ಮ ಧ್ಯೇಯವಾಗಿಟ್ಟುಕೊಂಡು ಮೊದಲ ಅವಧಿಯಲ್ಲೇ ಮಂತ್ರಿಯಾಗಿರುವುದು ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂದು ಸಮಾಜದಲ್ಲಿ ಜನರು ಮಾನವೀಯತೆಯನ್ನು ಮರೆಯುತ್ತಿದ್ದಾರೆ. ರಸ್ತೆಗಳು ಅಗಲವಾಗುತ್ತಿವೆ ಆದರೆ ಮನುಷ್ಯನ ದೃಷ್ಟಿ ಕಡಿಮೆಯಾಗುತ್ತಿದೆ. ರಸ್ತೆಯಲ್ಲಿ ತೆರಳುವಾಗ ಅಫಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಉಪಚರಿಸುವ ಸೌಜನ್ಯ ಕೂಡ ನಾವೂ ಇಂದು ಮರೆತಿದ್ದೇವೆ. ಇಂದು ಮನುಷ್ಯನನ್ನ ಮನುಷ್ಯ ಬದುಕುಸುವುದನ್ನು ಮರೆಯುತ್ತಿದ್ದಾನೆ. ಪ್ರಮೋದ್ ಮಧ್ವರಾಜರಂತ ಆದರ್ಶ ರಾಜಕಾರಿಣಿಗಳು ಇಂದಿನ ದೇಶಕ್ಕೆ ಅಗತ್ಯವಾಗಿದ್ದು ಅಂತಹವರಿಂದ ದೇಶದ ಉದ್ದಾರ ಸಾಧ್ಯ ಎಂದರು.

ಕೆಎಮ್ ಸಿ ಮಣಿಪಾಲ ಇದರ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರೂ ಆದ ಡಾ ಪದ್ಮರಾಜ್ ಹೆಗ್ಡೆ, ಉಜ್ವಲ್ ಡೆವಲಪರ್ಸ್ ಇದರ ಪುರುಷೋತ್ತಮ್ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version