Home Mangalorean News Kannada News ನವಂಬರ್ 27- ಪಣಂಬೂರು ಬೀಚಿನಲ್ಲಿ ಟ್ರೋಫಿ ಅನಾವರಣ, ಎಂಪಿಎಲ್ ಹಬ್ಬ

ನವಂಬರ್ 27- ಪಣಂಬೂರು ಬೀಚಿನಲ್ಲಿ ಟ್ರೋಫಿ ಅನಾವರಣ, ಎಂಪಿಎಲ್ ಹಬ್ಬ

Spread the love

 

ನವಂಬರ್ 27- ಪಣಂಬೂರು ಬೀಚಿನಲ್ಲಿ ಟ್ರೋಫಿ ಅನಾವರಣ, ಎಂಪಿಎಲ್ ಹಬ್ಬ

ಮಂಗಳೂರು: ನವಮಂಗಳೂರಿನ ಬಿ ಆರ್ ಅಂಬೇಡ್ಕರ್‍ ಕ್ರೀಡಾಂಗಣವು ಹಸಿರು ಹುಲ್ಲನ್ನು ಹೊದ್ದುಕೊಂಡು, ಅಸ್ಟ್ರೋಟರ್ಫ್‍ ಕ್ರಿಕೆಟ್ ಪಿಚ್ಚಿನ ಹೊದಿಕೆಗಾಗಿ ಕಾಯುತ್ತಾ, ಸುತ್ತಲೂ ಅರುವತ್ತು ಅಡಿಗಳೆತ್ತರದ ಟವರ್‍ಗಳಲ್ಲಿ ದೀಪಗಳನ್ನು ಹೊಂದಿ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿ, ಮಂಗಳೂರು ಇದರ ಆಸರೆಯಲ್ಲಿ ರಿಯಲ್‍ಟೆಕ್, ಅಲ್ಮುಝೈನ್, ವೈಟ್‍ಸ್ಟೋನ್ ಕಂಪನಿಗಳ ಸಹಯೋಗಮೊಂದಿಗೆ ಡಿಸೆಂಬರ್ ತಿಂಗಳ ದಿನಾಂಕ 17ರಿಂದ 30ರ ವರೆಗೆ 14 ದಿನಗಳ ಕಾಲ ಜರಗಲಿರುವ ಮಂಗಳೂರು ಪ್ರೀಮಿಯರ್ ಲೀಗ್‍ ಕ್ರಿಕೆಟ್ ಪಂದ್ಯಾಟಕ್ಕೆ ಸಿದ್ಧ ಗೊಳ್ಳುತ್ತಿದೆ. ಎಂಪಿಎಲ್ ಪಂದ್ಯಾಟದ ಪೂರ್ವಭಾಗಿಯಾಗಿ ದಿನಾಂಕ 27 ನವಂಬರ್ 2016ರ ಭಾನುವಾರ ಸಂಜೆ ಗಂಟೆ 4.00 ರಿಂದ ಪಣಂಬೂರು ಸಮುದ್ರ ತೀರದಲ್ಲಿ ಎಂಪಿಎಲ್ ಹಬ್ಬವು ನಡೆಯಲಿದೆ. ಎಂಪಿಎಲ್‍ ಕ್ರಿಕೆಟ್‍ ಕೂಟದಲ್ಲಿ ಉಡುಪಿ-ಕೊಡಗು-ದಕ್ಷಿಣಕನ್ನಡ ಜಿಲ್ಲೆಯ ಕ್ರೀಡಾ ಪ್ರೇಮಿಗಳು ಜಾತಿ-ಧರ್ಮ-ಪಕ್ಷ ಭೇದಗಳೆಲ್ಲವನ್ನು ಮರೆತು ಕ್ರೀಡಾಂಗಣದಲ್ಲಿ ಸೌಹಾರ್ದತೆಯೊಂದಿಗೆ ಒಂದಾಗಿ ಬೆರೆಯಬೇಕು ಮತ್ತದನ್ನು ಅನುದಿನವೂ ಮುಂದುವರಿಸಿಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿಎಂಪಿಎಲ್ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.

mpl-trophyunveil-mangalorean-com

ಭರಪೂರ ಮನೋರಂಜನೆ

ಎಂಪಿಎಲ್ ಹಬ್ಬವು ಪುಟ್ಟ ಮಕ್ಕಳಿಂದ ಹಿಡಿದು ಕುಟುಂಬದ ಎಲ್ಲರೂ ಜತೆಗೂಡಿ ಭಾನುವಾರದ ಸಂಜೆ ಮನೋರಂಜನೆಯೊಂದಿಗೆ ಕಳೆಯುವ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಲಾವಿದರು ಮರಳು ಶಿಲ್ಪ ರಚನೆಯನ್ನು ಮಾಡಲಿದ್ದರೆ, ತಲಾ ಮೂರು ಮಂದಿಯನ್ನು ಹೊಂದಿರುವ ತಂಡಕ್ಕೆ ಮರಳು ಪರ್ವತವನ್ನು ರಚಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಗಾಳಿಪಟ ಹಾರಿಸುವ ಸ್ಪರ್ಧೆಯೂ ಇದ್ದು ಅಗಸದ ಸಂಜೆಯ ರಂಗಿನೊಂದಿಗೆ ಬಣ್ಣದ ಪಟಗಳ ರಂಗುಜತೆ ಸೇರಲಿದೆ. ವಿಕೇಟಿಗೆ ಗುರಿಯೆಸೆತ, ಕೌಟುಂಬಿಕ ಕ್ರಿಕೆಟ್, ಓಡು ಬದಲಾಯಿಸು ಮುಂತಾದ ಆಟದ ಸ್ಪರ್ಧೆಗಳು ಭರಪೂರ ಮನೋರಂಜನೆಯನ್ನು ಒದಗಿಸುವುದಲ್ಲದೆ, ಮನ ರಂಜಿಸುವ ಚಟುಕು ಸ್ಪರ್ಧೆಗಳು ಮನವನ್ನು ಮುದಗೊಳಿಸಲಿದೆ. ಈ ಸ್ಫರ್ಧೆಗಳೆಲ್ಲವೂ ಉಚಿತವಾಗಿದ್ದು ಗೆದ್ದವರು ಆಕರ್ಷಕ ಬಹುಮಾನಗಳ ಒಡೆಯರಾಗಬಹುದಾಗಿದೆ.

ರಾಫ್ಲ್‍ಡ್ರಾ ಐ ಫೋನ್‍ಗೆಲ್ಲುವ ಅವಕಾಶ

ಆಂದಿನ ಹಬ್ಬದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದ್ದು ಬಂದವರೆಲ್ಲರೂ ರಾಫ್ಲ್‍ ಡ್ರಾದಲ್ಲಿ ಭಾಗವಹಿಸುವ ಮೂಲಕ ಐ-ಫೋನ್ ಸೇರಿದಂತೆ ವಿವಿಧ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ಇತರ ಕ್ರೀಡೆಗಳಿಗೆ ಬೆಂಬಲ:

ಕ್ರಿಕೆಟಿಗಿಂತ ಹೊರತಾದ ಕ್ರೀಡೆಗಳಿಗೂ ಉತ್ತೇಜನ ನೀಡುವ ಇರಾದೆ ಎಂಪಿಎಲ್ ಸಂಘಟಕರದ್ದಾಗಿದ್ದು, ಈ ನಿಟ್ಟಿನಲ್ಲಿ ಎಂಪಿಎಲ್‍ನ ಪ್ರತಿಯೊಂದು ಪಂದ್ಯದ ಆರಂಭದಲ್ಲಿ ಓರ್ವ ಪ್ರತಿಭಾವಂತ ಕ್ರೀಡಾಪಟುವನ್ನು ಗುರುತಿಸಿ ಗೌರವಿಸಿ, ಬೆಂಬಲಿಸಿ ಅವರ ಇದುವರೆಗಿನ ಸಾಧನೆ, ಭವಿಷ್ಯದ ಗುರಿಯನ್ನು ನೇರ ಪ್ರಸಾರದಲ್ಲಿ ಪರಿಚಯಿಸಲು ನಿರ್ಧರಿಸಲಾಗಿದೆ.ಈ ಮೂಲಕ ಆ ಕ್ರೀಡಾ ಪಟುಗಳ ಭವಿಷ್ಯದ ಕನಸು ನನಸಾಗಿಸುವಲ್ಲಿ ಸಹಾಯವಾಗಬಹುದೆಂಬ ಆಶಯ ಸಂಘಟಕರದ್ದು. ಈ ಸಂಬಂಧ ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ, ಮಿಂಚಲಿರುವ ಕ್ರಿಕೆಟ್‍ ಆಟದ ಹೊರತಾದ ಉಡುಪಿ-ಕೊಡಗು-ದಕ ಜಿಲ್ಲೆಗಳ ಪ್ರತಿಭೆಗಳ ಬಗ್ಗೆ ತಿಳಿದವರು,

ಮಣಿಪಾಲದಿಂದ ಸೈಕಲ್‍ರ್ಯಾಲಿ

ಎಂಪಿಎಲ್ ಹಬ್ಬವು ಬರಿಯ ಮನೋರಂಜನೆಯನ್ನಲ್ಲದೆ ಸಮಾಜಕ್ಕೆಉತ್ತಮ ಸಂದೇಶಗಳನ್ನು ಹೊತ್ತು ತರಲಿದ್ದು, ಮಣಿಪಾಲದಿಂದ ಪಣಂಬೂರು ಬೀಚಿನವರೆಗೆ, ಉಡುಪಿ-ಮಂಗಳೂರು ಸೈಕಲ್ ಸವಾರರ ದಂಡು ಸೈಕಲಿನಲ್ಲ ಸಾಗುತ್ತಾ ಸ್ವಚ್ಛತೆ ಮತ್ತು ಇಂಧನ ಉಳಿತಾಯದ ಸಂದೇಶಗಳನ್ನು ಕಟಪಾಡಿ- ಶಂಕರಪುರ- ನಂದಿಕೂರು- ಪಡುಬಿದ್ರಿ ಮುಂತಾದ ಹಾದಿಯಲ್ಲಿ ಜನ ಮನದೊಳಗೆ ಬಿತ್ತುತ್ತಾ ಸಾಗಲಿದೆ.  ಮಣಿಪಾಲ ಕೆಎಂಸಿಯ ಬಳಿ ಅಪರಾಹ್ನ 1.00 ಗಂಟೆಗೆಈ ಸೈಕಲ್‍ ರ್ಯಾಲಿಯು ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮವು ಶಂಕರಪುರ ರೋಟರ್ಯಾಕ್ಟ್‍ ಕ್ಲಬ್, ಉಡುಪಿ ಸೈಕ್ಲಿಸ್ಟ್‍ ಕ್ಲಬ್, ಮಣಿಪಾಲ ವಿಶ್ವವಿದ್ಯಾಲಯ ಕ್ರೀಡಾ ಕೌನ್ಸಿಲ್‍ ಇವರ ಸಂಯಕ್ತಆಸರೆಯಲ್ಲಿಜರಗಲಿದೆ.

ಮಂಗಳೂರಿನಿಂದ ಬೈಕ್‍ರ್ಯಾಲಿ

ಅಪರಾಹ್ನ 3.30ಕ್ಕೆ ಮಂಗಳೂರು ನೆಹರೂ ಮೈದಾನದಿಂದ ಹೊರಡುವ ಬೈಕ್‍ ರ್ಯಾಲಿಯಲ್ಲಿ ಎಂಪಿಎಲ್‍ನಲ್ಲಿ ಭಾಗವಹಿಸುವ ಎಲ್ಲ ತಂಡಗಳ ಆಟಗಾರರು, ಮಾಲಕರು, ಕ್ರಿಕೆಟ್ ಪ್ರೇಮಿಗಳು ಪಾಲ್ಗೊಳ್ಳಲಿದ್ದು ಸೌಹಾರ್ದತೆಯ ಸಂದೇಶವನ್ನು ಸಾರುತ್ತಾ ಈ ರ್ಯಾಲಿ ಪಣಂಬೂರು ಸಮುದ್ರತೀರವನ್ನು ಸೇರಲಿದೆ.

ಟ್ರೋಫಿಅನಾವರಣ:

ಕಡಲ ತೀರದಲ್ಲಿ ಸಂಜೆ 5.30ಕ್ಕೆ ಆರಂಭವಾಗಲಿರುವ ಟ್ರೋಫಿ ಅನಾವರಣ ಕಾರ್ಯಕ್ರಮವು ನೃತ್ಯ, ಚಂಡೆವಾದನ, ಸಿಡಿಮದ್ದುಗಳ ಮೂಲಕ ಕಳೆಯೇರಿಸಿಕೊಂಡು ದೇಶ-ವಿದೇಶದ ಗಣ್ಯರ ಸಮ್ಮುಖದಲ್ಲಿ ಅಲುಮುಝೈನ್‍ ಎಂಪಿಎಲ್‍ ಟ್ರೋಫಿಯ ಅನಾವರಣ ನಡೆಯಲಿದೆ.ರಾಫ್ಲ್‍ ಡ್ರಾ ತದನಂತರ ಜರಗಲಿದ್ದು ಎಲ್ಲ ಬಹುಮಾನಗಳನ್ನು ವಿತರಿಸಲಾಗುವದು.


Spread the love

Exit mobile version