ನವೆಂಬರ್ 4 ರಂದು ನರ್ಮ್ ಬಸ್ ಡಿಪೋ ಉದ್ಘಾಟನೆ
ಮ0ಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಲ್ಲಿ ಜವಹರ್ಲಾಲ್ ನೆಹರು ನರ್ಮ್ ಯೋಜನೆಯಲ್ಲಿ ನಿರ್ಮಾಣಗೊಂಡ ನೂತನ ಬಸ್ ಡಿಪೋ ಉದ್ಘಾಟನೆ ನವೆಂಬರ್ 4ರಂದು ನಡೆಯಲಿದೆ.
ಸುಮಾರು ರೂ. 5.93 ಕೋಟಿ ವೆಚ್ಚದಲ್ಲಿ ನಗರದ ಕುಂಟಿಕಾನದಲ್ಲಿ ನಿರ್ಮಾಣವಾಗಿರುವ ಈ ಡಿಪೋವನ್ನು ನ.4ರಂದು ಮಧ್ಯಾಹ್ನ 3ಗಂಟೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್ ಉಪಸ್ಥಿತರಿರಲಿದ್ದು, ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ.