Home Mangalorean News Kannada News ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ

ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ

Spread the love

ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ

ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯುಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ಓಂಖಿಂ-2019) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಪಿ.ಯುಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ.14ರಂದು ನಡೆದ ನಾಟಾ ಪರೀಕ್ಷೆಯಲ್ಲಿ ಆಕಾಂಕ್ಷಾ ವಿ ಎ (160), ರೋಹಿತ್‍ಆರ್ (154), ರಕ್ಷಿತ್ ಆರ್. (150), ಕೇಶವಮೂರ್ತಿ (142), ಲಿಖಿತ್ ಕೆ (142), ಶ್ರೀನಿಧಿ (142), ,ಚಂದನ ಎ.ಎಂ (141), ಮೆಲ್ಬಿನ್ ಅಲೆಕ್ಸ್ (140), ಮೈತ್ರಿ (139), ಪ್ರಿಯಾಂಕ (139), ಪ್ರದ್ಯುಮ್ನ (139), ಆಶಿಶ್ ಎಸ್. (138), ಕವನಾ ಜೆ. (138), ಸಮೀಕ್ಷಾ (136), ಕಾರ್ತಿಕ್‍ಡಿ (136), ವಿಕಾಸ್ ವಿ ಕಷ್ಯಪ್ (134), ವರ್ಷಿಣಿ ಅಗಸಗಿ (132), ರಕ್ಷಿತಾ ಎಂ.ಡಿ. (132), ಪ್ರಜ್ವಲ್ ನಾಯಕ್ (132), ಪ್ರಜ್ವಲ್‍ಎಸ್ (132), ಅನ್ವಿತಿಎನ್‍ಎಚ್ (132), ಪ್ರತೀಕಾ ವಿ (131), ನವ್ಯ ಎಸ್.ಎನ್ (131), ಪುನೀತ್‍ಕುಮಾರ್ ವಿ (130), ಮನೋಜ್ ಎಂ.ಆರ್ (130), ಮನೋಜ್ ಎನ್ (130) ಸೇರಿದಂತೆ ಒಟ್ಟು 26ವಿದ್ಯಾರ್ಥಿಗಳು 130ಕ್ಕಿಂತ ಅಧಿಕ ಅಂಕ ಗಳಿಸಿ ವಿಶಿಷ್ಠ ಸಾಧನೆ ಗಳಿಸಿದ್ದಾರೆ.
ಜೊತೆಗೆ 125ಕ್ಕಿಂತ ಅಧಿಕ 52ವಿದ್ಯಾರ್ಥಿಗಳು, 120ಕ್ಕಿಂತ ಅಧಿಕ87 ವಿದ್ಯಾರ್ಥಿಗಳು, 110ಕ್ಕಿಂತ ಅಧಿಕ 166 ವಿದ್ಯಾರ್ಥಿಗಳು, 100ಕ್ಕಿಂತಅಧಿಕ 265 ವಿದ್ಯಾರ್ಥಿಗಳು, 90ಕ್ಕಿಂತ ಅಧಿಕ 353 ವಿದ್ಯಾರ್ಥಿಗಳು, 80ಕ್ಕಿಂತಅಧಿಕ428 ವಿದ್ಯಾರ್ಥಿಗಳುತೇರ್ಗಡೆಯಾಗಿದ್ದಾರೆ.

ಪರೀಕ್ಷೆಗೆ ಕುಳಿತ 523 ವಿದ್ಯಾರ್ಥಿಗಳಲ್ಲಿ 480 ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಪ್ರಸ್ತುತ ಸ್ಪರ್ಧಾತ್ಮಕಯುಗದಲ್ಲಿ ವಿದ್ಯಾರ್ಥಿಗಳ ನೆಚ್ಚಿನಆಯ್ಕೆಯಾಗಿರುವಆರ್ಕಿಟೆಕ್ಚರ್‍ಕೋರ್ಸ್ ಸೇರಲು ಅತ್ಯಂತ ಸಹಕಾರಿಯಾಗಿದೆ. ಪ್ರತೀ ವರ್ಷ ನಾಟಾ ವಿಭಾಗದಲ್ಲಿ ಸಂಸ್ಥೆಯ ಸಾಧನೆ ಮಹತ್ವದಾಗಿದ್ದು ಹಲವಾರು ವಿದ್ಯಾರ್ಥಿಗಳ ಆರ್ಕಿಟೆಕ್ಟ್ ಆಗುವ ಕನಸು ಯಶಸ್ವಿಯಾಗಿ ಸಾಕಾರಗೊಳ್ಳುತಿದೆ.

ಆಳ್ವಾಸ್‍ನ 326 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ರಾಜ್ಯ ಮಟ್ಟದಲ್ಲಿ ವೈಷ್ಣವಿ ನಾಯಕ್2ನೇಹಾಗು ಶಶಾಂಕ್ ಡಿ5 ನೇ ರ್ಯಾಂಕ್ ಗಳಿಸಿದ್ದರು ಎಂದು ಮೋಹನ ಆಳ್ವ ತಿಳಿಸಿದರು.

ಆಳ್ವಾಸ್ ಪಿಯು ಕಾಲೇಜು ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿಆರ್‍ಒ ಡಾ.ಪದ್ಮನಾಭ ಶೆಣೈ, ನಾಟಾ ಸಂಯೋಜಕರಾದ ಗಣನಾಥ್, ಅಶ್ವತ್ಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love

Exit mobile version