ನಿಟ್ಟೂರು ಒಂಟಿ ಮಹಿಳೆ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಉಡುಪಿ: ನಿಟ್ಟೂರು ವಿಷ್ಣುಮೂರ್ತಿ ನಗರದ ಒಂಟಿ ಮಹಿಳೆ ಮಾಲತಿ ಕಾಮತ್ (68) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಆನಂದ(28) ಹಾಗೂ ಅಶೋಕ್(38) ಬಂಧಿತ ಆರೋಪಿಗಳು.
ಇವರು ಫೆ.12ರಂದು ರಾತ್ರಿ ವೇಳೆ ಒಂಟಿಯಾಗಿ ವಾಸಮಾಡಿಕೊಂಡಿದ್ದ ಮಾಲತಿ ಕಾಮತ್ರ ಮುಖ ಹಾಗೂ ಮೂಗಿನ ಭಾಗಕ್ಕೆ ತಲೆದಿಂಬಿ ನಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಅವರ ಮೈಮೇಲಿದ್ದ ಹಾಗೂ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಮತ್ತು 60,000ರೂ. ಕಳವು ಮಾಡಿದ್ದರು. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಇವರನ್ನು ಖಚಿತ ಮಾಹಿತಿ ಯಂತೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದ ತಂಡ ಹುಬ್ಬಳ್ಳಿಯಲ್ಲಿ ಫೆ.18ರಂದು ಬಂಧಿಸಿ ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿಗಳ ಕೊಲೆ ಮಾಡಿ ದೋಚಿದ ಹಣ,ಸುಮಾರು 7ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊಲೆಯ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷರಾದ ಎನ್ ವಿಷ್ಣುವರ್ಧನ್ ಅವರ ಆದೇಶದಂತೆ ಕುಮಾರ ಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷರಕರು,ಟಿ.ಆರ್.ಜೈ ಶಂಕರ್ ಪೊಲೀಸ್ ಉಪಾಧೀಕ್ಷರು ಇವರ ಮಾರ್ಗದರ್ಶನದಲ್ಲಿ ಉಡುಪಿ ನಗರ ವೃತ್ತ ನಿರೀಕ್ಷಕರಾದ ಸಿ.ಪಿ.ಐ ಮಂಜುನಾಥ್, ಸಿಬ್ಬಂದಿಗಳಾದ ಬಾಲಕೃಷ್ಣ, ಪ್ರದೀಪ್ ಕುಮಾರ್, ಆನಂದ,ಮಾಲತಿ.ಡಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಂಜಪ್ಪ.ಆರ್ ಮತ್ತು ಸಿಬ್ಬಂದಿಗಳಾದ ಪಿ.ಎಸ್.ಐ ರವಿಚಂದ್ರ,ರಾಮು ಹೆಗ್ಡೆ, ರಾಘವೇಂದ್ರ, ಪಿಸಿ ಶಿವಾನಂದ, ಹೆಚ್.ಸಿ,ಶಿವಾನಂದ, ಪಿಎಸ್ಐ ಶೇಖರ್,ಪಿಎಸ್ಐ ಗೋಪಾಲಕೃಷ್ಣ ಜೋಗಿ,ಹೆಚ್.ಸಿ ಲೋಕೇಶ್, ಪಿ.ಸಿ.ಇಮ್ರಾನ್,ಸಂತೋಷ್ ರಾಥೋಡ್ ಹಾಗೂ ಚಾಲಕರಾದ ಆಶೋಕ್ ಅವರು ಕಾರ್ಯಚರಣೆ ಭಾಗವಹಿಸಿದ್ದರು.