Home Mangalorean News Kannada News ನಿರಂತರ ಅಭ್ಯಾಸ, ಅವಿರತ ಪರಿಶ್ರಮ ಹಾಗೂ ನಿರ್ದಿಷ್ಠ ಉದ್ದೇಶದೊಂದಿಗೆ ಮುನ್ನಡೆದರೆ ಯಶಸ್ಸು ಗಳಿಸಲು ಸಾಧ್ಯ”. –...

ನಿರಂತರ ಅಭ್ಯಾಸ, ಅವಿರತ ಪರಿಶ್ರಮ ಹಾಗೂ ನಿರ್ದಿಷ್ಠ ಉದ್ದೇಶದೊಂದಿಗೆ ಮುನ್ನಡೆದರೆ ಯಶಸ್ಸು ಗಳಿಸಲು ಸಾಧ್ಯ”. – ಡಾ. ಪ್ರಕಾಶ್ ಪಿಂಟೊ

Spread the love

ನಿರಂತರ ಅಭ್ಯಾಸ, ಅವಿರತ ಪರಿಶ್ರಮ ಹಾಗೂ ನಿರ್ದಿಷ್ಠ ಉದ್ದೇಶದೊಂದಿಗೆ ಮುನ್ನಡೆದರೆ ಯಶಸ್ಸು ಗಳಿಸಲು ಸಾಧ್ಯ”. – ಡಾ. ಪ್ರಕಾಶ್ ಪಿಂಟೊ

ಮ0ಗಳೂರು :   ಡಾ. ಪಿ. ದಯಾನಂದ ಪೈ- ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ. ಇಲ್ಲಿ ಅಕ್ಟೋಬರ್ 20 ರಂದು ಆಂತರಿಕ ಗುಣಮಟ್ಟ ಭರವಸೆ ಕೋಶ, ಪ್ಲೇಸ್‍ಮೆಂಟ್ ಸೆಲ್ ಹಾಗೂ ವಾಣಿಜ್ಯಶಾಸ್ತ್ರ ಸಂಘ ಜಂಟಿಯಾಗಿ ಏರ್ಪಡಿಸಿದ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಎನ್.ಇ.ಟಿ.)ಯ  ತರಬೇತಿ ಕಾರ್ಯಕ್ರಮದಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಆಡಳಿತ ವ್ಯವಹಾರ ವಿಭಾಗದ ಪ್ರೊಫೆಸರ್ ಹಾಗೂ ಡೀನ್ ಆಗಿರುವಂತಹ ಡಾ. ಪ್ರಕಾಶ್ ಪಿಂಟೊ ಮುಖ್ಯ ಅತಿಥಿಗಳಾಗಿ ಆಗಮಿಸಿ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು ಇದಕ್ಕಾಗಿ ಪೂರಕವಾಗಿರುವಂತಹ ಎಲ್ಲಾ ವಿದ್ಯಾರ್ಹತೆಯನ್ನು ಗಳಿಸಬೇಕು. ಯಾವುದೇ ಸಂಸ್ಥೆಯಲ್ಲಿ  ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬೇಕಾದರೆ ಎನ್.ಇ.ಟಿ. ಪರೀಕ್ಷೆ ಉತ್ತೀರ್ಣವಾಗುವುದು ಅತ್ಯಗತ್ಯ. ಇದು ಕೇವಲ ನಿರಂತರ ಅಭ್ಯಾಸ ಹಾಗೂ ಅವಿರತ ಪರಿಶ್ರಮದಿಂದ ಮಾತ್ರ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ Iಕಿಂಅ ಸಂಯೋಜಕರಾದ ಡಾ. ತೆರೆಸ್ ಪಿರೇರಾ, ಪ್ಲೇಸ್‍ಮೆಂಟ್ ಅಧಿಕಾರಿಗಳಾದ ಪ್ರೊ. ಗೀತಾ ಎಮ್.ಎಲ್, ವಾಣಿಜ್ಯಶಾಸ್ತ್ರ ಸಂಘದ ಸಂಯೋಜಕರಾದ ಪ್ರೊ. ಅಪ್ಪು ಉಪಸ್ಥಿತರಿದ್ದರು. ಕು. ವಿದ್ಯಾ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸ್ಟೀವನ್ ಟೆಲ್ಲಿಸ್, ಶ್ರೀನಿವಾಸ್ ಕಾಲೇಜು ಮಂಗಳೂರು ಹಾಗೂ ಪ್ರೊ. ಅಜಯ್, ಸ.ಪ್ರ.ದ ಕಾಲೇಜು ಮುಡಿಪು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.


Spread the love

Exit mobile version