ನಿರಂತರ ಮಳೆ ಸಾಸ್ತಾನದಲ್ಲಿ ಕೃತಕ ನೆರೆ ಸೃಷ್ಠಿ
ಕೋಟ: ನಿರಂತರವಾಗಿ ಸುರಿದ ಮಳೆಯ ಹಿನ್ನಲೆಯಲ್ಲಿ ಸಾಸ್ತಾನ ಮೀನು ಮಾರುಕಟ್ಟೆಯ ಪರಿಸರ ಮತ್ತು ಕೋಡಿ ಮೀನುಗಾರಿಕಾ ಜಟ್ಟಿ ಸಂಪರ್ಕ ರಸ್ತೆಯಲ್ಲಿ ಕೃತಕ ನೆರೆ ಸೃಷ್ಠಿಯಾಯಿತು. ಸ್ಥಳೀಯಾಡಳಿತ ಈ ಕುರಿತು ಮುಂಜಾಗ್ರತೆ ವಹಸದ ಹಿನ್ನಲೆ ಶನಿವಾರ ಮತ್ತೆ ಮಳೆ ನೀರು ನಿಂತು ನೆರೆ ಸೃಷ್ಟಿಯಾಗಿದೆ.
ಎರಡು ದಿನಗಳಿಂದ ಬಲು ಜೋರಾಗಿ ಸುರಿದ ಮಳೆಯ ಹಿನ್ನಲೆ ಸಮರ್ಪಕ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನಿಂತು ಸ್ಥಳೀಯರು ಅವಸ್ಥೆ ಪಡುವಂತಾಯಿತು. ಕೋಡಿಗೆ ತೆರಳಬೇಕಾದ ರಿಕ್ಷಾ ಮತ್ತು ವಾಹನ ಚಾಲಕರು ರಸ್ತೆ ಮಧ್ಯೆ ನಿಂತಿರುವ ನೀರಿನ ಹೊಳೆಯಲ್ಲಿ ಸಾಗಿ ಬಂದರೆ, ಪಾದಚಾರಿಗಳು ಸಂಕಷ್ಟಪಡುವಂತಾಯಿತು. ಇದಲ್ಲದೇ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಹಿಳೆಯರು ನೀರು ತುಂಬಿದ ಜಾಗದಲ್ಲಿಯೇ ತೆಲುತ್ತಿರುವ ಮೀನಿನ ಬುಟ್ಟಿಯಲ್ಲಿ ವ್ಯಾಪಾರ ನಿರತರಾದ ದೃಶ್ಯ ಕಂಡು ಬಂತು.