ನಿಲ್ಲಿಸಿದ್ದ ರಿಕ್ಷಾ ಚಲಿಸಿ ಬಾವಿಗೆ ಬಿದ್ದು ಮಗು ಮೃತ್ಯು
ಬೆಳ್ತಂಗಡಿ: ನಿಲ್ಲಿಸಿದ್ದ ರಿಕ್ಷಾವೊಂದು ಆಕಸ್ಮಿಕವಾಗಿ ಚಲಿಸಿ ಬಾವಿಗೆ ಬಿದ್ದ ಪರಿಣಾಮ ರಿಕ್ಷಾದಲ್ಲಿ ಕುಳಿತಿದ್ದ ಮಗುವೊಂದು ಮೃತಪಟ್ಟ ದಾರುಣ ಘಟನೆ ಚಾರ್ಮಾಡಿಯ ಮತ್ತೂರು ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ನಿವಾಸಿ ಖಲಂದರ್ ಎಂಬವರ ಪುತ್ರ ಮೂರೂವರೆ ವರ್ಷದ ಖಲೀಲ್ ಮೃತಪಟ್ಟ ಮಗುವಾಗಿದೆ.
ಮಗುವನ್ನು ರಿಕ್ಷಾದಲ್ಲಿ ಕುಳ್ಳಿರಿಸಿ ಖಲಂದರ್ ಅವರು ಅಲ್ಲೇ ಪಕ್ಕದಲ್ಲಿರುವ ಅಂಗನವಾಡಿಯಿಂದ ಉಳಿದ ಮಕ್ಕಳನ್ನು ಕರೆತರಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.