ನೀಟ್-ಸಿಇಟಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರ
ಮಂಗಳೂರು: ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ನೀಟ್/ಸಿಇಟಿ ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರ ಆಯೋಜಿಸಿದೆ.
ಅ.17ರಂದು ಬೆಳಗ್ಗೆ 10ಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತ ಸಮೀಪದ ನೆಲ್ಲಿಕಾಯಿ ರಸ್ತೆ, ಆಲ್ ರಹಬಾ ಪ್ಲಾಜಾದಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಶಿಬಿರ ನಡೆಯಲಿದ್ದು, ಕರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ನ ಸ್ಥಾಪಕಾಧ್ಯಕ್ಷ ಉಮರ್ ಯು. ಹೆಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋಪಥಿ, ನ್ಯಾಚುರೊಪಥಿ-ಯೋಗ, ಫಾರ್ಮ್ ಸಾಯನ್ಸ್, ಫಾರ್ಮಸಿ, ಇಂಜಿನಿಯರಿಂಗ್ ಮತ್ತಿತರ ಕೋರ್ಸುಗಳಿಗೆ ನಡೆಯಲಿರುವ ಆನ್ ಲೈನ್ ನೀಟ್/ಸಿಇಟಿ ಕೌನ್ಸಿಲಿಂಗ್ ನ ವಿಧಾನ, ದಾಖಲೆಗಳ ಪರಿಶೀಲನೆ, ಬೇಕಾಗಿರುವ ಅಗತ್ಯ ದಾಖಲೆಗಳು, ಸೀಟುಗಳ ಆಯ್ಕೆ ಪ್ರಕ್ರಿಯೆ ಮತ್ತು ಪಿಯುಸಿ ಬಳಿಕ ಕಲಿಕೆಗಿರುವ ಅವಕಾಶಗಳ ಕುರಿತಂತೆ ಮಾಹಿತಿ ನೀಡಲಾಗುವುದು.
ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ವಿದ್ಯಾರ್ಥಿಗಳು ಮತ್ತು ಪಾಲಕರ ತಂಡಕ್ಕೆ ಮಾತ್ರ ಶಿಬಿರದಲ್ಲಿ ಭಾಗವಹಿಸುವ ಅವಕಾಶವಿದ್ದು, ನೋಂದಾವಣೆ ಕಡ್ಡಾಯ. ಆಸಕ್ತರು ಗೂಗಲ್ ಫಾರ್ಮ್ rb.gy/vj9nqe ಭರ್ತಿ ಮಾಡಿ ಅಥವಾ ದೂ. ಸಂ. 0824-4261320, 9845054191ಗೆ ಕರೆಮಾಡಿ, ನೋಂದಾವಣೆ ಮಾಡಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.