ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನೆ

Spread the love

ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನೆ

ಮಂಗಳೂರು :ಆರ್.ಐ.ಡಿ.ಎಫ್.-22 ರಡಿ ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ಮಂಗಳೂರು ನಗರದ ಕೊಡಿಯಾಲ್ ಬೈಲ್‍ನ ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ಫೆಬ್ರವರಿ 28 ರಂದು ನಗರಾಭಿವೃದ್ಧಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಇವರ ಘನ ಉಪಸ್ಥಿತಿಯಲ್ಲಿ ನೆರವೇರಿತು.

ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದ ಸಚಿವರು ಮಂಗಳೂರು ನಗರದ ಹೃದಯಭಾಗದಲ್ಲಿ ರೂ. 210.00 ಲಕ್ಷದಲ್ಲಿ ಪಾಲಿಕ್ಲಿನಿಕ್ (ಪಶು ಆಸ್ಪತ್ರೆ) ಕಟ್ಟಡ ನಿರ್ಮಾಣವಾಗಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜಾನುವಾರುಗಳಿಗೆ ಅತ್ಯುನ್ನತ ಚಿಕಿತ್ಸೆ ದೊರೆಯಲು ಸಹಕಾರಿಯಾಗಲಿದೆ. ಅಲ್ಲದೆ ಈ ಪಾಲಿಕ್ಲಿನಿಕ್‍ನಲ್ಲಿ ಜಾನುವಾರುಗಳಿಗೆ ಎಕ್ಸ್‍ರೇ ಮತ್ತು ಸ್ಕ್ಯಾನಿಂಗ್ ಸೌಲಭ್ಯವಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲಕರವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ, ಶಾಸಕ ಡಿ ವೇದವ್ಯಾಸ್ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಹಾಪೌರರು ಮಹಾನಗರ ಪಾಲಿಕೆ, ಮಂಗಳೂರು ಭಾಸ್ಕರ ಕೆ, ಅಧ್ಯಕ್ಷರು ಕೃ.&.ಕೈ.ಸ್ಥಾ.ಸಮಿತಿ ಯು.ಪಿ. ಇಬ್ರಾಹಿಂ, ಸದಸ್ಯರು ಮಹಾನಗರ ಪಾಲಿಕೆ, ಪ್ರಕಾಶ್ ಬಿ ಸಾಲಿಯಾನ್, ಹಾಗೂ ಜಂಟಿ ನಿರ್ದೇಶಕರು ಡಾ. ದೇವದಾಸ್, ಉಪ ನಿರ್ದೇಶಕರು (ಆಡಳಿತ), ಡಾ. ಎಸ್. ಮೋಹನ್, ಉಪ ನಿರ್ದೇಶಕರು, ಡಾ. ರಘುರಾಮ ಭಟ್, ಪಾಲಿಕ್ಲಿನಿಕ್, ಪಶುಪಾಲನಾ ಇಲಾಖೆ ಮತ್ತು ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love