ನೃತ್ಯದ ಮೂಲಕ ಬಾಲರಾಮನನ್ನು ಸ್ವಾಗತಿಸಿದ ಉಡುಪಿಯ ಪುಟಾಣಿಗಳು
ಉಡುಪಿ: ರಾಷ್ಟ್ರದೆಲ್ಲೆಡೆ ಬಾಲರಾಮನ ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳು ಕಾತರದಿಂದ ಜನ ಕಾಯುತ್ತಿದ್ದಾರೆ. ಕಾರ್ಯಕ್ರಮಕ್ಕೆ ಶುಭಾಶಯವೇ ಹರಿದು ಬರುತ್ತಿದ್ದು, ಉಡುಪಿಯ ಪುಟಾಣಿಗಳಿಬ್ಬರು ರಾಮನ ಹೆಸರಲ್ಲಿ ಹೂವಿನಲ್ಲಿ ಬರೆದು ನೃತ್ಯದ ಮೂಲಕ ಬಾಲರಾಮನನ್ನು ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿಯ ವಾಸಿಯಾಗಿರುವ ಮೂರನೇ ತರಗತಿಯ ಆಶ್ವಿ ಶೆಟ್ಟಿ ಹಾಗು ಎರಡನೇ ತರಗತಿಯ ಐಸಿರಿ ಶೆಟ್ಟಿ ಪುಟಾಣಿಗಳು ತಮ್ಮ ಮನೆಯಲ್ಲಿ “ರಾಮ್” ಎಂದು ಹಿಂದಿಯಲ್ಲಿ ಸೇವಂತಿಗೆ ಹೂವಿನಲ್ಲಿ ಬರೆದಿದ್ದಾರೆ. ಅದರ ಮುಂದೆ ನೃತ್ಯ ಮಾಡಿ ಬಾಲ ರಾಮನ ಪ್ರಾಣ ಪ್ರತಿಷ್ಠೆಗೆ ಸ್ವಾಗತ ಕೋರಿದ್ದಾರೆ.
ನೃತ್ಯದಲ್ಲಿ ಆಸಕ್ತಿಯಿರುವ ಪುಟಾಣಿಗಳಿಬ್ಬರು ನಗರದ ಅಂಬಲಪಾಡಿಯಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಎಲ್ಲೆಡೆ ರಾಮ ಮಂದಿರದ ಕುರಿತಾಗಿ ಬರುತ್ತಿರುವ ವಿಡಿಯೋವನ್ನು ಗಮನಿಸಿದ ಪುಟಾಣಿಗಳು, ತಾವು ನೃತ್ಯದ ಮೂಲಕ ರಾಮನನ್ನು ಸ್ವಾಗತಿಸಿದ್ದಾರೆ.
ಟಿವಿ ನ್ಯೂಸ್ ನಲ್ಲಿ, ದಿನಪತ್ರಿಕೆಗಳಲ್ಲಿ ರಾಮ ಮಂದಿರದ ಕುರಿತಾಗಿ ಓದುತ್ತಿದ್ದೇವೆ. ಮನೆಯಲ್ಲಿ ಹಿರಿಯರು ರಾಮನ ಕಥೆಗಳನ್ನು ಹೇಳುತ್ತಿರುತ್ತಾರೆ. ಈಗ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ನಿರ್ಮಾಣವಾಗುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆ ಎನ್ನುತ್ತಾರೆ ಆಶ್ವಿ ಶೆಟ್ಟಿ ಮತ್ತು ಐಸಿರಿ ಶೆಟ್ಟಿ