ನೆರೆಮನೆಯಿಂದಲೇ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ದ ಪೊಲೀಸರು
ಬಂಟ್ವಾಳ: ಸುಮಾರು 4 ವರ್ಷದಿಂದೀಚೆ ಬಂಟ್ವಾಳ ತಾಲೂಕು ಮೇರೆಮಜಲು ಗ್ರಾಮದ ಅಬ್ಬೆಟ್ಟು ಪರಿಸರದ ಮತ್ತು ಸಂಬಂದಿಕರ ಮನೆಯಿಂದ ಚಿನ್ನಾಭರಣ ಮತ್ತು ನಗದು ಕಳವು ಆದ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಶಾಂತ್ ಪೂಜಾರಿ @ ಜಡ್ಡು ಪ್ರಾಯ 32 ವರ್ಷ, ತಂದೆ:ಚೆನ್ನಪ್ಪ ಪೂಜಾರಿ, ವಾಸ:ಅಬ್ಬೆಟ್ಟು ಮನೆ, ಮೇರಮಜಲು ಗ್ರಾಮ. ಬಂಟ್ವಾಳ ತಾಲೂಕು. ಈ ಮೇಲಿನ ಆರೋಪಿಯು 2014 ನೇ ಇಸವಿಯಲ್ಲಿ ಮೇರೆಮಜಲು ಗ್ರಾಮದ ಅಬ್ಬೆಟ್ಟು ರಮೇಶ್ ಪೂಜಾರಿ ಎಂಬವರ ಮನೆಯ ಹಿಂಬದಿಯ ಕಿಟಕಿಯ ರೀಪನ್ನು ತುಂಡರಿಸಿ ಒಳಗೆ ಹೋಗಿ ಒಳ ಪ್ರವೇಶಿಸಿ ಮನೆಯ ಒಳಗೆ ಗೋದ್ರೇಜಿನಲ್ಲಿ ಇರಿಸಿದ್ದ ಸುಮಾರು 3 ಕಾಯಿನ್ ಗೋಲ್ಡ್ 4 ಗ್ರಾಂನ ಬೆಂಡೋಲೆ ನಗದು ರೂ.25,00/-. 2 ವರ್ಷದ ಹಿಂದೆ ಅಬ್ಬೆಟ್ಟು ಹೊಸ ಹೊಕ್ಲು ರಮೇಶ ಎಂಬವರು ಮನೆಯ ಬೀಗದ ಕೀಯಿಂದ ಬೀಗವನ್ನು ತರೆದು ಮನೆಯ ಒಳಗೆ ಪ್ರವೇಶಿಸಿ ಕಪಾಟಿನ ಒಳಗೆ ಇಟ್ಟದ್ದ ಚಿನ್ನಾಭರಣ 52 ಗ್ರಾಂ. ನಗದು ರೂ 15,000/-. ಅಬ್ಬೆಟ್ಟು ಶ್ರೀಮತಿ ಹರಿಣಾಕ್ಷಿರವರ ಮನೆಯಿಂದ 16 ಗ್ರಾಂ ಚಿನ್ನ. 2016 ನೇ ಇಸವಿಯಲ್ಲಿ ಮೇರೆಮಜಲು ಗ್ರಾಮದ ಕಂಬಳಕೋಡಿ ಅಬ್ಬೆಟ್ಟು ಶ್ರೀಮತಿ ಸುನೀತಾ ರವರ ಮನೆಯ ಬೀಗವನ್ನು ಮುರಿದು ಮನೆಯ ಒಳಗಡೆ ಹೋಗಿ ಕಪಾಟಿನಲ್ಲಿದ್ದ ಚಿನ್ನಾಭರಣ 20 ಗ್ರಾಂ. ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಆರೋಪಿಯ ಚಿಕ್ಕಮ್ಮ ಶ್ರೀಮತಿ ಚಿತ್ರಾಕ್ಷಿರವರ ಮನೆಯ ಚಿನ್ನಾಭರಣ11 ಗ್ರಾಂ. ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಮದ್ಯಾಹ್ನ ಆರೋಪಿಯ ಚಿಕ್ಕಮ್ಮನ ಮಗ ಚೇತನ್ ರವರ ಚಿನ್ನದ ಚೈನ್ ಕಳವು 12 ಗ್ರಾಂ.
ಈ ಪ್ರಕರಣದಲ್ಲಿ ಪತ್ತೆ ಹಚ್ಚುವರೇ ಶ್ರೀ ರವಿಕಾಂತೆಗೌಡ ಮಾನ್ಯ ಪೊಲೀಸು ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ರವರ ನಿರ್ದೇಶನ, ಶ್ರೀ ಸಜಿತ್ ಹೆಚ್ಚುವರಿ ಪೊಲೀಸು ಅಧೀಕ್ಷಕರು ದ.ಕ ಜಿಲ್ಲೆ ರವರ ಮಾರ್ಗದರ್ಶನ, ಶ್ರೀ ಋಪಿಕೇಶ್ ಸೊನವಾಣ ಸಹಾಯಕ ಪೊಲೀಸು ಅಧೀಕ್ಷಕರು ಬಂಟ್ವಾಳ ಉಪ ವಿಭಾಗ, ಶ್ರೀ T D ನಾಗರಾಜ್ ಪೊಲೀಸು ವೃತ್ತ ನಿರೀಕ್ಷಕರು ಬಂಟ್ವಾಳ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸು ಠಾಣಾ ಪೊಲೀಸು ಉಪ ನಿರೀಕ್ಷಕರಾದ ಪ್ರಸನ್ನ ಎಂ.ಎಸ್, ಬೀಟ್ ಉಸ್ತುವಾರಿ ಸಹಾಯಕ ಪೊಲೀಸು ಉಪ ನಿರೀಕ್ಷಕರಾದ ರತ್ನ ಕುಮಾರ್, ಠಾಣಾ ಎಸ್.ಬಿ. ಹೆಡ್ ಕಾನ್ಟೇಬಲ್ ಜನಾರ್ಧನ, ಹೆಚ್.ಸಿ ಸುರೇಶ್ ಕುಮಾರ್, ಬೀಟ್by ಸಿಬ್ಬಂದಿ ಹೆಚ್.ಸಿ ಜಯರಾಮ ಕೆ.ಟಿ. ಹೆಚ್.ಸಿ ರಾಧಾಕೃಷ್ಣ, ಪಿ.ಸಿ ಮನೋಜ್ ಕುಮಾರ್, ಪಿ.ಸಿ ಅಬ್ದುಲ್ ನಝೀರ್ ಮತ್ತು ಜೀಪು ಚಾಲಕ ಕಿರಣ್ ರವರು ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ.