Home Mangalorean News Kannada News ನೆರೆ ಭೀತಿಯ ತಗ್ಗು ಪ್ರದೇಶಗಳಿಗೆ ಮಧ್ಯರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿ ಹೆಪ್ಸಿಬಾ ರಾಣಿ

ನೆರೆ ಭೀತಿಯ ತಗ್ಗು ಪ್ರದೇಶಗಳಿಗೆ ಮಧ್ಯರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿ ಹೆಪ್ಸಿಬಾ ರಾಣಿ

Spread the love

ನೆರೆ ಭೀತಿಯ ತಗ್ಗು ಪ್ರದೇಶಗಳಿಗೆ ಮಧ್ಯರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿ ಹೆಪ್ಸಿಬಾ ರಾಣಿ

ಉಡುಪಿ: ಜಿಲ್ಲೆಯಲ್ಲಿ ಭಾರೀ ಮಳೆ ಬೀಳುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ಜನ ಜೀವನ ತೊಂದರೆಗಳಗಾಗುವ ಸಾಧ್ಯತೆ ಕಾರಣ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು , ಶುಕ್ರವಾರ ಮಧ್ಯರಾತ್ರಿ 12.30 ರಿಂದ 2.30 ರ ವರೆಗೆ , ಬ್ರಹ್ಮಾವರ ತಾಲೂಕು ವ್ಯಾಪ್ತಿಯ ತಗ್ಗು ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪ್ಪೂರು, ಕುದ್ರುಬೆಟ್ಟು, ನಡುಬೆಟ್ಟು, ಬಾವಲಿಕುದ್ರು ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಈ ಪ್ರದೇಶಗಳು ತಗ್ಗು ಪ್ರದೇಶದಲ್ಲಿದ್ದು , ಭಾರೀ ಮಳೆಯಿಂದ ನರೆ ಪೀಡಿತವಾಗುವ ಸಾದ್ಯತೆಗಳಿದ್ದು, ಇಲ್ಲಿನ ಜನರ ಜೊತೆ ಸಂಪರ್ಕವಿಟ್ಟುಕೊಂಡು , ನೆರೆ ಸಂದರ್ಭದಲ್ಲಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಅಗತ್ಯ ಉಪಕರಣಗಳು ಹಾಗೂ ಪರಿಹಾರ ಸಾಮಗ್ರಿಗಳನ್ನು ಸಿದ್ದವಾಗಿಟ್ಟುಕೊಂಡಿರುವಂತೆ ಬ್ರಹ್ಮಾವರ ತಹಸೀಲ್ದಾರ್ ಅವರಿಗೆ ಸೂಚಿಸಿದರು.

ನಂತರ ಬ್ರಹ್ಮಾವರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿಯಲ್ಲಿ ತೆರೆದಿರುವ 24*7 ಸಹಾಯನೀಡುವ ಕಂಟ್ರೋಲ್ ರೂಂ ಪರಿಶೀಲಿಸಿ, ಎಲ್ಲಾ ಸಿಬ್ಬಂದಿಗಳು ಕರ್ತವ್ಯದಲ್ಲಿ ತೊಡಗಿದ್ದು, ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿರುವ ಕಾರಣ , ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಎಲ್ಲಾ ಸಿಬ್ಬಂದಿಗಳು ಸನ್ನದ್ದರಿರುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಪಿ ನಿಷಾ ಜೇಮ್ಸ್, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ನೀರೀಕ್ಷಕರು, ಗ್ರಾಮ ಲೆಕ್ಕಿಗರು ಉಪಸ್ಥಿತರಿದ್ದರು.


Spread the love

Exit mobile version