ನೆಲಮಂಗಲದಲ್ಲಿ ಅಫಘಾತ; ಕಟೀಲು ಅರ್ಚಕ ಅಸ್ರಣ್ಣರ ಮಗ ದುರ್ಮರಣ
ಬೆಂಗಳೂರು: ನೆಲಮಂಗಲ ಸಮೀಪದ ತಾವರೆಕೆರೆ ಬಳಿ ನಡೆದ ಕಾರು ಅಪಘಾತಕ್ಕೆ ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಶ್ರೀನಿಧಿ ಅಸ್ರಣ್ಣ (21) ಮತ್ತು ತುಮಕೂರು ಮೂಲದ ಪ್ರಜ್ವಲ್ (20) ಮೃತಪಟ್ಟಿದ್ದಾರೆ.
ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.