ನೆಹರೂ ಯುವ ಕೇಂದ್ರದಿಂದ ಕ್ರೀಡಾ ಸಚಿವರಿಗೆ ಸ್ವಾಗತ
ಮಂಗಳೂರು : ಕೇಂದ್ರ ಸರಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಕಿರಣ್ ರಿಜಿಜ್ಜು ಅವರು ಮಂಗಳೂರಿಗೆ ಆಗಮಿಸಿದಾಗ ಮಂಗಳೂರು ನೆಹರೂ ಯುವಕೇಂದ್ರ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಮಂಗಳೂರು ನೆಹರೂ ಯುವಕೇಂದ್ರ ಚಟುವಟಿಕೆಗಳ ಬಗ್ಗೆ ಸಚಿವರು ಮೆಚ್ಚುಗೆ ಸೂಚಿಸಿದರು. ನಿಯೋಗದಲ್ಲಿ ನೆಹರೂ ಯುವಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟೆಪೇಟೆ, ಎನ್ವೈಕೆ ಅಧಿಕಾರಿಗಳಾದ ಜಗದೀಶ್, ವಿಕಾಸ್, ಅಂತರಾಷ್ಟ್ರೀಯ ಯುವ ಸಾಧಕರಾದ ನೇರನ್ಸ, ದ.ಕ ಯುವಜನ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು, ಯುವ ನಾಯಕರಾದ ಪ್ರಥ್ವಿ ರಾಜ್ ಮತ್ತಿತರರು ಉಪಸ್ಥಿತರಿದ್ದರು.